ಬೆಳಗಾವಿ : ಸಚಿವ ಉಮೇಶ್ ಕತ್ತಿ ಬಿಪಿಎಲ್ ಕಾರ್ಡುದಾರರಿಗೆ ಪೌಷ್ಟಿಕಾಂಶ ತುಂಬಿರುವ ಅಕ್ಕಿ ವಿತರಣೆ ಮಾಡುವ ಬಗ್ಗೆ ತಿಳಿಸಿದ್ದಾರೆ. ಹೆಚ್ಚು ಪೋಷ್ಟಿಕತೆ ಹೊಂದಿರುವ ಫೋರ್ಟಿಫೈಡ್ ಅಕ್ಕಿ ವಿತರಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಅಕ್ಕಿಯಲ್ಲಿ ಐರನ್ ಕಂಟೆಂಟ್, ವಿಟಮಿನ್ 12, ಫೋಲಿಕ್ ಆ್ಯಸಿಡ್ ಅಂಶ ಹೆಚ್ಚಾಗಿದೆ.
ಈ ಬಗ್ಗೆ ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಮಾತನಾಡಿರುವ ಸಚಿವ ಉಮೇಶ್ ಕತ್ತಿ, ಬಡ ಕುಟುಂಬಗಳಿಗೆ ಏಪ್ರಿಲ್ 1ರಿಂದ ಪೊರ್ಟಿಫೈಡ್ ಅಕ್ಕಿ ವಿತರಣೆ ಮಾಡಲಾಗುವುದು. ಪ್ರಾಯೋಗಿಕವಾಗಿ ಪೋರ್ಟಿಫೈಡ್ ಅಕ್ಕಿ ವಿತರಿಸಲಾಗುವುದು. ಮೊದಲಿಗೆ ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ವಿತರಿಸಲಾಗುವುದು. ಬಳಿಕ ರಾಜ್ಯಾದ್ಯಂತ ಪೊರ್ಟಿಫೈಡ್ ರೈಸ್ ವಿತರಣೆ ಮಾಡಲಾಗುವುದು
ತಮಿಳುನಾಡು, ಆಂಧ್ರಪ್ರದೇಶದಲ್ಲಿ ಯೋಜನೆ ಯಶಸ್ವಿಯಾಗದ ಹಿನ್ನೆಲೆ, ಈಗಿರುವ ಪಡಿತರ ಅಂಗಡಿಗಳ ಮೂಲಕವೇ ವಿತರಣೆ ಮಾಡಲಾಗುವುದು ಎಂದಿದ್ದಾರೆ. ಆದ್ರೆ ಒಬ್ಬರಿಗೆ ಎಷ್ಟು ಕೆಜಿ ಕೊಡ್ತಾರೆ, ಹೇಗೆ ವಿತರಣೆ ಮಾಡ್ತಾರೆ ಅನ್ನೋ ಮಾಹಿತಿ ನೀಡಿಲ್ಲ. ಸದ್ಯ ರಾಜ್ಯ ಸರ್ಕಾರದ ಅಕ್ಕಿ ಭಾಗ್ಯದಿಂದ ಒಬ್ಬರಿಗೆ ಐದು ಕೆಜಿ ನಾರ್ಮಲ್ ಅಕ್ಕಿ ನೀಡಲಾಗುತ್ತಿದೆ.