ಬಿಎಸ್ವೈ ವಿದಾಯದ ಭಾಷಣ ಮೆಚ್ಚಿ ಕನ್ನಡದಲ್ಲಿಯೇ ಟ್ವೀಟ್ ಮಾಡಿದ ಪ್ರಧಾನಿ ಮೋದಿ..!

 

ಮಾಜಿ ಸಿಎಂ ಯಡಿಯೂರಪ್ಪ ಅವರು ನಿನ್ನೆ ವಿಧಾನಸಭೆಯಲ್ಲಿ ವಿದಾಯದ ಭಾಷಣ ಮಾಡಿದ್ದರು. ಈ ವೇಳೆ ಬಿಜೆಪಿ ಪಕ್ಷ ಗೆಲುವಿಗಾಗಿ‌ವಮುಂದೆಯೂ ಶ್ರಮಿಸಬೇಕೆಂದು ಹೇಳಿದರು. ಯಡಿಯೂರಪ್ಪ ಅವರ ವಿದಾಯದ ಭಾಷಣ ಎಂಥವರಿಗೂ ಹೆಮ್ಮೆ ಪಡುವಂತೆ ಮಾಡಿತ್ತು, ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುವಂತೆ ಕೇಳಿಸಿತ್ತು. ಈ ವಿದಾಯದ ಭಾಷಣಕ್ಕೆ ಇದೀಗ ಪ್ರಧಾನಿ ಮೋದಿ ಅವರು ಮನಸೋತಿದ್ದಾರೆ.

 

ತಮ್ಮ ಟ್ವಿಟ್ಟರ್ ನಲ್ಲಿ ಕನ್ನಡದಲ್ಲಿಯೇ ಬರೆದುಕೊಂಡಿದ್ದಾರೆ. “ಬಿಜೆಪಿಯ ಒಬ್ಬ ಕಾರ್ಯಜರ್ತನಾದ ನನಗೆ ಈ ಭಟಷಣ ಅತ್ಯಂತ ಸ್ಪೂರ್ತಿದಾಯಕ ಎಂದೆನಿಸಿದೆ. ಇದರಲ್ಲಿ ನಮ್ಮ ಪಕ್ಷದ ನೈತಿಜತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರ ಕಾರ್ಯಜರ್ತರಿಗೂ ಸ್ಪೂರ್ತಿ ನೀಡುತ್ತದೆ” ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ವಿದಾಯದ ಭಾಷಣ ಮಾಡುವಾಗ ಯಡಿಯೂರಪ್ಪ ಅವರು, ಪಕ್ಷಕ್ಕಾಗಿ ನಾನು ಇನ್ನೂ ಹೋರಾಟ ಮಾಡುತ್ತೇನೆ. ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ನೀವೂ ಎಲ್ಲೆಲ್ಲಿ ಕರೆಯುತ್ತಿರೋ ಅಲ್ಲೆಲ್ಲಾ ಬರುತ್ತೇನೆ. ಇನ್ನು ಐದು ವರ್ಷಗಳ ಕಾಲ ದೇವರು ಕೆಲಸ ಮಾಡುವ ಶಕ್ರಿ ನೀಡಲಿ. ನಾನು ಈಗಾಗಲೇ ಹೇಳಿದ್ದೇನೆ ಚುನಾವಾಣೆಯಲ್ಲಿ ನಿಲ್ಲಲ್ಲ ಎಂದು. ಬದುಕಿನ ಕೊನೆಯ ಉಸಿರು ಇರುವ ತನಕ ಬಿಜೆಪಿಯನ್ನು ಕಟ್ಟುವುದಕ್ಕಾಗಿ, ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಾಗಿ ನನ್ನ ಶಕ್ತಿ ಮೀರಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ

suddionenews

Recent Posts

ಬಗರ್‍ಹುಕುಂ ಅರ್ಜಿಗಳನ್ನು ಮರು ಪರಿಶೀಲಿಸಿ : ಕುಮಾರ್ ಸಮತಳ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 07…

2 minutes ago

ಹೈಕೋರ್ಟ್ ತೀರ್ಪು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಭ್ರಮಾಚರಣೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

6 minutes ago

ದಾವಣಗೆರೆ ವಿಶ್ವವಿದ್ಯಾನಿಲಯ : ಹೊಳಲ್ಕೆರೆ ವಿದ್ಯಾರ್ಥಿನಿ ಗಂಗಮ್ಮ ಪ್ರಥಮ ರ‌್ಯಾಂಕ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

9 minutes ago

ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ : ಸಚಿವ ಮಧು ಬಂಗಾರಪ್ಪ

ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…

16 minutes ago

15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ : ಸಚಿವ ಮಧು ಬಂಗಾರಪ್ಪ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಶಿಕ್ಷಣ ಇಲಾಖೆಗೆ ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಹೊಸದಾಗಿ 15…

29 minutes ago

ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು : ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…

3 hours ago