
ಮಂಗಳೂರು: ದಕ್ಷಿಣ ಕನ್ನಡದ ಮೂಲದವನೇ ಆಗಿದ್ದ ವ್ಯಕ್ತಿ, ದೆಹಲಿಯ ಪಂಚತಾರ ಹೊಟೇಲ್ ಗೆ ಹೋಗಿ, ಐಷರಾಮಿ ಜೀವನ ನಡೆಸಿದ್ದ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 23 ಲಕ್ಷ ಬಿಲ್ ಕೂಡ ಮಾಡಿದ್ದ. ಅದ್ಯಾವ ಧೈರ್ಯವೋ ಏನೋ ಅಲ್ಲಿಂದ ಕಾಲ್ಕಿತ್ತು ಬಂದವ ಈಗ ಮಂಗಳೂರಿನಲ್ಲಿಯೇ ಸಿಕ್ಕಿಬಿದ್ದಿದ್ದಾನೆ.

41 ವರ್ಷದ ಮಹಮ್ಮದ್ ಶರೀಫ್ ಆತನ ಹೆಸರು. ದಕ್ಷಿಣ ಕನ್ನಡ ಮೂಲದವನು. ದೆಹಲಿಗೆ ಹೋಗಿ, ಅಲ್ಲಿನ ಯುನೈಟೆಡ್ ಅರಬ್ ಎಮಿರೇಟ್ಸ್ ನ ಸರ್ಕಾರಿ ಅಧಿಕಾರಿಯ ರೀತಿ, ಪಂಚತಾರಾ ಹೊಟೇಲ್ ನಲ್ಲಿ ತಂಗಿದ್ದ. ನಕಲಿ ವ್ಯಾಪಾರಿ ಕಾರ್ಡನ್ನು ಬಳಸಿದ್ದ. ಮೂರು ತಿಂಗಳ ಕಾಲ ಆ ಹೊಟೇಲ್ ನಲ್ಲಿ ಉಳಿದುಕೊಂಡಿದ್ದ. ಅದರ ಎಲ್ಲಾ ಬಿಲ್ ಸುಮಾರು 23 ಲಕ್ಷವಾಗಿತ್ತು.
ಆ ಹಣವನ್ನು ಕೊಡದೆ, ಹೊಟೇಲ್ ನಲ್ಲಿದ್ದ ದುಬಾರಿ ವಸ್ತುಗಳನ್ನು ಕದ್ದು ಪರಾರಿಯಾಗಿದ್ದ. ಬಳಿಕ ಆತನ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ಮಂಗಳೂರಿನಲ್ಲಿಯೇ ತಗಲಾಕಿಕೊಂಡಿದ್ದಾನೆ.
GIPHY App Key not set. Please check settings