ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ 30ನೇ ವರ್ಷದ ವಾರ್ಷಿಕೋತ್ಸವ : ನೆರವೇರಿದ ವಿವಿಧ ಪೂಜಾ ಕಾರ್ಯಕ್ರಮ

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ. 23 : ನಗರದ ಆನೆ ಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ (ರಿ) ವತಿಯಿಂದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ 30ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಳಸಾಭಿಷೇಕ ಅಂಗವಾಗಿ ಮಾ. 21 ರಿಂದ 23ರವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಮಾ.21ನೇ ಶುಕ್ರವಾರ ಸಂಜೆ ರಾಕ್ಷೋಘ್ನ ಹೋಮ, ವಾಸ್ತು ಹೋಮ, ದುರ್ಗಾ ದೀಪ ನಮಸ್ಕಾರ ಪೂಜೆ ಮಾ.22 ರ ಶನಿವಾರ ಬೆಳಿಗ್ಗೆ ನವಗ್ರಹ ಶಾಂತಿ, ಗಂಗಾ ಶಾಂತಿ, ನಾಗಶಾಂತಿ ಸಂಜೆ 5.30ಕ್ಕೆ ಅಧಿವಾಸದ ಹೋಮ, ಬ್ರಹ್ಮಕಲಶ ಸ್ಥಾಪನೆ, ಅಷ್ಟಾವಧಾನ ಸೇವೆ, ನಂತರ ಕಳಸ ಸ್ಥಾಪನೆ ಮಾ. 23 ನೇ ಭಾನುವಾರ ಕಲಾವೃದ್ಧಿ ಹೋಮ, ಶಾಂತಿ ಪ್ರಾಯಶ್ಚಿತ್ತ, ಹೋಮಾದಿಗಳು ಬ್ರಹ್ಮ ಕಲಶಾಭಿಷೇಕ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನ 1.00 ರಿಂದ ಪೂಜಾ ಸೇವಾಕರ್ತರು ಹಾಗೂ ಸಮಸ್ತ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಪೂಜಾ ಕಾರ್ಯಕ್ರಮ ನಡೆಸಲಾಗಿದ್ದು ಇದರಲ್ಲಿ ಸುಮಾರು 2000ಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸಿ ಸ್ವಾಮಿಯ ಪ್ರಸಾದವನ್ನು ಸ್ವೀಕಾರ ಮಾಡಿ ವಿನಾಯಕನ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ತಿಳಿಸಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿ.ಪಂ.ಮಾಜಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್, ಶಾಸಕರ ಸಹೋದರಿ ಶ್ರೀಮತಿವೀಣಾ, ಡಾ.ಕೀರ್ತಿ ಮಲ್ಲಿಕಾರ್ಜನ್, ಡಾ.ಮುಕುಂದರಾವ್, ಆರ್ಯ ವೈಶ್ಯ ಸಂಘದ ಅಧ್ಯಕ್ಷರಾದ ಶ್ರೀನಿವಾಸ್, ಕೋ-ಆಪರೇಟಿವ್ ಸೂಸೈಟಿಯ ಅಧ್ಯಕ್ಷರಾದ ನಿಶಾನಿ ಜಯ್ಯಣ್ಣ, ಕನ್ನಿಕಾ ಪರಮೇಶ್ವರ ಬ್ಯಾಂಕ್‍ನ ಅಧ್ಯಕ್ಷರಾದ ಪ್ರಾಣೇಶ್, ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಗೋಪಾಲರಾವ್ ಜಾಧವ್ ಹಾಗೂ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

 

 

 

 

suddionenews

Recent Posts

ATM ನಲ್ಲಿ ಹಣ ಡ್ರಾ ಮಾಡುವ ಗ್ರಾಹಕರಿಗೆ ಶಾಕಿಂಗ್ ನ್ಯೂಸ್..!

ಬೆಂಗಳೂರು; ಈಗಂತು ಎಲ್ಲದಕ್ಕೂ ಟ್ಯಾಕ್ಸ್ ಕಟ್ಟಿ ಕಟ್ಟಿ ಜನ ಸುಸ್ತಾಗಿ ಹೋಗಿದ್ದಾರೆ. ಈಗ ಎಟಿಎಂ ನಲ್ಲಿ ಹಣ ಡ್ರಾ ಮಾಡಯವುದಕ್ಕೆ…

2 minutes ago

ಚಿತ್ರದುರ್ಗ APMC | ಶೇಂಗಾ, ಕಡಲೆ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಮಾರ್ಚ್‌. 26 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 26 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ…

8 minutes ago

ಹನಿಟ್ರ್ಯಾಪ್ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆ ; ರಾಜಣ್ಣರಿಗೆ ಬಹಿರಂಗ ಬೆಂಬಲ ನೀಡಿದ ದಳಪತಿಗಳು..!

ಬೆಂಗಳೂರು; ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಬಾರೀ ಸದ್ದು ಮಾಡ್ತಾ ಇದೆ. ಹನಿಟ್ರ್ಯಾಪ್ ಮಾಡಲು ಬಂದ ನೀಲಿ ಸುಂದರಿ ಬಗ್ಗೆ…

34 minutes ago

ಎಷ್ಟೇ ಮಾತ್ರೆ ನುಂಗಿದರು ಕೆಮ್ಮು ಕಡಿಮೆ ಆಗ್ತಿಲ್ವಾ..? ಹಾಗಾದ್ರೆ ಈ ರೀತಿ ಮಾಡಿ

ಸಾಮಾನ್ಯವಾಗಿ ಕೆಲವೊಬ್ಬರಿಗೆ ಕೆಮ್ಮು ಆದ್ರೆ ತಿಂಗಳು ಗಟ್ಟಲೇ‌ ಕಡಿಮೆ ಆಗುವುದೇ ಇಲ್ಲ. ಎಷ್ಟೇ ಮಾತ್ರೆಗಳನ್ನ ನುಂಗಿದರು ವಾಸಿಯಾಗುವುದೇ ಇಲ್ಲ. ಕೆಮ್ಮಿ…

7 hours ago

ಈ ರಾಶಿಯವರಿಗೆ ಕಷ್ಟಕಾಲದಲ್ಲಿ ಪತ್ನಿಯ ಧನ ಸಹಾಯದಿಂದ ಮರುಜೀವ

ಈ ರಾಶಿಯವರಿಗೆ ಕಷ್ಟಕಾಲದಲ್ಲಿ ಪತ್ನಿಯ ಧನ ಸಹಾಯದಿಂದ ಮರುಜೀವ, ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ವಿಳಂಬ, ಈ ರಾಶಿಯವರು ತುಂಬಾ…

9 hours ago

ದಿಢೀರನೆ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ..!

ಬೆಂಗಳೂರು; ಕಳೆದ ಕೆಲವು ದಿನಗಳಿಂದ ಮಂಡಿ ನೋವಿನ ಸಮಸ್ಯೆಯಿಂದ ಸಿಎಂ ಸಿದ್ದರಾಮಯ್ಯ ಅವರು ಬಳಲುತ್ತಿದ್ದಾತೆ. ವೀಲ್ ಚೇರ್ ಮೇಲೆಯೇ ಓಡಾಟ…

16 hours ago