in

45 ವರ್ಷಗಳ ಹಳೆ ಸರ್ಕಾರಿ ಶಾಲೆ ಇದೀಗ ಮಸೀದಿ..!

suddione whatsapp group join

ಮಂಡ್ಯ : ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಸಂತೇಬಾಚನಹಳ್ಳಿಯಲ್ಲಿ ಕಳೆದ 45 ವರ್ಷದಿಂದ ಉರ್ದು ಶಾಲೆಯೊಂದಿದೆ. ಅದು ಸರ್ಕಾರಿ ಉರ್ದು ಶಾಲೆ. ಆದರೆ ಇದೀಗ ಅದು ಮಸೀದಿಯಾಗಿ ಬದಲಾಗಿದೆ. ಇದು ಸಹಜವಾಗಿಯೇ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಉರ್ದು ಶಾಲೆ ಆರಂಭವಾಗಿ 45 ವರ್ಷಗಳು. ಕಳೆದ 20 ವರ್ಷಗಳಿಂದ ಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ ಸೇರಿದಂತೆ, ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಈ ಶಾಲೆಯಲ್ಲಿದೆ. ಆದ್ರೆ ಮಕ್ಕಳ ಹಾಜರಾತಿ ಹೇಳಿಕೊಳ್ಳುವಷ್ಟರಮಟ್ಟಿಗೆ ಇರಲಿಲ್ಲ.

ಮಕ್ಕಳ ಹಾಜರಾತಿ ಇಲ್ಲದ ಕಾರಣ ಕೆಲವು ವರ್ಷಗಳ ಹಿಂದೆ ಶಾಲೆಯನ್ನ ಮುಚ್ಚಲಾಗಿತ್ತು. ಆದ್ರೆ ಹೊರಗಿನಿಂದ ಬಂದಿರುವ ಕೆಲ ಮುಸ್ಲೀಂ ಧಾರ್ಮಿಕ ಮುಖಂಡರು ಶಾಲೆಯನ್ನ ಅತಿಕ್ರಮಣ ಮಾಡಿದ್ದು, ಶಾಲೆಗೆ ಹಸಿರು ಬಣ್ಣ ಬಳಿದು, ಮಸೀದಿ ಮಾಡಿದ್ದಾರೆ.

ಇನ್ನು ಗ್ರಾಮ ಪಂಚಾಯತಿ ಕೂಡ ಇದರಲ್ಲಿ ಶಾಮೀಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯಾಕಂದ್ರೆ ಸರ್ಕಾರಿ ಶಾಲೆಯ ಸ್ವತ್ತನ್ನ 2021ರ ಜೂನ್ ನಲ್ಲೇ ಧಾರ್ಮಿಕ ಕೇಂದ್ರದ ಆಸ್ತಿಯನ್ನಾಗಿ ಪಂಚಾಯತಿ ಈ ಸ್ಚತ್ತನ್ನ ಮಾಡಿಕೊಟ್ಟಿದೆ. ಈಗ ಸರ್ಕಾರಿ ಶಾಲೆ ಮಸೀದಿಯಾಗಿ ಬದಲಾಗಿರೋದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬ್ಯಾನರ್ ಆಕ್ರೋಶ : ಕಾರಣ ಏನು ಗೊತ್ತಾ..?

ಮೈಸೂರು ಗ್ಯಾಂಗ್ ರೇಪ್ : ಆರೋಪಿಗಳ ಪತ್ತೆ ಮಾಡಿದ ಸಂತ್ರಸ್ತೆ