ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್ : ಅರ್ಜಿ ಆಹ್ವಾನ

ಚಿತ್ರದುರ್ಗ,(ಅ.25): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲಾ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಕ್ಕೆ ಮಾಸಿಕ 75 ಯೂನಿಟ್‍ಗಳವರೆಗಿನ ಉಚಿತ ವಿದ್ಯುತ್ ಸೌಲಭ್ಯ ನೀಡುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಆದೇಶದನ್ವಯ ಬೆವಿಕಂ ಹಿರಿಯೂರು ವಿಭಾಗದ ವ್ಯಾಪ್ತಿಗೆ ಒಳಪಡುವ ಹಿರಿಯೂರು, ಚಳ್ಳೆಕರೆ ಮತ್ತು ಮೊಳಕಾಲ್ಮುರು ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಗ್ರಾಹಕರು ರಾಜ್ಯ ಸರ್ಕಾರದ ಯೋಜನೆಯಾದ “ಅಮೃತ ಜ್ಯೋತಿ ಯೋಜನೆ” ಸದುಪಯೋಗ ಪಡಿಸಿಕೊಳ್ಳಲು, ಬೆವಿಕಂ ಉಪವಿಭಾಗ ಕಚೇರಿಗಳಿಗೆ ಅರ್ಜಿ ಮತ್ತು ಇತರೆ ದಾಖಲೆಗಳೊಂದಿಗೆ ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆಯಲು ಕೋರಿದೆ.

ಅರ್ಜಿಯ ಜೊತೆಗೆ ಬಿಪಿಎಲ್ ಕಾರ್ಡ್ (ಆರ್.ಸಿ ಸಂಖ್ಯೆ ಸಹಿತ) ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಆರ್.ಡಿ.ಸಂಖ್ಯೆ ಸಹಿತ) ಜೆರಾಕ್ಸ್ ಪ್ರತಿ, ಬ್ಯಾಂಕ್ ಖಾತೆ ಸಂಖ್ಯೆ,ಐಎಫ್‍ಎಸ್‍ಸಿ ಕೋಡ್ ಇತ್ಯಾದಿ ವಿವರಗಳನ್ನೊಳಗೊಂಡ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿ ಹಾಗೂ ಗ್ರಾಹಕರ ಮೊಬೈಲ್ ಸಂಖ್ಯೆಯೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಸೌಲಭ್ಯ ಪಡೆಯಲು ಅರ್ಜಿಯನ್ನು ಆನ್‍ಲೈನ್ ಮುಖಾಂತರ ಕರ್ನಾಟಕ ಸರ್ಕಾರದ ಸುವಿಧಾ ವೆಬ್ ಫೋರ್ಟಲ್‍ನಲ್ಲಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಿರಿಯೂರು ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಮೊಬೈಲ್ ಸಂಖ್ಯೆ
9448279041, 9449843566,

ಚಳ್ಳಕೆರೆ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೊಬೈಲ್ ಸಂಖ್ಯೆ
9448279042, 9449843565,

ತಳಕು ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಮೊಬೈಲ್ ಸಂಖ್ಯೆ
8277893184, 9449743600 ಹಾಗೂ

ಮೊಳಕಾಲ್ಮುರು ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಮೊಬೈಲ್ ಸಂಖ್ಯೆ
9448279043, 9663662395 ಗೆ

ಸಂಪರ್ಕಿಸಬಹುದು ಎಂದು ಬೆವಿಕಂ ಹಿರಿಯೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

suddionenews

Recent Posts

ಯಾರಾಗ್ತಾರೆ ದಿಲ್ಲಿ ದೊರೆ : ನಾಳೆ ಕುತೂಹಲಕ್ಕೆ ತೆರೆ !

    ಸುದ್ದಿಒನ್ ನಾಳೆ ದೆಹಲಿಯ ದೊರೆ ಯಾರಾಗುತ್ತಾರೆ ? ಎಎಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತಾ...? ಅಥವಾ ಭಾರತೀಯ…

4 hours ago

25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿ : ಸಚಿವ ಎಸ್.ಮಧು ಬಂಗಾರಪ್ಪ

  ದಾವಣಗೆರೆ: ಫೆ.7 : ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಹುದ್ದೆಗಳ ಕೊರತೆ ಇದ್ದು 2025-26 ನೇ ಸಾಲಿನಲ್ಲಿ ಸರ್ಕಾರಿ,…

4 hours ago

ತುಮಕೂರಿನಲ್ಲಿ 7 ವರ್ಷದ ಮಗುವನ್ನು ಬಲಿ ಪಡೆದ ಡೆಂಗ್ಯು..!

ತುಮಕೂರು: ಈಗಷ್ಟೇ ಚಳಿಗಾಲ ಕಳೆದು ಬೇಸಿಗೆ ಶುರುವಾಗಿದೆ. ರೋಗ ರುಜಿನಗಳು ಆರಂಭವಾಗುತ್ತಿವೆ. ವೈರಲ್ ಫೀವರ್ ಜೊತೆಗೆ ಡೇಂಘಿ ಜ್ಚರ ಕೂಡ…

5 hours ago

ಫೆಬ್ರವರಿ 09 ಮತ್ತು 10ರಂದು ಶಾಂತಿಸಾಗರ ನೀರು ಸರಬರಾಜು ತಾತ್ಕಾಲಿಕ ಸ್ಥಗಿತ

  ಚಿತ್ರದುರ್ಗ. ಫೆ.07: ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಶಾಂತಿಸಾಗರ ನೀರು ಸರಬರಾಜು ಯೋಜನೆಯ ಶಾಂತಿಸಾಗರ ಜಾಕ್‍ವೆಲ್ ವಿದ್ಯುತ್ ಸ್ಥಾವರದಲ್ಲಿ…

5 hours ago

ರಾಜ್ಯ ಬಜೆಟ್ ಗೆ ಸಿದ್ದತೆ : ಮದುವೆ ಮನೆಯಿಂದ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಡಿಕೆಶಿ

ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ರಾಜ್ಯ ಬಜೆಟ್ ನತ್ತ ಜನರ ಚಿತ್ತ ನೆಟ್ಟಿದೆ. ರಾಜ್ಯ ಬಜೆಟ್ ನಲ್ಲಿ ಇನ್ನಷ್ಟು…

5 hours ago

ರತನ್ ಟಾಟಾ ಉಯಿಲ್ ನಲ್ಲಿ ಮೋಹಿನಿಗೆ 500 ಕೋಟಿ : ಹುಡುಕಾಟ ಶುರು..!

ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದ್ದರು. ರತನ್ ಟಾಟಾ ಅವರಿಗೆ ಮದುವೆಯಾಗಿರಲಿಲ್ಲ. ಹೀಗಾಗಿ…

5 hours ago