ನವದೆಹಲಿ : ಬ್ಲೂಮ್‌ಬರ್ಗ್‌ನ ವಿಶ್ವದ ಶ್ರೀಮಂತರ ಪಟ್ಟಿಯ ಪ್ರಕಾರ ಭಾರತದ ಗೌತಮ್ ಅದಾನಿ ಅವರು ತಮ್ಮ ಸಹವರ್ತಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ದೇಶವಷ್ಟೇ ಅಲ್ಲ ಏಷ್ಯಾದಲ್ಲೇ ನಂಬರ್ ಒನ್ ಶ್ರೀಮಂತನಾಗಿ ಮುಂದುವರಿದಿದ್ದ ಮುಖೇಶ್ ಅಂಬಾನಿಗೆ ಗುಜರಾತಿನ ಗೌತಮ್ ಅದಾನಿ ಝಲಕ್ ನೀಡಿದ್ದಾರೆ. ಗೌತಮ್ ಅದಾನಿ ಏಷ್ಯಾ ನಂಬರ್ ಕುಬೇರನ ಸ್ಥಾನವನ್ನು ಮುಖೇಶ್ ಅವರನ್ನು ಸರಿಸಿ ನಂಬರ್ ಒನ್ ಪಟ್ಟಕ್ಕೇರಿದ್ದಾರೆ.
ಬ್ಲೂಮ್‌ಬರ್ಗ್ ನ 500 ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಇದರಲ್ಲಿ ಗೌತಮ್ ಅದಾನಿ 88.50 ಬಿಲಿಯನ್ ಡಾಲರ್ ನಿವ್ವಳ ಸಂಪತ್ತನ್ನು ಹೊಂದಿದ್ದರೆ ಮುಖೇಶ್ ಅಂಬಾನಿ 87.90 ಬಿಲಿಯನ್ ಡಾಲರ್ ನಿವ್ವಳ ಆಸ್ತಿ ಹೊಂದಿದ್ದಾರೆ. ಮುಕೇಶ್‌ಗಿಂತ 600 ಮಿಲಿಯನ್‌ಗಿಂತಲೂ ಹೆಚ್ಚು ದಾಖಲಾಗಿದೆ. ಇದು ಅದಾನಿಯನ್ನು ಏಷ್ಯಾದ ನಂಬರ್ ಒನ್ ಶ್ರೀಮಂತರನ್ನಾಗಿ ಮಾಡಿದೆ.
ಬ್ಲೂಮ್‌ಬರ್ಗ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಇಲ್ಲಿಯವರೆಗೂ 10 ನೇ ಸ್ಥಾನದಲ್ಲಿ ಮುಂದುವರೆಯುತ್ತಿದ್ದ ಮುಖೇಶ್ ಅಂಬಾನಿ 11 ನೇ ಸ್ಥಾನಕ್ಕೆ ಮತ್ತು ಗೌತಮ್ ಅದಾನಿ 11 ನೇ ಸ್ಥಾನದಿಂದ 10 ನೇ ಸ್ಥಾನಕ್ಕೆ ಏರಿದ್ದಾರೆ. ವರ್ಷದಲ್ಲಿ, ಮುಖೇಶ್ ಅಂಬಾನಿ ಅವರ ಸಂಪತ್ತು 2.07 ಬಿಲಿಯನ್ ಮತ್ತು ಅದಾನಿ ಅವರ ಸಂಪತ್ತು 12 ಬಿಲಿಯನ್ ಗಳಷ್ಟು ಏರಿದೆ.