ಮಾರ್ಚ್ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊನ್ನಾಳಿಗೆ ಆಗಮನ ; ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ…!

 

 

ದಾವಣಗೆರೆ. (ಮಾ.16):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 17ರ ಶುಕ್ರವಾರ ಮಧ್ಯಾಹ್ನ 2.30ಕ್ಕೆ ದಾವಣಗೆರೆ ಜಿಲ್ಲೆ ಹೊನ್ನಾಳಿಗೆ ಆಗಮಿಸಿ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ  ತಾಲ್ಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪಾನೆ ನೆರೆವೇರಿಸಲಿದ್ದಾರೆ.

ಶಿಕಾರಿಪುರದಿಂದ ಅಂದು ಮಧ್ಯಾಹ್ನ 2.15ಕ್ಕೆ ಶಿಕಾರಿಪುರದಿಂದ ಹೊರಟು ಮಧ್ಯಾಹ್ನ 2.30ಕ್ಕೆ ಹೊನ್ನಾಳಿಯ ಹೆÉಚ್.ಕಡದಕಟ್ಟೆ ಹೆಲಿಪ್ಯಾಡ್‍ಗೆ ಆಗಮಿಸುವರು. ಮಧ್ಯಾಹ್ನ 2.30ಕ್ಕೆ ಹೊನ್ನಾಳಿಯ ಖಾಸಗಿ ಬಸ್ ನಿಲ್ದಾಣದ ಬಳಿ ಆಯೋಜಿಸಿರುವ ಹೊನ್ನಾಳಿ-ನ್ಯಾಮತಿ  ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ 4-30ಕ್ಕೆ ಹೆಚ್.ಕಡದಕಟ್ಟೆ ಹೆಲಿಪ್ಯಾಡ್ ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಹೊನ್ನಾಳಿ-ನ್ಯಾಮತಿ ತಾಲ್ಲೂಕಿನ ವಿವಿಧ ಅಭಿವೃದ್ದಿ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ವಿವರ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ,ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಹೊನ್ನಾಳಿ ಮತ್ತು ನ್ಯಾಮತಿ  ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾರ್ಚ್ 17 ರಂದು ಮಧ್ಯಾಹ್ನ 2.30 ಗಂಟೆಗೆ ಹೊನ್ನಾಳಿಯ ಖಾಸಗಿ ಬಸ್ ನಿಲ್ದಾಣ ಹತ್ತಿರ ಪಟ್ಟಣ ಶೆಟ್ಟಿ ಲೇಔಟ್‍ನಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿನ ವಿವಿಧ ಅಭಿವೃದ್ಧಿ ಅನುದಾನದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿ ಕಾರ್ಯಕ್ರಮದ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರೇವೇರಿಸುವರು. ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ
ವಿಧಾನಸಭಾ ಕ್ಷೇತ್ರ ಶಾಸಕರಾದ ಎಂ ಪಿ ರೇಣುಕಾಚಾರ್ಯ ಅಧ್ಯಕ್ಷತೆ ವಹಿಸುವರು.

ನಿಕಟ ಪೂರ್ವ ಮುಖ್ಯ ಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ನಗರಾಭಿವೃದ್ದಿ ಸಚಿವರು ಹಾಗೂ

ದಾವಣಗೆರೆ  ಹಾಗೂ  ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ

ಬಸವರಾಜ(ಬೈರತಿ) ಉಪಸ್ಥಿತರಿರುವರು.
ಸಚಿವರುಗಳಾದ ಆರ್.ಅಶೋಕ್, ಬಿ.ಶ್ರೀರಾಮುಲು, ವಿ.ಸೋಮಣ್ಣ, ಜೆ.ಸಿ ಮಾಧುಸ್ವಾಮಿ, ಡಾ.ಅಶ್ವಥ್ ನಾರಾಯಣ, ಸಿ.ಸಿ.ಪಾಟೀಲ್ ಆನಂದ್ ಸಿಂಗ್, ಕೋಟಾಶ್ರೀವಾಸ್ ಪೂಜಾರಿ, ಪ್ರಭುಚವ್ಹಾಣ್, ಅರೇಬೈಲ್ ಶಿವರಾಮ್ ಹೆಬ್ಬಾರ್, ಬಿ.ಸಿ ಪಾಟೀಲ್, ಡಾ.ಕೆ.ಸುಧಾಕರ್, ಸುನೀಲ್ ಕುಮಾರ್.ವಿ, ಆಚಾರ್ ಹಾಲಪ್ಪ ಬಸಪ್ಪ, ಮುನಿರತ್ನ, ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಮಹೇಶ್ ಕುಮಟೇಹಳ್ಳಿ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಲೋಕಸಭಾ ಕ್ಷೇತ್ರದ ಸಂಸದರಾದ ಜಿ.ಎಂ ಸಿದ್ದೇಶ್ವರ, ಶಾಸಕರಾದ
ಆಯನೂರು ಮಂಜುನಾಥ್, ಎಸ್ ಎಲ್ ಭೋಜೆಗೌಡ, ಡಿ.ಎಸ್ ಅರುಣ್, ಹೊನ್ನಾಳಿ
ಪುರಸಭೆಯ ಅಧ್ಯಕ್ಷರಾದ ಸುಮ ಮಂಜುನಾಥ ಇಂಚರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

suddionenews

Recent Posts

ಉದ್ಯೋಗ ವಾರ್ತೆ : ಚಿತ್ರದುರ್ಗದಲ್ಲಿ ಮಾರ್ಚ್ 01 ರಂದು ಬೃಹತ್ ಉದ್ಯೋಗ ಮೇಳ

ಚಿತ್ರದುರ್ಗ. ಫೆ.24:  ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…

3 hours ago

ಮಧ್ಯ ಕರ್ನಾಟಕದಲ್ಲಿಯೇ ಪ್ರಪ್ರಥಮ ENT ಲೇಸರ್ ಶಸ್ತ್ರಚಿಕಿತ್ಸಾ ಯಂತ್ರ ಲೋಕಾರ್ಪಣೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

3 hours ago

ಭದ್ರಾ ಮೇಲ್ದಂಡೆಗೆ ರಾಜ್ಯ ಬಜೆಟ್ ನಲ್ಲಿ ಐದು ಸಾವಿರ ಕೋಟಿ ಅನುದಾನಕ್ಕೆ ಹಕ್ಕೊತ್ತಾಯ

ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…

4 hours ago

ಶಾಲಾ ಪಠ್ಯದಲ್ಲಿ ಸಂಭಾಜಿ ಜೀವನ ಸೇರಿಸಲು ಒತ್ತಾಯ ; ಕಾರಣ ಏನು ಗೊತ್ತಾ..?

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…

4 hours ago