ಬೆಂಗಳೂರು: ರಾಜ್ಯದಲ್ಲಿ ಶಾಲಾ – ಕಾಲೇಜುಗಳಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ ಹೊರ ಹಾಕಿದ್ದು, ಶಾಲೆಯಲ್ಲಿ ಮಕ್ಕಳು ಕಲಿಕೆ ಕಲಿಯಬೇಕು. ಆದರೆ ಇಂದು ಮತೀಯ ಭಾವನೆ ಕಲಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೊರೊನಾದಿಂದಾಗಿ ಕಳೆದ ಎರಡು ವರ್ಷದಿಂದ ಮಕ್ಕಳು ಶೈಕ್ಷಣಿಕವಾಗಿ ವಂಚಿತರಾಗಿದ್ದಾರೆ. ಆದ್ರೆ ಈಗ ಈ ರೀತಿ ಗೊಂದಲ ಎದ್ದಿದೆ. ಇದನ್ನ ಹತೋಟಿಗೆ ತರಬೇಕು. ಮಕ್ಕಳೆಲ್ಲಾ ಸಮವಸ್ತ್ರ ಧರಿಸಿ, ಶಾಲೆಗೆ ಬರಬೇಕು ಎಂದು ಈಗಾಗಲೇ ಶಿಕ್ಷಣ ಇಲಾಖೆ ಸೂಚಿಸಿದೆ. ಅಷ್ಟೇ ಅಲ್ಲ ಆಡಳಿತ ಮಂಡಳಿ ಕೂಡ ಪೋಷಕರನ್ನ ಕರೆಸಿ ಬುದ್ಧಿ ಹೇಳಿದೆ.
ಯಾವುದೇ ಸಂಘಟನೆಯಾದ್ರೂ ಜವಬ್ದಾರಿಯಿಂದ ವರ್ತಿಸಬೇಕಾಗಿದೆ. ಶಾಲೆಗಳು ದೇಗುಲವಿದ್ದಂತೆ. ಅವು ದೇಗುಲಗಳಾಗಬೇಕೆ ವಿನಃ ಕೋಮುವಾದ ಹಬ್ಬಿಸುವ ಕೇಂದ್ರಗಳಾಗಬಾರದು ಎಂದು ಬುದ್ಧಿ ಹೇಳಿದ್ದಾರೆ.