ಬೆಂಗಳೂರು: ಹಿಂದುಳಿದ ಜಿಲ್ಲೆಗಳು ಎಂಬ ಹಣೆಪಟ್ಟಿಗೆ ಗುರಿಯಾಗಿ, ಅಮೂಲಾಗ್ರ ಅಭಿವೃದ್ಧಿಗೆ ಹಾತೊರೆಯುತ್ತಿರುವ ಕಲ್ಯಾಣ ಕರ್ನಾಟಕದ ಏಳ್ಗೆಗೆ ಮೀಸಲಿರಿಸಿದ್ದ ಸುಮಾರು 3,800 ಕೋಟಿಯಲ್ಲಿ ಕೇವಲ 1,037 ಕೋಟಿಯಷ್ಟೆ ವೆಚ್ಚವಾಗಿದೆ. ಪ್ರಜಾವಾಣಿಯ ವರದಿಯಲ್ಲಿ ಇದು ಬಹಿರಂಗವಾಗಿದೆ. ರಾಜ್ಯ @BJP4Karnataka ಆಡಳಿತ ಹಳಿತಪ್ಪಿರುವುದರ ಸಂಕೇತವಿದು ಎಂದು ಟ್ವೀಟ್ ಮಾಡುವ ಮೂಲಕ ಜೆಡಿಎಸ್ ವಾಗ್ದಾಳಿ ನಡೆಸಿದೆ.
ಈ ಭಾಗದ ಏಳು ಜಿಲ್ಲೆಗಳಿಗಾಗಿಯೇ ಮೀಸಲಿಡುವ ವಿಶೇಷ ಅನುದಾನದ ಅಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಮೂಲ ಕಾರಣ ಸರ್ಕಾರದ ಅಲಕ್ಷ್ಯ. ಬದ್ದತೆ ಇಲ್ಲದ ಉದಾಸೀನ ನಡೆ. ಕೇವಲ ದುಡ್ಡು ಮೀಸಲಿಟ್ಟರೆ ಸಾಲದು. ಅದು ಅನುಷ್ಠಾನವಾದರೆ ಮಾತ್ರ ಈ ಭಾಗವು ಮುನ್ನಲೆಗೆ ಬರಲು ಸಾಧ್ಯ.
ಮಂಜೂರಾದ 2,277 ಕಾಮಗಾರಿಗಳಲ್ಲಿ, ಪೂರ್ಣಗೊಂಡಿರುವುದು ಕೇವಲ 93. ಸರ್ಕಾರದ ಕೆಲಸ ಬಿಟ್ಟಿ ಪ್ರಚಾರಕ್ಕೆ ಮಾತ್ರ ಸಿಮೀತವಾದಾಗ, ಇಂತಹ ಅನಾದರ ನಡೆಯು ಸಂಭವಿಸುತ್ತದೆ. ಅಧಿಕಾರಿ ವರ್ಗ ಗಾಢ ನಿದ್ದೆಯಲ್ಲಿದ್ದಾಗ, ಅದಕ್ಕೆ ಛಾಟಿ ಬೀಸಿ ಎಚ್ಚರವಾಗಿಸುವ ಹೊಣೆಗಾರಿಕೆ ಸರ್ಕಾರದ್ದು. ಆದರೆ, ಸರ್ಕಾರವು ಆಡಳಿತದ ಮೇಲಿನ ಹಿಡಿತ ತಪ್ಪಿಸಿಕೊಂಡಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅನುದಾನ ಕೊಡುವುದರ ಜತೆ, ಅದರ ಆಡಳಿತ ಬಲಗೊಳಿಸಬೇಕಾದ ಅನಿವಾರ್ಯತೆ ಇದೆ. ಆ ಮೂಲಕ ಮೀಸಲಿಟ್ಟ ಅನುದಾನ ಸಮರ್ಪಕ ರೀತಿಯಲ್ಲಿ ವ್ಯಯಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಇದು ರಾಜಕೀಯ ಇಚ್ಛಾಶಕ್ತಿ ಬೇಡುವಂತದ್ದು. ರಾಜ್ಯ ಸರ್ಕಾರಕ್ಕೆ ಅದೂ ಇಲ್ಲದಿರುವ ಸಂಗತಿ ಹೊಸದೇನಲ್ಲ ಎಂದು ಸರಣಿ ಟ್ವೀಟ್ ಮಾಡಿದೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…