ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 7899864552
ಚಿತ್ರದುರ್ಗ : ಮಕ್ಕಳನ್ನು ಕೇವಲ ಪಠ್ಯಪುಸ್ತಕ, ಅಂಕಗಳಿಗೆ ಸೀಮಿತಗೊಳಿಸದೆ ಜೀವನಕ್ಕೆ ಅತ್ಯವಶ್ಯಕವಾಗಿರುವ ಕೌಶಲ್ಯಾಧಾರಿತ ಶಿಕ್ಷಣ ನೀಡಬೇಕೆಂದು ಡಯಟ್‍ನ ಪದನಿಮಿತ್ತ ಸಹ ನಿರ್ದೇಶಕ ಹೆಚ್.ಮಂಜುನಾಥ್ ವೃತ್ತಿ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಹಾರಾಣಿ ಕಾಲೇಜು ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ಕಲಿಕೋತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ವೃತ್ತಿ ಶಿಕ್ಷಕರು ಮಕ್ಕಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಕೆಲಸವನ್ನು ಪ್ರತಿ ವರ್ಷ ಮಾಡಿಕೊಂಡು ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ವಿಷಯಾಧಾರಿತ ಶಿಕ್ಷಕರುಗಳಿಗಿರುವಷ್ಟೆ ಗೌರವ ನಿಮಗೂ ಇರುವುದರಿಂದ ವೃತ್ತಿ ಶಿಕ್ಷಕರು ತಮ್ಮ ವೃತ್ತಿಯನ್ನು ಬೇರೆ ರೀತಿಯಲ್ಲಿ ಭಾವಿಸಬಾರದು. ಮಕ್ಕಳ ಮನಸ್ಸು, ಅಂಗಾಂಗ, ದೇಹದಲ್ಲಿ ವೃತ್ತಿ ಕೌಶಲ್ಯದ ಕಾರ್ಯವಾಗಬೇಕು. ಕೌಶಲ್ಯ ಶಿಕ್ಷಣದಿಂದ ಮಕ್ಕಳಲ್ಲಿ ಮಾನಸಿಕ, ದೈಹಿಕ ಸಾಮಥ್ರ್ಯ ಬೆಳೆಯುತ್ತದೆ. ಪಠ್ಯದ ಜೊತೆಗೆ ಸಾಹಿತ್ಯ, ಸಂಸ್ಕøತಿ, ಲಲಿತಕಲೆ, ವೃತ್ತಿ ಶಿಕ್ಷಣ, ಕ್ರೀಡೆಯೂ ಮಗುವಿಗೆ ಬೇಕು. ಇಂತಹ ವಸ್ತು ಪ್ರದರ್ಶನಗಳಿಂದ ಕೌಶಲ್ಯದ ಅನಾವರಣಗೊಳ್ಳಲಿದೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ.ರವಿಶಂಕರ್ ರೆಡ್ಡಿ ಮಾತನಾಡಿ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಕಲಿಸಬೇಕೆಂಬುದರ ಕುರಿತು ಶಿಕ್ಷಕರುಗಳು ಚಿಂತನ ಮಂಥನ ನಡೆಸಬೇಕಿದೆ. ಶಿಕ್ಷಕರು, ಅಧಿಕಾರಿಗಳು ಮಕ್ಕಳ ಭವಿಷ್ಯಕ್ಕೆ ದೊಡ್ಡ ಊರುಗೋಲುಗಳಾಗಿ ನಿಲ್ಲಬೇಕು. ಪಠ್ಯಗಳ ಜೊತೆ ಶಿಕ್ಷಣ ಇಲಾಖೆ ದಿನನಿತ್ಯವು ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ವೃತ್ತಿ ಶಿಕ್ಷಣದ ಮೂಲಕ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಜೀವನಕ್ಕಾಗಿ ಬೇಕಾಗಿರುವ ಕೌಶಲ್ಯಗಳನ್ನು ಕಲಿಸುವುದು ವೃತ್ತಿ ಶಿಕ್ಷಕರ ಜವಾಬ್ದಾರಿ ಎಂದು ಹೇಳಿದರು.
ವೃತ್ತಿ ಶಿಕ್ಷಣ ಮುಂದಿನ ದಿನಗಳಲ್ಲಿ ಮಕ್ಕಳ ಜೀವನಕ್ಕೆ ದಾರಿದೀಪವಾಗಬೇಕು. ಕಠಿಣ ಪರಿಶ್ರಮ, ಶ್ರದ್ದೆ, ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಕಾಣಬಹುದು. ಗುಣಾತ್ಮಕ ಶಿಕ್ಷಣ ಕಲಿಕಾಂಶಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿ ಈ ಬಾರಿಯ ಹತ್ತನೆ ತರಗತಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನಕ್ಕೆ ಬರಬೇಕೆಂಬ ಆಸೆಯಿಟ್ಟುಕೊಂಡಿದ್ದನೆ. ಈ ನಿಟ್ಟಿನಲ್ಲಿ ತಮ್ಮಲ್ಲಿರುವ ಪರಿಣಿತಿಯ ಮೂಲಕ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಿ ಎಂದು ಶಿಕ್ಷಕರುಗಳಲ್ಲಿ ಮನವಿ ಮಾಡಿದರು.
ಡಯಟ್ ಪ್ರಾಂಶುಪಾಲರಾದ ಎಸ್.ಕೆ.ಬಿ.ಪ್ರಸಾದ್ ಮಾತನಾಡುತ್ತ ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಸಂದರ್ಭದಲ್ಲಿ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಯಿತು. ಅಂತಹ ಕಠಿಣ ದಿನಗಳಲ್ಲಿ ಅನೇಕ ಮಕ್ಕಳು ಗುಡಿಕೈಗಾರಿಕೆಗಳಿಂದ ವಿವಿಧ ಕೌಶಲ್ಯಾಧಾರಿತ ಕಸುಬುಗಳನ್ನು ಕಲಿತಿದ್ದಾರೆ. ಪಠ್ಯೇತರ ವಿಷಯ ಕೂಡ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಸ್ಥಿರತೆ ಕಾಪಾಡುವುದು ಶಿಕ್ಷಣದ ಪ್ರಮುಖ ಅಂಶ. ಶಿಕ್ಷಕರು ಬರೀ ಮಕ್ಕಳಿಗೆ ಪಾಠ ಕಲಿಸುವುದನ್ನು ಹೊರತು ಪಡಿಸಿ ಹೊರಗೆ ಬಂದು ಒಂದು ವಿಷಯಕ್ಕೂ ಮತ್ತೊಂದು ವಿಷಯಕ್ಕೂ ಇರುವ ಸಂಬಂಧ ಕುರಿತು ಶಿಕ್ಷಕರುಗಳು ಪರಸ್ಪರ ಚರ್ಚೆಯಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ಭಾವನಾತ್ಮಕ, ಭೌದ್ದಿಕವಾಗಿ ಬೆಳೆವಣಿಗೆಯಾಗುವ ಅವಕಾಶವನ್ನು ಪ್ರತಿಯೊಂದು ಮಗುವಿಗೂ ನೀಡುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ. ಪಠ್ಯಪುಸ್ತಕದ ಜೊತೆ ಸಮಾಜಕ್ಕೆ ಉಪಯೋಗವಾಗುವ ರೀತಿಯ ಶಿಕ್ಷಣದ ಅಗತ್ಯತೆಯಿದೆ. ಸುಸ್ಥಿರ ಸಮಾಜಕ್ಕೆ ಎಲ್ಲಾ ಮಜಲುಗಳಲ್ಲಿ ಕೆಲಸವಾಗಬೇಕು ಎಂದು ಹೇಳಿದರು.
ವಿಷಯ ಪರಿವೀಕ್ಷಕರಾದ ಬಸವರಾಜ್ ಓಲೇಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿಪ್ಪೇಸ್ವಾಮಿ, ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಟಿ.ಮಹಲಿಂಗಪ್ಪ, ವಿಷಯ ಪರಿವೀಕ್ಷಕರುಗಳಾದ ಸವಿತ, ಗೋವಿಂದಪ್ಪ, ಶಿವಣ್ಣ ವೇದಿಕೆಯಲ್ಲಿದ್ದರು.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…