ಸಿಟಿಐಟಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : 18 ಮಂದಿ ಅರೆಸ್ಟ್..!

 

ಲಕ್ನೋ: ಸಿಟಿಐಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ 18 ಜನರನ್ನು ಬಂಧಿಸಿದ್ದಾರೆ. ಡಿ.30 ರಂದು ನಡೆದಿದ್ದ ಸಿಟಿಇಟಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಸಂಬಂಧ ಗೌತಮ್ ಬುದ್ಧನಗರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

ಗ್ಯಾಂಗ್‍ವೊಂದು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವಲ್ಲಿ ತೊಡಗಿತ್ತು. ಅದರಲ್ಲಿ ಐವರು ಮಹಿಳೆಯರು ಸೇರಿದಂತೆ 18 ಮಂದಿ ತೊಡಗಿದ್ದರು. ಇವರನ್ನ ಹಿಡಿಯುವಲ್ಲಿ ಗೌತಮ್ ಬುದ್ಧ ಪೊಲೀಸರು ಯಶಸ್ವಿಯಾಗಿದ್ದಾರೆ.

ನೋಯ್ಡಾ ವಿಭಾಗದ ಸೆಕ್ಟರ್ 60 ರಲ್ಲಿ ಮಾರುತಿ ಸುಜುಕಿ ಇಕೊವೊಂದನ್ನು ಗುರುತಿಸಿದ್ದಾರೆ. ಅನುಮಾನಸ್ಪದವಾಗಿ ಆ ಕಾರನ್ನು ಪೊಲೀಸರ ತಂಡವು ಪರಿಶೀಲಿಸಿದಾಗ ಕಾರಿನಲ್ಲಿ ಐವರು ಯುವಕರು ಕುಳಿತುಕೊಂಡಿದ್ದು, ಕೆಲ ಮಹಿಳೆಯರ ಪರ್ಸ್‍ಗಳು ಪೊಲೀಸರಿಗೆ ಸಿಕ್ಕಿವೆ. ಆಗ ಕಾರಿನಲ್ಲಿದ್ದ ಯುವಕರು ಈ ಪರ್ಸ್‍ಗಳು ನೋಯ್ಡಾದ ಸೆಕ್ಟರ್ 71 ರ ಅತಿಥಿ ಗೃಹದಲ್ಲಿ ಇದ್ದ ಕೆಲವು ಮಹಿಳೆಯರಿಗೆ ಸೇರಿದ್ದು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *