ಧಾರವಾಡದಲ್ಲಿ ಸರ್ಕಾರಕ್ಕೆ ಮೋಸ ಮಾಡಿದ 6 ತಹಶಿಲ್ದಾರರು ಸಸ್ಪೆಂಡ್

ಧಾರವಾಡ: ರೈತರ ಮಾಹಿತಿಯನ್ನು ತಪ್ಪಾಗಿ ನಮೂದಿಸಿ, ಸರ್ಕಾರಕ್ಕೆ ವಂಚನೆ ಮಾಡಿದ ಆರು ತಹಶಿಲ್ದಾರ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಧಾರವಾಡದ ಕಲಘಟಗಿಯಲ್ಲಿ ಈ ಘಟನೆ ನಡೆದಿದೆ. ಕರ್ತವ್ಯ ಲೋಪದ ಆರೋಪದ‌ ಮೇಲೆ ತಹಶಿಲ್ದಾರ್ ಹಾಗೂ ಕೃಷಿ ಅಧಿಕಾರಿಗಳು ಸೇರಿದಂತೆ ಆರು ಜನರನ್ನು ಅಮಾನತು ಮಾಡಲಾಗಿದೆ. ಉದ್ದೇಶಪೂರ್ವಕವಾಗಿಯೇ ರೈತರ ಮಾಹಿತಿಯನ್ನು ತಪ್ಪಾಗಿ‌ ನಮೂದಿಸಿದ ಆರೋಪ ಕೇಳಿ ಬಂದಿದೆ.

ಕಲಘಟಗಿಯಲ್ಲಿ ಸರ್ಕಾರಿ ಅಧಿಕಾರಿಗಳು ಮಾಡಿರುವ ಕೆಲಸ ಬಾರೀ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ರೈತರ ಪ್ರಮುಖ ಮಾಹಿತಿಯನ್ನೇ ತಪ್ಪಾಗಿ ನಮೂದಿಸಿರುವ ಆರೋಪ ಕೇಳಿ ಬಂದಿದೆ. 2.24-25ನೇ ಸಾಲಿನ ಬೆಳೆಹಾನಿ ವಿವರ ತಂತ್ರಾಂಶದಲ್ಲಿ ತಪ್ಪು ಮಾಹಿತಿ ದಾಖಲಿಸಲಾಗಿದೆ. ಇದರಲ್ಲಿ ಇಲ್ಲಿನ ತಹಶಿಲ್ದಾರರು ಭಾಗಿಯಾಗಿದ್ದರು ಎನ್ನಲಾಗಿದೆ. ಪರಿಶೀಲನೆಯ ಬಳಿಕ ಇದೀಗ ತಹಶೀಲ್ದಾರನ್ನು ಸಸ್ಪೆಂಡ್‌ ಮಾಡಲಾಗಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನಲ್ಲಿ 2024-25ನೇ ಸಾಲಿನ ಬೆಳೆ ಹಾನಿ ವಿವರ ತಂತ್ರಾಂಶದಲ್ಲಿ ತಪ್ಪು ಮಾಹಿತಿ ದಾಖಲಿಸಲಾಗಿದೆ ಎನ್ನುವ ಆರೋಪ ಇದೆ. ಈ ರೀತಿ ತಂತ್ರಾಂಶದಲ್ಲಿ ವಿವರವನ್ನು ಸಲ್ಲಿಸುವಾಗ ಅನರ್ಹ ರೈತರ ವಿವರಗಳನ್ನೂ ಸಹ ದಾಖಲಿಸುವ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವನ್ನು ಉಂಟು ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಕ್ರಮ ತೆಗೆದುಕೊಂಡಿದೆ. ತಹಶೀಲ್ದಾರ್ ವಿ.ಎಸ್.ಮುಳುಗುಂದ ಮಠ, ಸಹಾಯಕ ಕೃಷಿ ನಿರ್ದೇಶಕ ಅಮರ ನಾಯ್ಕರ ಹಾಗೂ ಅಲ್ಲದೆ 6 ಜನ ಗ್ರಾಮ ಆಡಳಿತಾಧಿಕಾರಿಗಳನ್ನು ಸಹ ಇದೇ ಕಾರಣಕ್ಕೆ ಸಸ್ಪೆಂಡ್ ಮಾಡುವಂತೆ ಡಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಸೂಚನೆ ನೀಡಿದ್ದಾರೆ. ವಿ.ಎಸ್.ಮುಳುಗುಂದಮಠ, ಅಮರ ನಾಯ್ಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಶಿಸ್ತುಕ್ರಮ ಜರುಗಿಸಲು ತಾಕೀತು ಮಾಡಲಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆ ಸಕ್ಷಮ ಪ್ರಾಧಿಕಾರದವರಿಗೆ ಈ ಸಂಬಂಧ ಸೂಚನೆ ನೀಡಲಾಗಿದೆ.

suddionenews

Recent Posts

ಬೇಡಿಕೆ ಈಡೇರಿಕೆಗಾಗಿ ಗ್ರಾಮ ಆಡಳಿತಾಧಿಕಾರಿಗಳ ಧರಣಿ

ಹಿರಿಯೂರು : ನಗರದ ತಾಲೂಕು ಕಚೇರಿ ಮುಂಭಾಗ ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ವತಿಯಿಂದ ಸೋಮವಾರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ…

11 minutes ago

ಸರ್ಕಾರಿ ಆಸ್ಪತ್ರೆ ವೈದ್ಯರ ಹಾದಿರಂಪ- ಬೀದಿರಂಪ : ವೀಡಿಯೋ ವೈರಲ್

ಚಿತ್ರದುರ್ಗ: ವೈದ್ಯರನ್ನು ನಂಬುವಷ್ಟು ಜನ ದೇವರನ್ನು ನಂಬುವುದಿಲ್ಲವೇನೊ.‌ ಇಂಥ ವೈದ್ಯರು ಸಾವು ಬದುಕಿನ ನಡುವೆ ಹೋರಾಡುವ ರೋಗಿಗಳ ಕಡೆ ಗಮನ…

22 minutes ago

ಯತ್ನಾಳ್ ಗೆ ಶಾಕ್ ನೀಡಿದ ಹೈಕಮಾಂಡ್ : ಏನದು..?

ಬೆಂಗಳೂರು: ಮೊದಲಿನಿಂದಾನೂ ಶಾಸಕ ಯತ್ನಾಳ್, ಯಡಿಯೂರಪ್ಪ ಹಾಗೂ ಪುತ್ರರ ವಿರುದ್ಧ ವಾಗ್ದಾಳಿ ನಡೆಸುತ್ತಲೆ ಇದ್ದಾರೆ. ಇದರ ಮಧ್ಯೆ ಯಡಿಯೂರಪ್ಪ ಅವರಿಗೆ…

49 minutes ago

ಫೆಬ್ರವರಿ 12ರಂದು ಶ್ರೀ ರೇಣುಕಾಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯ ಶಾರದಮ್ಮ ಆರ್.ಎಸ್.ರುದ್ರಪ್ಪ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಇದೇ…

52 minutes ago

ಚಿತ್ರದುರ್ಗದಲ್ಲಿ ಖೋ-ಖೋ ಸಂಸ್ಥೆ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

57 minutes ago

ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಮೋಸ : ಅರ್ಜುನ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

1 hour ago