ಕೊರೊನಾದಿಂದ ಜೀವನ್ಮರಣದ ನಡುವೆ ಹೋರಾಡಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನ ಹೊಂದಿದ್ದಾರೆ. ಅವರ ನಿಧನ ಸಂಗೀತ ಕ್ಷೇತ್ರಕ್ಕೆ ನಷ್ಟವನ್ನುಂಟು ಮಾಡಿದೆ. ಅವರು ನಮ್ಮೊಂದಿಗಿಲ್ಲ ಎಂಬ ನೋವಿನ ಜೊತೆಗೆ ಅವರು ಹಾಡಿರುವ ಸಾವಿರಾರು ಹಾಡುಗಳು ಅವರನ್ನ ನೆನಪಿಸುತ್ತಿದೆ. ಅವರನ್ನ ಆರಾಧಿಸುವವರ ಸಂಖ್ಯೆ ಹೆಚ್ಚಿದೆ.
ಇದೀಗ ಲತಾ ಮಂಗೇಶ್ಕರ್ ಅವರ ದೇವಾಲಯ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಲತಾ ದೀದಿ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ, ರಾಜ್ ಕೋಟ್ ನ ಗಾಯಕ ಭೂಪೇಂದ್ರ ಅವರು ಇಂಥದ್ದೊಂದು ಅದ್ಭುತ ಕೆಲಸಕ್ಕೆ ಕೈ ಹಾಕಲಿದ್ದಾರೆ.
ಮುಂದಿನ ಆರೆರ ತಿಂಗಳಲ್ಲಿ ಈ ಕೆಲಸ ಮಾಡಿಮುಗಿಸಲು ನಿರ್ಧರಿಸಿದ್ದಾರೆ. ಲತಾ ಮಂಗೇಶ್ಕರ್ ಅವರ ಜೊತೆ ಹತ್ತಿರದ ಬಾಂಧವ್ಯ ಹೊಂದಿದ್ದವರು, ಲತಾ ದೀದಿ ಎಲ್ಲರನ್ನ ಅಗಲಿದ್ದಾರೆ. ಹೀಗಾಗಿ ಅವರ ಗುಡಿ ಕಟ್ಟಿ, ಅವರ ನೆನಪನ್ನ ಹಸಿರಾಗಿಡಲು ಹೊರಟಿದ್ದಾರೆ. ದೇವಸ್ಥಾನದಲ್ಲಿ ಅವರ ಪ್ರತಿಮೆಯನ್ನು ಕಟ್ಟಿಸಿ, ಈ ಮೂಲಕ ಅವರಿಗೆ ಗೌರವ ಸಲ್ಲಿಸಲಿದ್ದಾರೆ.