Connect with us

Hi, what are you looking for?

ಪ್ರಮುಖ ಸುದ್ದಿ

ಫೇಸ್‌ ಮಾಸ್ಕ್‌ ಕಳ್ಳತನ ಮಾಡಿದ್ದಕ್ಕೆ 3 ವರ್ಷ ಜೈಲು ಶಿಕ್ಷೆ ಜೊತೆಗೆ ಕಟ್ಟಿದ ದಂಡದ ಮೊತ್ತ ಎಷ್ಟು ಲಕ್ಷ ಗೊತ್ತಾ..?

ದುಬೈ : ಕಳ್ಳತನ ಪ್ರಕರಣದಲ್ಲಿ ದುಬೈ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಫೇಸ್ ಮಾಸ್ಕ್ ಕದ್ದ ಗ್ಯಾಂಗ್‌ಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 1.5 ಲಕ್ಷ ದಿರ್ಹಾಮ್( ದಿರ್ಹಾಮ್ ಎಂದರೆ ಅಲ್ಲಿನ ಕರೆನ್ಸಿ. ಒಂದು ದಿರ್ಹಾಮ್ ಭಾರತದ 20.19 ರೂಪಾಯಿಗೆ ಸಮ) ದಂಡ ವಿಧಿಸಲಾಗಿದೆ. ಇದಲ್ಲದೆ, ಜೈಲುವಾಸ ಅನುಭವಿಸಿದ ನಂತರ ಆರೋಪಿಗಳನ್ನು ಗಡೀಪಾರು ಮಾಡಲು ಕೋರ್ಟ್ ಆದೇಶಿಸಿದೆ.

ಕರೋನಾ ಸಮಯದಲ್ಲಿ ಮಾಸ್ಕ್ ಗಳು ಹೆಚ್ಚು ಅಗತ್ಯವಿರುವ ವಸ್ತುಗಳಾಗಿವೆ. ಆದ್ದರಿಂದ ಅಲ್ಲಿನ ಗ್ಯಾಂಗ್ ವೊಂದು ಮಾಸ್ಕ್ ಗಳನ್ನು ಕದಿಯುವತ್ತ ಗಮನ ಹರಿಸಿತು. ದುಬೈನಲ್ಲಿ ವಾಸಿಸುತ್ತಿರುವ ಆರು ಮಂದಿ ಪಾಕಿಸ್ತಾನಿಗಳು ಅಲ್ ರಶೀಡಿಯಾದ ಗೋದಾಮಿನೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ 1.5 ಲಕ್ಷ ದಿರ್ಹಾಮ್ (ರೂ. 30.285 ಲಕ್ಷ) ಮೌಲ್ಯದ 156 ಪೆಟ್ಟಿಗೆಗಳ ಮಾಸ್ಕ್ ಗಳನ್ನು ಕದ್ದಿದ್ದಾರೆ.

ಸ್ಥಳೀಯ ಕೈಗಾರಿಕಾ ಪ್ರದೇಶದ ಗೋದಾಮಿನಿಂದ 1.5 ಲಕ್ಷ ದಿರ್ಹಾಮ್ ಮೌಲ್ಯದ 1000 ಫೇಸ್ ಮಾಸ್ಕ್‌ಗಳ 156 ಪೆಟ್ಟಿಗೆಗಳನ್ನು ಕಳವು ಮಾಡಲಾಗಿದೆ ಎಂದು 38 ವರ್ಷದ ಚೀನಾದ ಉದ್ಯೋಗಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಘಟನೆ ಜೂನ್ 18 ರಂದು ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮಾಡಿ ಕೆಲವೇ ದಿನಗಳಲ್ಲಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಕದ್ದ ಮಾಸ್ಕ್ ಗಳನ್ನು ಬಾಂಗ್ಲಾದೇಶದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ, (ಏ.09) : ಆಸ್ತಿಯ ವಿಚಾರದಲ್ಲಿ ತಂದೆಯ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ ಪುತ್ರನಿಗೆ ಚಿತ್ರದುರ್ಗ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು 6 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ....

ಪ್ರಮುಖ ಸುದ್ದಿ

ಚಳ್ಳಕೆರೆ :  ತಾಲ್ಲೂಕಿನ ಪರಶುರಾಂಪುರ ಹೋಬಳಿ ಮಹದೇವಪುರ ಗ್ರಾಮದಲ್ಲಿ ರಾಮಾಂಜನೇಯ ಎನ್ನುವವರ ಮನೆಯಲ್ಲಿ ಪೆ.22 ನೇ ದಿನಾಂಕದೊಂದು ಬೆಳಗಿನ ಜಾವದಲ್ಲಿ ಮನೆ ಬೀಗ ಮುರಿದ ಒಳನುಗಿದ ಕಳ್ಳನೊಬ್ಬ ಬಂಗಾರ ಒಡವೆಗಳನ್ನು ಕದಿಯಲಾಗಿತ್ತು ಒಡವೇ...

ಪ್ರಮುಖ ಸುದ್ದಿ

ದಾವಣಗೆರೆ: ಕಿಟಕಿಯಿಂದ ಮಹಿಳೆಯೋರ್ವರ ಮಾಂಗಲ್ಯ ಸರ ಕಳುವು ಮಾಡಿದ್ದ ಕಳ್ಳನನ್ನು ದಸ್ತಗಿರಿ ಮಾಡಿರುವ ಪೊಲೀಸರು, ಆರೋಪಿತನಿಂದ 77 ಗ್ರಾಂ ನ ಅಂದಾಜು 3.46 ಲಕ್ಷ ಮೌಲ್ಯದ ಆಭರಣ ವಶ ಪಡಿಸಿಕೊಂಡಿದ್ದಾರೆ. ಬಳ್ಳಾರಿಯ ಹನುಮಂತ...

ಪ್ರಮುಖ ಸುದ್ದಿ

ಬೆಂಗಳೂರು: ಕಿಚ್ಚ ಸುದೀಪ್ ವಿಕ್ರಾಂತ ರೋಣ ಟೈಟಲ್ ಲಾಂಚ್ ಗಾಗಿ ಇಡೀ ತಂಡ ಮುಂಬೈಗೆ ಹೋಗಿದ್ದಾರೆ. ಇಂದು ರಾತ್ರಿ ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫ ಮೇಲೆ ವಿಕ್ರಾಂತ ರೋಣ ಪ್ರದರ್ಶನಗೊಳ್ಳಲಿದೆ....

ಪ್ರಮುಖ ಸುದ್ದಿ

ದುಬೈ: ಜನವರಿ 31ಕ್ಕೆ ಸುದೀಪ್ ಅಭಿನಯದ ವಿಕ್ರಾಂತ ರೋಣನ ಟೈಟಲ್ ಪೋಸ್ಟರ್ ಅನಾವರಣಗೊಳ್ಳಲಿದೆ. ಇದೇ ಕಾರಣಕ್ಕೆ ಚಿತ್ರತಂಡ ಇಂದು ದುಬೈ ತಲುಪಿದೆ. ವಿಮಾನ ನಿಲ್ದಾಣ ತಲುಪುತ್ತಿದ್ದಂತೆ, ಕಿಚ್ಚನಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ದುಬೈ...

ರಾಷ್ಟ್ರೀಯ ಸುದ್ದಿ

ನವದೆಹಲಿ: ದೆಹಲಿ ನ್ಯಾಯಾಲಯವು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಮತ್ತು ಮಾಜಿ ಸಚಿವ ಸೋಮನಾಥ ಭಾರತಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.  2016 ರಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ...

ಪ್ರಮುಖ ಸುದ್ದಿ

ಚೀನಾ: ಚೀನಾ ದೇಶ ಕೊರೊನಾ ವಿಚಾರವಾಗಿ ಅಂದಿನಿಂದ ಇಂದಿನವರೆಗೆ ತನ್ನ ತಪ್ಪನ್ನು ಮುಚ್ಚಿಟ್ಟುಕೊಂಡೆ ಬರುತ್ತಿದೆ. ಅದರ ತಪ್ಪನ್ನು ಯಾರಾದ್ರೂ ಹೇಳಿದ್ರೆ ಅವರನ್ನೇ ಶಿಕ್ಷಿಸುತ್ತಿದೆ. ಅದಕ್ಕೆ ಉದಾಹರಣೆ ಕೊರೊನಾ ಬಗ್ಗೆ ವರದಿ ಬಿಚ್ಚಿಟ್ಟಿದ್ದ ಪತ್ರಕರ್ತೆಗೆ...

ಪ್ರಮುಖ ಸುದ್ದಿ

ದುಬೈ: ಭಾರತೀಯನೊಬ್ಬ ಹಡಗಿನ ಮಧ್ಯೆ ಪಾರ್ಟಿ ಮಾಡಬೇಕೆಂದು ಆಸೆ ಇಟ್ಟುಕೊಂಡು ಜೀವಕ್ಕೆ ಅಪಅಯ ತಂದುಕೊಂಡಿದ್ದ ಘಟನೆ ದುಬೈನಲ್ಲಿ ನಡೆದಿದೆ. ರಜ್ವಿರ್ ವಕಾನಿ ಎಂಬಾತ ಭಾರತೀಯ ಮೂಲದವನು. ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಸ್ನೇಹಿತರ ಹುಟ್ಟುಹಬ್ಬಕ್ಕೆ...

ಪ್ರಮುಖ ಸುದ್ದಿ

ಮುಂಬೈ: ಕೊರೊನಾ ವೈರಸ್ ಇರುವ ಕಾರಣ ವಿದೇಶದಿಂದ ಬಂದವರ ಬಗ್ಗೆ ವಿಮಾನ ನಿಲ್ದಾಣದಲ್ಲಿ ಹೆಚ್ಚು ಕಾಳಜಿವಹಿಸಲಾಗುತ್ತದೆ. ಹೀಗಾಗಿ ಜೂಹಿ ಚಾವ್ಲಾ ಮ್ಯಾಚ್ ಮುಗಿಸಿಕೊಂಡು ದುಬೈನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗಲೂ ತಪಾಸಣೆ ವಿಚಾರಕ್ಕೆ...

error: Content is protected !!