Connect with us

Hi, what are you looking for?

ಕ್ರೀಡಾ ಸುದ್ದಿ

ಮತ್ತೊಂದು ಅಪರೂಪದ ದಾಖಲೆ ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದ ಮಿಸ್ಟರ್ ಕೂಲ್ !

ಚೆನ್ನೈ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಖಾತೆಯಲ್ಲಿ ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 150 ಕೋಟಿ ರೂ ಗಳಿಸಿದ ಮೊದಲ ಕ್ರಿಕೆಟಿಗರಾಗಿ (ಭಾರತೀಯ ಅಥವಾ ವಿದೇಶಿ) ಮಿಸ್ಟರ್ ಕೂಲ್ ಧೋನಿ ಇತಿಹಾಸ ನಿರ್ಮಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ವಹಿಸಿರುವ ಮಹೇಂದ್ರ ಸಿಂಗ್ ಧೋನಿ ಅವರು 2020 ರವರೆಗೆ ಆಡಿದ ಲೀಗ್ ಪಂದ್ಯಗಳ ಮೂಲಕ 137 ಕೋಟಿ ರೂ.ಗಳಿಸಿದ್ದಾರೆ. ಇಷ್ಟೇ ಅಲ್ಲದೆ, ಚೆನ್ನೈ ಫ್ರ್ಯಾಂಚೈಸ್ ಐಪಿಎಲ್ 2021 ಆವೃತ್ತಿಗೂ ಧೋನಿಯವರನ್ನು ಮುಂದುವರೆಸಲಿದ್ದು, 15 ಕೋಟಿ ರೂ. ಪಾವತಿಸಲಿದೆ.

ಇದರೊಂದಿಗೆ ಧೋನಿಯ ಒಟ್ಟು ಗಳಿಕೆ 152 ಕೋಟಿ ರೂ.ಗಳಿಗ ತಲುಪಲಿದೆ. ಈ ಅಂಕಿ ಅಂಶಗಳೊಂದಿಗೆ ಧೋನಿ 150 ಕೋಟಿ ರೂ.ಗಳನ್ನು ತಲುಪಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಧೋನಿ ನಂತರ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 146.6 ಕೋಟಿ ರೂ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 143 ಕೋಟಿ ರೂ.ಗಳಿಸಿದ್ದಾರೆ.

ಧೋನಿ 2008 ರಿಂದ ಐಪಿಎಲ್‌ನಲ್ಲಿ ಒಟ್ಟು 13 ಆವೃತ್ತಿಗಳನ್ನು ಆಡಿದ್ದಾರೆ. ಧೋನಿ ಅವರನ್ನು 2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರ್ಯಾಂಚೈಸ್ 6 ಕೋಟಿ ರೂ.ಗೆ ಖರೀದಿಸಿತು. ಮೂರು ವರ್ಷಗಳವರೆಗೆ ಅದೇ ಮೊತ್ತದ ಹಣಕ್ಕೆ ಮುಂದುವರೆದರು.

2011 ರಲ್ಲಿ ಬಿಸಿಸಿಐ ಪ್ರಥಮ ಆಯ್ಕೆ ಧಾರಣ ಆಟಗಾರನ ಮೊತ್ತವನ್ನು 8 ಕೋಟಿ ರೂ.ಗೆ ಹೆಚ್ಚಿಸಿತು. ಇದರೊಂದಿಗೆ ಅವರು 2011 ರಿಂದ 2013 ರವರೆಗೆ 8.25 ಕೋಟಿ ರೂಪಾಯಿಗಳನ್ನು ಪಡೆದರು.

2014 ರಲ್ಲಿ ಹರಾಜಿಗೆ ಮುಂಚಿತವಾಗಿ, ಬಿಸಿಸಿಐ ಪ್ರಥಮ ಆಯ್ಕೆಯ ಧಾರಣ ಆಟಗಾರನ ಮೊತ್ತವನ್ನು 12 ಕೋಟಿ ರೂ.ಗೆ ಹೆಚ್ಚಿಸಿತು. 2014 ಮತ್ತು 2015 ರ ಆವೃತ್ತಿಯಲ್ಲಿ ಚೆನ್ನೈ ಧೋನಿಗೆ 12.5 ಕೋಟಿ ರೂ. ಪಾವತಿಸಿತು.

ಮ್ಯಾಚ್ ಫಿಕ್ಸಿಂಗ್ ಕಾರಣ, ಚೆನ್ನೈ ಸೂಪರ್ ಕಿಂಗ್ಸ್ ಅನ್ನು 2016 ಮತ್ತು 2017 ರ ಆವೃತ್ತಿಯಲ್ಲಿ ನಿಷೇಧಿಸಲಾಯಿತು.ಆ ಎರಡು ವರ್ಷಗಳ ಕಾಲ ಎಂ.ಎಸ್.ಧೋನಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದರು. ಆಗಲೂ ಅವರು ವರ್ಷಕ್ಕೆ 12.5 ಕೋಟಿ ರೂ. ಕಳೆದ ಮೂರು ವರ್ಷಗಳಿಂದ (2018,2019 ಮತ್ತು 2020) ಧೋನಿಗೆ ರೂ. 15 ಕೋಟಿ. ರೂಪಾಯಿಗಳನ್ನು ಪಾವತಿಸುತ್ತಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚೆನ್ನೈ :ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ....

ಕ್ರೀಡಾ ಸುದ್ದಿ

ಚೆನ್ನೈ: ಬಹು ನಿರೀಕ್ಷಿತ ಐಪಿಎಲ್ ಹಬ್ಬ ಇಂದಿನಿಂದ ಪ್ರಾರಂಭವಾಗಿದೆ. ಕರೋನಾದ ಹಿನ್ನೆಲೆಯಲ್ಲಿ ಕಳೆದ ವರ್ಷ ದುಬೈ ನಲ್ಲಿ ನಡೆದ ಪಂದ್ಯ ಈ ವರ್ಷ ಭಾರತಕ್ಕೆ ಮರು ಪ್ರವೇಶ ಮಾಡಿದೆ.  ಮುಂಬೈ ಇಂಡಿಯನ್ಸ್ ಮತ್ತು...

ಪ್ರಮುಖ ಸುದ್ದಿ

ಚಿತ್ರದುರ್ಗ : ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಾ. ಸಿ.ಕೆ. ಕಿರಣ್‍ಕುಮಾರ್ ಅವರು ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕ್ಲಿಷ್ಟಕರವಾದ ಸುಮಾರು 5 ಗಂಟೆಗಳ ಕಾಲ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ನಡೆಸಿ...

ಪ್ರಮುಖ ಸುದ್ದಿ

ಚೆನ್ನೈ: ತಮಿಳುನಾಡಿನಲ್ಲಿ ಬಿರುಸಿನ‌ ಮತದಾನ ನಡೆಯುತ್ತಿದೆ. ಬಿಜೆಪಿ ಹಾಗೂ ಸ್ಥಳೀಯ ಪಕ್ಷಗಳಿಗೆ ಈ ಚುನಾವಣೆ ಚಾಲೆಂಜಿಂಗ್ ಆಗಿದೆ. ಈಗಾಗಲೇ ಸ್ಟಾರ್ ನಟರು ಮತ ಚಲಾಯಿಸಿದ್ದಾರೆ. ಸ್ಟಾರ್ ನಟರಲ್ಲಿ ಎಲ್ಲರ ಗಮನ ಸೆಳೆದಿದ್ದು ನಟ...

ಪ್ರಮುಖ ಸುದ್ದಿ

ಚೆನ್ನೈ: ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ವಿಡಿಯೋವೊಂದನ್ನ ಮಾಡಿದೆ. ಆ ವಿಡಿಯೋದಲ್ಲಿ ಕಾಂಗ್ರೆಸ್ ಸಂಸದ ಕಾರ್ತೀ ಚಿದಂಬರಂ ನೃತ್ಯ ಬಳಕೆ ಮಾಡಿಕೊಳ್ಳಲಾಗಿದೆ. ಇದು ಕಾಂಗ್ರೆಸ್ ಅವರ ಕೋಪಕ್ಕೆ ಕಾರಣವಾಗಿದೆ. ಹಲವು ವರ್ಷಗಳ ಹಿಂದೆ ತಮಿಳುನಾಡು...

ಪ್ರಮುಖ ಸುದ್ದಿ

ಚಾಮರಾಜನಗರ : ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿಯ ಚಿನ್ನದ ಕರಡಿಗೆ (ಲಿಂಗ‌ದ ಡಬ್ಬಿ) ಕಾಣೆಯಾಗಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದೀಗ ಪೊಲೀಸರು ಅರ್ಚಕರಿಗೆ ನೋಟಿಸ್ ನೀಡಿದ್ದಾರೆ. ಕಳೆದ ಗುರುವಾರ ಸಾಲೂರು...

ಪ್ರಮುಖ ಸುದ್ದಿ

ಕಾದಲ್ ಸಿನಿಮಾ ನೋಡಿದವರಿಗೆ ಹಾಸ್ಯನಟ ವಿ ಬಾಬು ಗೊತ್ತೆ ಇರ್ತಾರೆ. ಅದಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿಯೂ ಎಲ್ಲರನ್ನ ನಕ್ಕು ನಲಿಸಿದ್ದರು. ಆದ್ರೆ ಇದೀಗ ಅವರ ದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಚೆನ್ನೈನ ಆಟೋ...

ಪ್ರಮುಖ ಸುದ್ದಿ

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಈ ಹಿನ್ನೆಲೆ ಬಿರ್ಲಾ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದು, ಈ ಬಗ್ಗೆ...

ಪ್ರಮುಖ ಸುದ್ದಿ

ಚೆನ್ನೈ :ನೆರೆಯ ತಮಿಳುನಾಡಿನಲ್ಲಿ ಕೊರೊನಾ ಪುನಃ ರಣಕೇಕೆ ಹಾಕುತ್ತಿದೆ. ಈ ಪರಿಣಾಮ ಪ್ರಾರಂಭವಾಗಿದ್ದ ಶಾಲೆಗಳು ಬಂದ್ ಆಗುತ್ತಿವೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ತಮಿಳುನಾಡಿನಲ್ಲಿ ಹೆಚ್ಚಾಗುತ್ತಲೆ ಇದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ...

error: Content is protected !!