ಬೆಂಗಳೂರು: ಕಾಂಗ್ರೆಸ್ ಹೊತ್ತಿಸಿದ ಟೆಂಡರ್ ಕಿಡಿ ಈಗ ಬಿಜೆಪಿ ನಾಯಕರಿಗೆ ತಲೆ ಕೆಡಿಸಿದೆ. ಕಾಂಗ್ರೆಸ್ ನಾಯಕರ ಮಾತಿಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಿಟಿ ರವಿ ಮಾತನಾಡಿ, ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ದಾಖಲೆಗಳು ಇಲ್ಲದೆ ಇರುವಂತ ಆರೋಪ ನಿಮ್ಮದು. ಗಾಳಿಯಲ್ಲಿ ಗುಂಡು ಆರಿಸುವುದರಲ್ಲಿ ನಿಸ್ಸೀಮರು. ದಾಖಲೆಗಳಿದ್ದರೆ ಕೊಡಿ. ಇಷ್ಟೆಲ್ಲಾ ದಾಖಲೆಗಳಿದ್ದರೆ ವಿಧಾನಸೌಧದಲ್ಲಿ ಯಾಕೆ ಹೇಳಲಿಲ್ಲ. ವಿಧಾನಸೌಧದಲ್ಲಿ ಮಾತನಾಡಿ ಎಂದರೆ ಮಾತನಾಡಲ್ಲ. ಸುಮ್ಮನೆ ಹೊರಗೆ ಬಂದು ಮಾತನಾಡುತ್ತಾರೆ. ವಿಕ್ಷಗಳ ಬಳಿ ದಾಖಲೆ ಇದ್ದರೆ, ಎಸಿಬಿ, ಲೋಕಾಯುಕ್ತಕ್ಕೆ ದೂರು ಕೊಡಲಿ. ಅವರಿಗೂ ಸ್ವಾತಂತ್ರ್ಯವಿದೆ. ಯಾರಿಗೂ ನಾವೂ ನಿರಾಕರಿಸುತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಯಡಿಯೂರಪ್ಪ ಮಾತನಾಡಿ, ಕಳೆದ ಎಂಟು ವರ್ಷದಲ್ಲಿ ಪ್ರಧಾನಿ ಮೋದಿಯವರು ದೇಶ ವಿದೇಶ ಸುತ್ತಿ ಬಂದರು ವಿಶ್ರಾಂತಿ ತೆಗೆದುಕೊಳ್ಳದೆ ದೇಶ ಸೇವೆ ಮಾಡುತ್ತಿರುವ ಪ್ರಧಾನಿ ಮೋದಿಯವರು ನಮ್ಮ ಜೊತೆ ಇದ್ದಾರೆ. ಇದ್ಯಾರೋ ಯಂಕ – ನಾಣಿ – ಸೀನನಿಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಮೋದಿಯವರ ಬಗ್ಗೆ ಜನ ಎಷ್ಟು ಭರವಸೆ ಇಟ್ಟಿದ್ದಾರೆ ಗೊತ್ತಿದೆ. ರಾಹುಲ್ ಗಾಂಧಿ ಬಿಜೆಪಿಗೆ ಸವಾಲು ಆಗುವುದಕ್ಕೆ ಸಾಧ್ಯವಾ. ಈ ಕಾಂಗ್ರೆಸ್ ನವರು ಯಂಕ, ನಾಣಿ, ಸೀನಾ ಅಂತಾರೆ. ಯಾರೋ ಏನೋ ಹೇಳುತ್ತಾರೆ ಅಂತ ತಲೆಕೆಡಿಸಿಕೊಳ್ಳವೇಡಿ. ಕಾಂಗ್ರೆಸ್ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ.
ನಾನು ಕಾಂಗ್ರೆಸ್ ನವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ನಿಮ್ಮ ನಾಯಕ ಯಾರು..? ರಾಹುಲ್ ಗಾಂಧಿಯನ್ನು ಕರೆದುಕೊಂಡು ಬಂದು ಮೋದಿ ಅವರ ಎದುರು ಮತ ಕೇಳುತ್ತೀರಾ..? ಯಾರು ಭಯ ಪಡುವುದು ಬೇಡ. ಈ ಬಾರಿಯೂ ನಾವೇ ಅಧಿಕಾರಕ್ಕೆ ಬರುವುದು ಎಂದಿದ್ದಾರೆ.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…
ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…
ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…
ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…
ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 23 : ಮಕ್ಕಳ ಅರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವಹಿಸಿ ಜಂಕ್ ಪುಡ್ ಕಡೆಗೆ ಅವರ…