ಫೆಬ್ರವರಿ 14 ರಿಂದ 18 ರವರೆಗೆ ಕಬೀರಾನಂದ ಆಶ್ರಮದಲ್ಲಿ 93ನೇ ಮಹಾಶಿವರಾತ್ರಿ ಮಹೋತ್ಸವ : ಅದ್ದೂರಿಯಾಗಿ ಆಚರಣೆಗೆ ಸಮಿತಿ ನಿರ್ಧಾರ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಫೆ.10) :  ಫೆಬ್ರವರಿ 14 ರಿಂದ 18 ರವರೆಗೆ ನಡೆಯಲಿರುವ ನಗರದ ಶ್ರೀ ಕಬೀರಾನಂದ ಆಶ್ರಮದಲ್ಲಿ ನಡೆಯುವ ಶಿವನಾಮ ಸಪ್ತಾಹದ ಅಂಗವಾಗಿ 93ನೇ ಮಹಾಶಿವರಾತ್ರಿ ಮಹೋತ್ಸವವನ್ನು ಯಾವುದೇ ರೀತಿಯಲ್ಲಿ ಕುಂದು ಬಾರದ ರೀತಿಯಲ್ಲಿ ನಡೆಸಲು ವಿವಿಧ ಸಮಿತಿಯ ಮುಖಂಡರು ತೀರ್ಮಾನಿಸಿದರು.

ನಗರದ ಕಬೀರಾನಂದಾಶ್ರಮದಲ್ಲಿ ಶಿವರಾತ್ರಿ ಮಹೋತ್ಸವದ ಅಂಗವಾಗಿ ವಿವಿಧ ಸಮಿತಿಗಳ ಸಭೆಯನ್ನು ನಡೆಸಿದ ಪದಾಧಿಕಾರಿಗಳು ಎಂದಿನಂತೆ ಈ ಭಾರಿಯೂ ಶಿವರಾತ್ರಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕಿದೆ. ಇಲ್ಲಿ ಯಾವುದಕ್ಕೂ ಸಹಾ ತೊಂದರೆಯಾಗದ ರೀತಿಯಲ್ಲಿ ನಡೆಯಬೇಕಿದೆ. ಚಿತ್ರದುರ್ಗದಲ್ಲಿ ಈ ಆಶ್ರಮದಲ್ಲಿ ಮಾತ್ರವೇ ಶಿವರಾತ್ರಿ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ ಇದು ಜಾತ್ಯಾತೀತ ಮಠವಾಗಿದೆ ಇಲ್ಲಿ ಒಂದು ಜಾತಿಯವರು ಅಲ್ಲದೆ ಎಲ್ಲಾ ಜಾತಿಯವರು ಸಹಾ ಬರುತ್ತಾರೆ. ಇಲ್ಲಿಗೆ ಭಕ್ತರೇ ಆಧಾರವಾಗಿದ್ದಾರೆ ಶ್ರೀಗಳು ಯಾರಿಂದಲೂ ಸಹಾ ಒತ್ತಾಯವಾಗಿ ದೇಣಿಗೆಯನ್ನು ಕೇಳುವುದಿಲ್ಲ ಭಕ್ತರೇ ಇಷ್ಠು ಪಟ್ಟು ನೀಡಿದರೆ  ಮಾತ್ರ ಪಡೆಯುತ್ತಾರೆ.

ಈ ರಚನೆ ಮಾಡಿರುವ ಸಮಿತಿಯವರು ಅವರ ಕೆಲಸವನ್ನು ಮಾಡುವುದರ ಮೂಲಕ ಮಹೋತ್ಸವನ್ನು ಅಚ್ಚುಕಟ್ಟಾಗಿ ಮಾಡಬೇಕಿದೆ. ಇದು ಆರೂಢ ಪರಂಪರೆಯ ಮಠವಾಗಿದ್ದು ಇಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಮಹೋತ್ಸವದ ಕೆಲಸವನ್ನು ಮನೆಯ ಕೆಲಸದ ಹಾಗೇ ಎಲ್ಲರು ಸೇರಿ ಮಾಡಬೇಕಿದೆ.

ಫೆ. 12 ರಿಂದ ಶಿವನಾಮ ಸಪ್ತಾಹದ ಅಂಗವಾಗಿ ಅಂದು ಗೊಪೂಜೆಯನ್ನು ಮಾಡುವುದರ ಮೂಲಕ ಚಾಲನೆಯನ್ನು ನೀಡಿ ಮಹೋತ್ಸವ ಮುಗಿಯುವವರೆಗೂ ಆಶ್ರಮದಲ್ಲಿ ನಿರಂತರವಾಗಿ ಸಾಮೂಹಿಕವಾಗಿ ಶ್ರೀಮದ್ ಭಗವದ್ಗೀತಾ ಪಾರಾಯಣ ನಡೆಯಲಿದೆ.

ಫೆ. 14 ರಿಂದ ಪ್ರಾರಂಭವಾಗುವ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ದಿನ ನಡೆಯುವ ಕಾರ್ಯಕ್ರಮದಲ್ಲಿ ನಾಡಿನ ಸುಪ್ರಸಿದ್ದ ವಿವಿಧ ಮಠಾಧಿಶರು, ಸಾಹಿತಿಗಳು, ಗಣ್ಯರು ರಾಜಕಾರಣಿಗಳು ಆಗಮಿಸುವುದರ ಮೂಲಕ ಸಂದೇಶವನ್ನು ನೀಡಲಿದ್ದಾರೆ ಎಂದರು.

ಈ ಸಭೆಯಲ್ಲಿ ಶ್ರೀಮಠದ ನಿರಂಜನ ಮೂರ್ತಿ, ತಿಪ್ಪೇಸ್ವಾಮಿ, ಶಾಸ್ತ್ರಿ, ವಿಎಚ್ ಪಿಯ ರುದೇಶ್, ಓಂಕಾರ್, ವೆಂಕಟೇಶ್, ಪವನ್, ನಂದಿನಾಗರಾಜ್, ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *