in ,

#1 ON TRENDING: ಪೆಟ್ರೋ ಮಾಕ್ಸ್ ಟ್ರೈಲರ್ ಸಖತ್ ವೈರಲ್

suddione whatsapp group join
ನೀನಾಸಂ ಸತೀಶ್ ಅಭಿನಯದ ಪೆಟ್ರೋ ಮಾಕ್ಸ್ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಹಳ ನಿರೀಕ್ಷೆ ಹುಟ್ಟು ಹಾಕಿರುವ ಪೆಟ್ರೋ ಮಾಕ್ಸ್ ಚಿತ್ರದ ಸಣ್ಣ ಝಲಕ್ ಎನ್ನುವಂತೆ ಇಂದು ಟ್ರೈಲರ್ ರಿಲೀಸ್ ಆಗಿದ್ದು, ಸ್ಯಾಂಡಲ್ವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
 ಪೆಟ್ರೋ ಮಾಕ್ಸ್ ಎಲ್ಲರ ನಿರೀಕ್ಷೆಗೂ ಮೀರಿದ್ದು ಎನ್ನುವುದನ್ನು ಟ್ರೈಲರ್ ಸಾಬೀತು ಪಡಿಸಿದೆ. ಸದ್ಯ ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ ಎರಡನೇ ಸ್ಥಾನದಲ್ಲಿರುವ  ಪೆಟ್ರೋ ಮಾಕ್ಸ್ ಟ್ರೈಲರ್ ನೋಡಿದವರು ಹೊಟ್ಟೆ ಹುಣ್ಣಾಗುವಂತೆ ಮನಸ್ಸು ತುಂಬಿ ನಕ್ಕಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿಯೊಂದು ಡೈಲಾಗ್ ಕೂಡ ಪಂಚಿಂಗ್ ಆಗಿದ್ದು, ಚಿತ್ರತಂಡದ ಕ್ರಿಯೇಟಿವಿಟಿಗೆ ಸಿನಿ ಪ್ರಿಯರು ವಾವ್ ಎಂದಿದ್ದಾರೆ. ಪೆಟ್ರೋ ಮಾಕ್ಸ್ ದೀಪಕ್ಕೂ ಚಿತ್ರದಲ್ಲಿ ಬರುವ ನಾಲ್ವರಿಗೂ ಸಂಬಂಧವಿದೆ ಎನ್ನುವುದು ಟ್ರೈಲರ್ನಲ್ಲಿ ಪಕ್ಕಾ ಆಗಿದೆ. ಟ್ರೈಲರ್ ನೋಡಿದ ಪ್ರತಿಯೊಬ್ಬರು ಕೂಡ  ಸಖತ್ ಥ್ರಿಲ್ ಆಗಿದ್ದು, ಚಿತ್ರ ಯಾವಾಗ ತೆರೆ ಕಾಣುತ್ತದೆ ಎಂದು ಕಾತುರರಾಗಿದ್ದಾರೆ. ಅಷ್ಟರ ಮಟ್ಟಗೆ ಪೆಟ್ರೋ ಮಾಕ್ಸ್ ಟ್ರೈಲರ್ ಎಂಟರ್ಟೈನಿಂಗ್ ಆಗಿದೆ.

ಚಿತ್ರದಲ್ಲಿ ನೀನಾಸಂ ಸತೀಶ್ಗೆ ಜೋಡಿಯಾಗಿ ಹರಿಪ್ರಿಯ ಕಾಣಿಸಿಕೊಂಡಿದ್ದು, ಕಾರುಣ್ಯ ರಾಮ್, ನಾಗಭೂಷಣ್, ಗೊಂಬೆಗಳ ಲವ್ ಖ್ಯಾತಿಯ ಅರುಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪೆಟ್ರೋ ಮಾಕ್ಸ್ ಚಿತ್ರ ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18 ಪೆಟ್ರೋ ಮಾಕ್ಸ್ ಪಿಕ್ಚರ್ಸ್  ಬ್ಯಾನರ್ ಅಡಿಯಲ್ಲಿ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ ಎನ್ನುವುದು ಟ್ರೈಲರ್ನಲ್ಲಿ ಸ್ಪಷ್ಟವಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಜಾತ್ರಾ ವಿಶೇಷ : ಚಿಲ್ಲರೆ ಎಸೆದು ಹರಕೆ ತೀರಿಸಿದ ಭಕ್ತರು; ಸರಳವಾಗಿ ಜರುಗಿದ ಕಂಚೀಪುರದ ವರದರಾಜ ಸ್ವಾಮಿ ಜಾತ್ರೆ

ಅಧಿಕಾರಿಗಳಿರೋದು ನಮ್ಮ ಚಪ್ಪಲಿಗಳನ್ನು ಹೊತ್ತುಕೊಳ್ಳಲು : ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕಿ !