ರಷ್ಯಾ ಕಳೆದೊಂದು ವಾರದಿಂದ ನಡೆಸುತ್ತಿರುವ ಯುದ್ಧದಿಂದ ಉಕ್ರೇನ್ ನ ಹಲವು ಕ್ಷಿಪಣಿ ವಶಪಡಿಸಿಕೊಂಡಿದೆ. ಈ ಹಿನ್ನೆಲೆ ಉಜ್ರೇನ್ ದೇಶ ತತ್ತರಿಸಿ ಹೋಗಿದೆ.
ಈಗಾಗಲೇ ಹಲವು ನಗರಗಳು ರಷ್ಯಾ ವಶವಾಗಿವೆ. ರಷ್ಯಾ ಮೊದಲಿಗೆ ಉಕ್ರೇನ್ ನ ವಾಯುಪಡೆಯನ್ನ ನಿರ್ನಾಮ ಮಾಡಿದೆ. ಯುದ್ಧ ಮಾಡದ ಸ್ಥಿತಿಗೆ ತೆಗೆದುಕೊಂಡು ಹೋಗಿದೆ. ವಾಯುನೆಲೆಗಳು, ರನ್ ವೇ ಗಳನ್ನ ಸಂಪೂರ್ಣವಾಗಿ ಧ್ವಂಸ ಮಾಡಿದೆ. ರಷ್ಯಾದ ಭೂಸೇನೆ ಅನೇಕ ನಗರಗಳ ಮೇಲೆ ದಾಳಿ ನಡೆಸಿದೆ.
ಯುದ್ಧದಿಂದ ದೇಶ ಕಾಪಾಡಿಕೊಳ್ಳಲು ಉಕ್ರೇನ್ ನ ಸಾಮಾನ್ಯ ಜನ ಕೂಡ ಯುದ್ಧ ಭೂಮಿಯಲ್ಲಿದ್ದಾರೆ. ಮಹಿಳೆಯರು ಕೂಡ ಯುದ್ಧ ನಡೆಸುತ್ತಿದ್ದಾರೆ. ರಷ್ಯಾ ಮುಖ್ಯವಾಗಿ ಕೀವ್ ನಗರದ ಮೇಲೆ ಕಣ್ಣಿಟ್ಟಿದೆ. ಈ ಕೀವ್ ನಗರವನ್ನ ರಷ್ಯಾ ವಶಪಡಿಸಿಕೊಂಡ್ರೆ ಕಷ್ಟಕರವಾಗುತ್ತೆ. ಉಕ್ರೇನ್ ಗೆ ಈ ಪ್ರದೇಶ ತುಂಬಾ ಮುಖ್ಯವಾಗಿದೆ. ಹೀಗಾಗಿ ಸಾಕಷ್ಟು ಪ್ರಯತ್ನ ಮಾಡ್ತಿದೆ ಉಕ್ರೇನ್ ಕೂಡ.
ಕೀವ್ ನಗರದ ಮೇಲೆ ಆಕ್ರಮಣ ಮಾಡಲು, ರಷ್ಯಾ ಸೇನೆ ದಕ್ಷಿಣ ಭಾಗದಿಂದ ಈಗಾಗಲೇ ನುಗ್ಗುತ್ತಿದೆ. ಮೆಲಿಟಪೋಲ್ ನಗರದ ಕಡೆ ಹೋಗ್ತಿದೆ. ರಸ್ತೆಯುದ್ಧಕ್ಕೂ ರಷ್ಯಾ ಸೇನೆ ಕ್ಯೂ ನಿಂತಿದೆ. ಟ್ಯಾಂಕರ್ ಗಳು ಕ್ಯೂ ನಿಂತಿದೆ. ಕೀವ್ ನಗರಕ್ಕೆ ದಾಂಗುಡಿ ಇಡಲು ಪ್ರಯತ್ನಿಸುತ್ತಿದೆ.