ಗದಗ: ಕುಡಿದ ಮೇಲೆ ಅದೆಷ್ಟೋ ಜನ ಹೊಸ ಅವತಾರಗಳನ್ನ ತೋರಿಸುವುದನ್ನು ಎಲ್ಲರೂ ಒಂದಲ್ಲ ಒಂದು ರೀತಿ ನೋಡಿಯೇ ಇರ್ತಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಅಂತ ವಿಡಿಯೋ ಗಳನ್ನ ನೋಡಿ ಮನತುಂಬಿ ನಕ್ಕಿರುವವರು ಇದ್ದಾರೆ. ಇಲ್ಲೊಬ್ಬ ಕುಡುಕ ಪೊಲೀಸರಿಗೆ ಅವಾಜ್ ಹಾಕಿರೋ ಘಟನೆ ನಡೆದಿದೆ.
ನಗರದ ಡಾ.ಬಿ ಆರ್ ಅಂಬೇಡ್ಕರ್ ನಗರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದೆ. ಈ ವೇಳೆ ಮತಗಟ್ಟೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಈ ವೇಳೆ ಮತದಾರನೊಬ್ಬ ಅಲ್ಲಿಗೆ ಬಂದು ಅವಾಂತರ ಸೃಷ್ಟಿಸಿದ್ದಾನೆ.
ಕುಡಿದ ಮತದಾರನೊಬ್ಬ ನಾನು ಎಲ್ಲಿ ಬೇಕಾದರೂ ಕುಳಿತು ಕೊಳ್ತೀನಿ. ನೀವ್ಯಾಕೆ ಕೇಳ್ತೀರಾ..? ಇದು ನಮ್ಮ ಏರಿಯಾ ಮುಟ್ಟಬೇಡಿ ಎಂದು ರಂಪಾಟ ಮಾಡಿದ್ದಾನೆ. ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ 66ರ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಆ ಕುಡುಕನನ್ನ ಮನವೊಲಿಸಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ. ಕಡೆಗೆ ಅವರ ಮನೆಯವರಿಗೆ ವಿಷಯ ಮುಟ್ಟಿಸಿ ಆತನನ್ನ ಕರೆದುಕೊಂಡು ಹೋಗುವಂತೆ ಮಾಡಿದ್ದಾರೆ.
ಚಿತ್ರದುರ್ಗ: ಚಿರತೆಗಳು ಕಾಡಿನಿಂದ ನಾಡಿಗೆ ಆಗಾಗ ಎಂಟ್ರಿ ಆಗ್ತಾನೆ ಇರ್ತಾವೆ. ಅಲ್ಲಲ್ಲಿ ಪ್ರತ್ಯಕ್ಷಗೊಂಡು ಜನರಿಗೆ ಆತಂಕ ತಂದು ಇಡುತ್ತಾ ಇರುತ್ತವೆ.…
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಇಂಡೋ ಫಾರ್ಮ್ ಟ್ರಾಕ್ಟರ್ ನ ನೂತನ ಶೋರೂಂ ಶಿವಾಂಶ್ ಟ್ರಾಕ್ಟರ್ ನಗರದ ಆರ್.ಟಿ.ಒ…
ನವದೆಹಲಿ: ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ನಾಳೆ ಸಚಿವೆ ನಿರ್ಮಲಾ ಸೀತರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದಿನ ಅಧಿವೇಶನ…
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಚಳಿಯಲ್ಲೂ ಬೆವರುವಂತೆ ಮಾಡಿದ್ದಾರೆ. ಬೆಂಗಳೂರು, ರಾಯಚೂರು,…
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…