in

1-5ನೇ ತರಗತಿ ಆರಂಭಕ್ಕೂ ಸರ್ಕಾರ ಚಿಂತನೆ..ಸಚಿವ ನಾಗೇಶ್ ಹೇಳಿದ್ದೇನು..?

suddione whatsapp group join

ಶಿವಮೊಗ್ಗ: ಮೂರನೇ ಅಲೆ ಮಕ್ಕಳಿಗೆ ಮಕ್ಕಳಿಗೆ ಡೇಂಜರ್ ಎಂಬ ಆತಂಕದ ನಡುವೆಯೂ ಶಾಲೆಗಳು ಆರಂಭವಾಗುತ್ತಿವೆ. ಕೊರೊನಾ ವೈರಸ್ ಸೋಂಕು ಕಡಿಮೆ ಇರುವ ಕಾರಣ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಸರ್ಕಾರ ಶಾಲೆಗಳನ್ನ ಆರಂಭಿಸಿದೆ. ಈಗಾಗಲೇ ಎಲ್ಲಾ ತರಗತಿಗಳು ಆರಂಭವಾಗಿದ್ದು, 1-5ನೇ ತರಗತಿಗಳು ಮಾತ್ರ ಬಾಕಿ ಉಳಿದಿದೆ. ಇದೀಗ ಆ ತರಗತಿಗಳನ್ನಹ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ.

ಈ ಸಂಬಂಧ ಮಾತನಾಡಿರುವ ಸಚಿವ ನಾಗೇಶ್, 1-5ನೇ ತರಗತಿ ಆರಂಭದ ವಿಚಾರಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಭೆ ನಡೆಸಲಿದ್ದೇವೆ. ತಾಂತ್ರಿಕ ಸಮಿತಿ ಸಭೆ ಅನುಮತಿ ನೀಡಿದ್ರೆ ಆ ತರಗತಿಗಳನ್ನು ಆರಂಭ ಮಾಡ್ತೇವೆ ಎಂದಿದ್ದಾರೆ.

ಒಂದೂವರೆ ವರ್ಷದಿಂದ ಮಕ್ಕಳು ಶಾಲೆಯಿಂದ ದೂರವಿದ್ದಾರೆ. ಸಿಲಬಸ್ ಪೂರ್ತಿ ಮಾಡಿದ್ರೆ ಮಾತ್ರ ಮಕ್ಕಳಿಗೆ ಲಾಭ. ಹೀಗಾಗಿಯೇ ಬ್ರಿಡ್ಜ್ ಕೋರ್ಸ್ ಮಾಡಲಿದ್ದೇವೆ. ಈ ವರ್ಷ ಪಠ್ಯ ಕಡಿತಗೊಳಿಸಿದ್ರೆ ಮುಂದಿನ ವರ್ಷಕ್ಕೆ ಆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತೆ. ಹೀಗಾಗಿ ಆ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂದು ಪಠ್ಯ ಕಡಿತದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಶಿಕ್ಷಕರ ವರ್ಗಾವಣೆ ಬಗ್ಗೆ ಮಾತನಾಡಿದ ಸಚಿವರು, ಕಳೆದ ಮೂರು ವರ್ಷದಿಂದ ವರ್ಗಾವಣೆ ವಿಚಾರ ನೆನೆಗುದಿಗೆ ಬಿದ್ದಿದೆ. ಕೋರ್ಟ್ ಗೆ ಹೋಗಿ ಸ್ಟೇ ತರುತ್ತಿರೋ ಕಾರಣ, ವರ್ಗಾವಣೆ ಸ್ಥಗಿತಗೊಂಡಿದೆ. ಸರ್ಕಾರದಿಂದ ಕೋರ್ಟ್ ಗೆ ಮನವಿ ಸಲ್ಲಿಸಿ, ಸ್ಟೇ ತೆರವುಗೊಳಿಸಲು ಮನವಿ ಮಾಡುತ್ತೇವೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಗಣಪತಿ ಮೂರ್ತಿ ಧ್ವಂಸ; ಬಿಗುವಿನ ವಾತವರಣ

ಡೋಲು ಬಡಿಯುವುದನ್ನು ನಿಲ್ಲಿಸಿ ಎಂದ ಪೊಲೀಸರನ್ನೇ ತಳ್ಳಾಡಿದ ಯುವಕರು..!