in

ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಹಾ ರೈತರ ಬದುಕು ಹಸನಾಗಿಲ್ಲ : ಈಚಘಟ್ಟದ ಸಿದ್ದವೀರಪ್ಪ

suddione whatsapp group join

ಚಿತ್ರದುರ್ಗ,(ಮೇ.05) :  ರೈತ ಬೆಳೆದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆಯನ್ನು ನೀಡುವಲ್ಲಿ ಮೀನಾ ಮೇಷ ಮಾಡುತ್ತಿದೆ, ಇದನ್ನು ವಿರೋಧಿಸಿ ಮೇ.18ರಂದು ಮುಖ್ಯಮಂತ್ರಿಗಳ ಮೂಲ ಸ್ಥಳವಾದ ಶಿಗ್ಗಾವಿಯಲ್ಲಿ ನಿರಂತರವಾಗಿ ಧರಣಿಯನ್ನು ಹಮ್ಮಿಕೊಳ್ಳಲು ಇಂದು ನಡೆದ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರಾಜ್ಯ ರೈತರ ಸಂಘದ ಜಿಲ್ಲಾಧ್ಯಕ್ಷರಾದ ಈಚಘಟ್ಟದ ಸಿದ್ದವೀರಪ್ಪ ತಿಳಿಸಿದರು.

ನಗರದ ರೈತ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಕೈಗಾರಿಕೆ ತನ್ನ ಉತ್ಪನ್ನದ ಮೇಲೆ ನಾನೇ ದರವನ್ನು ನಿಗಧಿ ಮಾಡುತ್ತದೆ. ಆದರೆ ರೈತ ಮಾತ್ರ ತಾನು ಬೆಳೆದ ಬೆಳೆಗೆ ದರವನ್ನು ನಿಗಧಿ ಮಾಡುವ ಹಕ್ಕನ್ನು ಹೊಂದಿಲ್ಲ ಇದನ್ನು ಮೂರನೇ ವ್ಯಕ್ತಿ ನಿಗಧಿ ಮಾಡುತ್ತಾನೆ. ಆತನಿಗೆ ಬೆಳೆಯ ಹಿಂದಿನ ಕಷ್ಟ ಗೊತ್ತಿರುವುದಿಲ್ಲ, ತನಗೆ ತೋಚಿದ ಬೆಲೆಗೆ ರೈತರ ಬೆಳೆಯನ್ನು ನಿಗಧಿ ಮಾಡುತ್ತಾನೆ, ಇದರಿಂದ ರೈತನಿಗೆ ನಷ್ಠವಾಗುತ್ತದೆ ಎಂಬುದರ ಅರಿವೂ ಸಹಾ ಇರುವುದಿಲ್ಲ, ಸರ್ಕಾರಗಳು ಸಹಾ ರೈತನ ಬೆಳೆಗೆ ಬೆಲೆಯನ್ನು ನಿಗಧಿ ಮಾಡುವ ಬಗ್ಗೆ ಯಾವುದೇ ರೀತಿಯ ಪರಿಶ್ರಮವನ್ನು ತೆಗೆದುಕೊಂಡಿಲ್ಲ ಎಂದು ದೂರಿದರು.

ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಹಾ ರೈತರ ಬದುಕು ಹಸನಾಗಿಲ್ಲ, ಆದರೆ ಈತನ ಹೆಸರಿನಲ್ಲಿ ಎಲ್ಲ ನಡೆಯುತ್ತದೆ. ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆಗಳು ಮಾತ್ರ ಗಗನಕ್ಕೆ ಏರುತ್ತಿದೆ. ಆದರೆ ರೈತರ ಬದುಕು ಮಾತ್ರ ಹೀನಾಯ ಸ್ಥಿತಿಯನ್ನು ತಲುಪಿದೆ ಇದರ ಬಗ್ಗೆ ಯಾರಿಗೂ ಸಹಾ ಅರಿವು ಇಲ್ಲ ಇದರ ಸಹಾ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದ ಸಿದ್ದವೀರಪ್ಪ ರೈತ ವ್ಯವಸಾಯಕ್ಕಾಗಿ ಮಾಡಿದಂತ ವಿವಿಧ ರೀತಿಯ ಸಾಲವನ್ನು ಹಣದ ಬದಲಾಗಿ ತಾನು ಬೆಳೆದ ಬೆಳೆಗೆ ತಾನೇ ಬೆಲೆಯನ್ನು ನಿಗಧಿ ಮಾಡಿ ಅದನ್ನು ಸಂಬಂದಪಟ್ಟವರಿಗೆ ನೀಡುವುದರ ಮೂಲಕ ಸಾಲವನ್ನು ಮರುಪಾವತಿ ಮಾಡಲಾಗುವುದು ಈಗಾಗಲೇ ಈ ರೀತಿಯ ಪ್ರಯೋಗ ಹೊಸದುರ್ಗದಲ್ಲಿ ಪ್ರಾರಂಭವಾಗಿದೆ ಇದು ರಾಜ್ಯದಲ್ಲಿ ಮುಂದಿನ ದಿನದಲ್ಲಿ ಪ್ರಾರಂಭವಾಗಲಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿ ರೈತನ ಬೆಳೆಗೆ ಬೆಲೆಯನ್ನು ನಿಗಧಿ ಮಾಡಲು ವಿವಿಧ ರೀತಿಯಾ ಆಯೋಗವನ್ನು ರಚನೆ ಮಾಡಿ ಅವರಿಂದ ವರದಿಯನ್ನು ತರಿಸಿಕೊಂಡು ಸುಮ್ಮನಾಗಿದ್ದಾರೆ ಆಯೋಗ ನೀಡಿದ ವರದಿಯನ್ನು ಜಾರಿ ಮಾಡುವಲ್ಲಿ ಯಾವ ಸರ್ಕಾರಗಳು ಸಹಾ ಆಸಕ್ತಿಯನ್ನು ತೋರುತ್ತಿಲ್ಲ, ಇದರಿಂದಾಗಿ ರೈತ ನಷ್ಠವನ್ನು ಅನುಭವಿಸಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾನೆ. ಇದನ್ನು ತಪ್ಪಿಸುವ ಸಲುವಾಗಿ ಮೇ.18ರಂದು ಮುಖ್ಯಮಂತ್ರಿಗಳ ಮೂಲ ಸ್ಥಳವಾದ ಶಿಗ್ಗಾವಿಯ ಅವರ ಮನೆಯ ಮುಂದೆ ಧರಣಿಯನ್ನು ನಡೆಸಲಾಗುವುದು, ಇದು ನಮ್ಮ ಬೆಳೆಗೆ ಉತ್ತಮವಾದ ಬೆಲೆಯನ್ನು ಸರ್ಕಾರ ಕೂಡುವವರೆಗೂ ಸಹಾ ನಡೆಯಲಿದೆ ಎಂದು ಸಿದ್ದವೀರಪ್ಪ ತಿಳಿಸಿದರು.

ಸರ್ಕಾರ ವಿದ್ಯುತ್ ಬೆಲೆಯನ್ನು ಯೂನಿಟ್‍ಗೆ ಹೆಚ್ಚಳ ಮಾಡಿದೆ. ಅದು ಸಹಾ ನಾಲ್ಕು ಹಂತದಲ್ಲಿ ಹೆಚ್ಚಳವಾಗುತ್ತಿದೆ. ಇದನ್ನು ಸಹಾ ರೈತ ಸಂಘ ವಿರೋಧಿಸುತ್ತದೆ. ಮುಂದಿನ ದಿನದಲ್ಲಿ ಬೆಸ್ಕಾಂ ಸೇರಿದಂತೆ ಇತರೆ ಇಲಾಖೆಗಳಿಂದ ರೈತ ಉಪಯೋಗವನ್ನು ಪಡೆದರೆ ಆಗ ಹಣಕ್ಕೆ ಬದಲಾಗಿ ತಾನು ಬೆಳೆದ ಬೆಳೆಗೆ ಬೆಲೆಯನ್ನು ನಿಗಧಿ ಮಾಡಿ ಸಂಬಂಧಪಟ್ಟ ಇಲಾಖೆಗೆ ನೀಡುವಂತ ಕಾರ್ಯವನ್ನು ಮಾಡಲಾಗುತ್ತದೆ ಎಂದ ಸಿದ್ದವೀರಪ್ಪ, ಶಿಕ್ಷಣ ಎನ್ನುವುದು ಇತ್ತಿಚಿನ ದಿನದಲ್ಲಿ ವ್ಯವಹಾರವಾಗಿ ರೂಪುಗೊಂಡಿದೆ ಪ್ರತಿಯೊಂದು ಖಾಸಗಿ ಶಾಲೆಯಲ್ಲಿ ನಿಗಧಿಗಿಂತ ಹೆಚ್ಚಿನ ರೀತಿಯಲ್ಲಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ, ಇದಲ್ಲದೆ ಪುಸ್ತಕ, ಷೂ, ಸೇರಿದಂತೆ ಇತರೆ ವಸ್ತುಗಳನ್ನು ನೀಡುವುದರ ಮೂಲಕ ದುಪ್ಪಟ್ಟು ಹಣವನ್ನು ಪೋಷಕರಿಂದ ಪಡೆಯುತ್ತಿದ್ದಾರೆ. ಇದರ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಮನವಿಯನ್ನು ನೀಡಲಾಗಿದೆ. ಪೋಷಕರಿಂದ ಪಡೆಯುವ ಶುಲ್ಕದ ಬಗ್ಗೆ ಪೂರ್ಣವಾದ ಮಾಹಿತಿಯನ್ನು ಶಾಲೆಯ ಮುಂದೆ ಪ್ರದರ್ಶನ ಮಾಡಬೇಕು, ಇಲ್ಲವಾದಲ್ಲಿ ಹೋರಾಟವನ್ನು ರೂಪಿಸಲಾಗುವುದೆಂದು ಎಚ್ಚರಿಸಿದರು.

ನಮ್ಮ ಪರವಾದವರು ವಿಧಾನಸಭೆಯಲ್ಲಿ ಇಲ್ಲದಿರುವುದು ನಮಗೆ ಸಮಸ್ಯೆಯಾಗಿದೆ ಆದ್ದರಿಂದ ಮುಂಬರುವ ವಿಧಾನಸಭೇಯ ಚುನಾವಣೆಯಲ್ಲಿ ರೈತ ಸಂಘದಿಂದ ಅಥವಾ ಬೇರೆ ಪಕ್ಷದ ನೆರವಿನಿಂದ ಸ್ಪರ್ಧೆ ಮಾಡುವ ಬಗ್ಗೆ ಆಲೋಚನೆ ನಡೆಯುತ್ತಿದೆ ಇದರ ಬಗ್ಗೆ ಈಗ ಆಮ್ಮ ಆದ್ಮಿ ಪಕ್ಷ ನಮ್ಮ ಸಿದ್ದಾಂತಗಳಿಗೆ ಹತ್ತಿರವಾಗಿದೆ, ಇದರೊಂದಿಗೆ ಹೋಗುವ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಭೆಯಲ್ಲಿ ಚರ್ಚೆ ಮಾಡುವಂತೆಯೂ ಸಹಾ ಇಂದಿನ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ ಚುನಾವಣೆ ಇನ್ನೂ ದೂರ ಇರುವುದರಿಂದ ಮುಂದಿನ ದಿನದಲ್ಲಿ ಇದರ ಬಗ್ಗೆ ಅಂತಿಮವಾಗಿ ತೀರ್ಮಾನ ಮಾಡಲಾಗುವುದೆಂದು ಸಿದ್ದವೀರಪ್ಪ ತಿಳಿಸಿದರು.

ಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಹೊನ್ನಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕೂಪ್ಪದ ಶಿವಪ್ಪ, ರಾಘವೇಂದ್ರ ನಾಯ್ಕ್, ಪ್ರಕಾಶ್ ನಾಯ್ಕ್, ಮಲ್ಲಿಕಾರ್ಜನ್, ರವಿಕುಮಾರ್, ರೂಪ, ಷಡಾಕ್ಷರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಮೇ. 8 ರಂದು ಸಂತ ಜೋಸೆಫರ ಕಾನ್ವೆಂಟ್ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ

ದಾವಣಗೆರೆ | ಮೇ.06 ರಂದು ವಿದ್ಯುತ್ ವ್ಯತ್ಯಯ