
ಇಸ್ಲಾಮಾಬಾದ್: ಬೈಕ್ ನಲ್ಲಿ ಬಂದ್ ಸೂಸೈಡ್ ಬಾಂಬರ್ ನಿಂದಾಗಿ ಮೂವರು ಮೃತಪಟ್ಟಿದ್ದು, 20 ಜನ ಗಂಭೀರ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದಿದೆ. ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಕಾನೂನು ಜಾರಿ ಸಂಸ್ಥೆಗೆ ಸೇರಿದ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಮೂವರು ಪ್ಯಾರಾಮಿಲಿಟರಿ ಸಿಬ್ಬಂದಿಯಾಗಿದ್ದಾರೆ.

ಇನ್ನು ಈ ಘಟನೆಯನ್ನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಖಂಡಿಸಿದ್ದಾರೆ. ಸಾವನ್ನಪ್ಪಿದ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ, ಗಾಯಗೊಂಡಿರುವವರು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ.
Condemn the TTP suicide attack on FC checkpost, Mastung road, Quetta. My condolences go to the families of the martyrs & prayers for the recovery of the injured. Salute our security forces & their sacrifices to keep us safe by thwarting foreign-backed terrorists' designs.
— Imran Khan (@ImranKhanPTI) September 5, 2021
ಇನ್ನು ಟಿಟಿಪಿ ಸಂಘಟನೆಯ ಸಮಸ್ಯೆ ಬಗ್ಗೆ ತಾಲಿಬಾನ್ ವಕ್ತಾರ ಪಾಕಿಸ್ತಾನದ ಪ್ರಧಾನಿ ವಿರುದ್ಧ ಹರಿಹಾಯ್ದಿದ್ದು, ತಾಲಿಬಾನಿಗಳಿಗೂ ಅವರಿಗೂ ಸಂಬಂಧವಿಲ್ಲ. ಆ ಸಂಘಟನೆಯ ಸಮಸ್ಯೆಯನ್ನ ಆಲಿಸಿ, ಪರಿಹಾರ ನೀಡಬೇಕಾದದ್ದು ಪಾಕಿಸ್ತಾನದ್ದೇ ಜವಬ್ದಾರಿ ಎಂದಿದ್ದಾರೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಈ ರೀತಿಯಾದ ದಾಳಿಗಳು ಪದೇ ಒದೇ ನಡೆಯುತ್ತಿವೆ. ಹೀಗಾಗಿ ಇಮ್ರಾನ್ ಖಾನ್ ಸರ್ಕಾರ ಅವರ ಸಮಸ್ಯೆಯನ್ನ ಆಲಿಸಿ ಶೀಘ್ರವೇ ಬಗೆಹರಿಸಬೇಕಾಗಿದೆ. ಈ ರೀತಿಯ ಜವಬ್ದಾರಿ ಸರ್ಕಾರದ್ದೇ ವಿನಃ ಧಾರ್ಮಿಕ ಗುಂಪುಗಳದ್ದಲ್ಲ ಎಂದು ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ದೀನ್ ಆಗ್ರಹಿಸಿದ್ದಾರೆ.
GIPHY App Key not set. Please check settings