ದುರ್ಗಾದೇವಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ : 8 ಮಂದಿ ಸಾವು, ಹಲವರು ನಾಪತ್ತೆ

ಕೋಲ್ಕತಾ, (ಅ.06) : ಬುಧವಾರ ರಾತ್ರಿ ದುರ್ಗಾ ಮಾತೆಯ ವಿಸರ್ಜನೆ  ವೇಳೆ ಪಶ್ಚಿಮ ಬಂಗಾಳದ ಮಾಲ್ ನದಿಗೆ ಹಠಾತ್ ಪ್ರವಾಹ ಅಪ್ಪಳಿಸಿ ಕನಿಷ್ಠ ಎಂಟು ಜನರು ಮುಳುಗಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದ ದಾರುಣ ಘಟನೆಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ.

ನಿನ್ನೆ ಸಂಜೆ ನದಿಯ ದಡದಲ್ಲಿ ನೂರಾರು ಮಂದಿ ಭಕ್ತರು ದೇವಿ ಮೂರ್ತಿಯನ್ನು ವಿಸರ್ಜನೆ ಮಾಡಲು ಜಮಾಯಿಸಿದ್ದರು.
ಇದ್ದಕ್ಕಿದ್ದಂತೆ, ನೀರು ರಭಸವಾಗಿ ಹರಿದು ಬಂದ ಕಾರಣ 8 ಮಂದಿ ಕೊಚ್ಚಿಹೋದರು. ಅವರ ಎಂಟು ಶವಗಳನ್ನು ಹೊರತೆಗೆಯಲಾಗಿದೆ ಮತ್ತು ಸುಮಾರು 50 ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದೇವೆ” ಎಂದು ಅಧಿಕಾರಿಯೋರ್ವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಸಣ್ಣಪುಟ್ಟ ಗಾಯಗಳಾಗಿರುವ 13 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಶೋಧನೆ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಸ್ಥಳೀಯ ಆಡಳಿತದ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ

Share This Article
Leave a Comment

Leave a Reply

Your email address will not be published. Required fields are marked *