ಮಂಡ್ಯ: ಮತದಾನಕ್ಕೆ ದಿನಗಣನೆ ಶುರುವಾಗಿದೆ. ಜನರಿಗೆ ಹಣದ ಆಮಿಷ ತೋರಿಸುವ ಅಭ್ಯರ್ಥಿಗಳಿಗೇನು ಕಡಿಮೆ ಇಲ್ಲ. ಅದಕ್ಕಾಗಿಯೇ ಪೊಲೀಸರು, ಚುನಾವಣಾ ಅಧಿಕಾರಿಗಳು ಎಲ್ಲಾ ಅಭ್ಯರ್ಥಿಗಳು, ಅಭ್ಯರ್ಥಿಗಳ ಬೆಂಬಲಿಗರು, ಆತ್ಮೀಯರ ಮೇಲೆ ಕಣ್ಣಿಟ್ಟಿದ್ದಾರೆ. ಇದೀಗ ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗನ ಮನೆ ಮೇಲೆ ದಾಳಿ ನಡೆದಿದೆ.
ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ಎಂ ಉದಯ್ ಬೆಂಬಲಿಗ ಸುರೇಶ್ ಬಾಬು ಮನೆ ಮೇಲೆ ದಾಳಿ ನಡೆಸಲಾಗಿದೆ. ಇಂದು ಬೆಳಗ್ಗೆ 5.30ಕ್ಕೆ ಪಕ್ಕಾ ಮಾಹಿತಿ ಪಡೆದ ಫ್ಲೈಯಿಂಗ್ ಸ್ಕ್ವಾಡ್ ಟೀಂ ದಾಳಿ ನಡೆಸಿದೆ. ಅಷ್ಟೇ ಅಲ್ಲದೆ ಇನ್ನಷ್ಟು ಬೆಂಬಲಿಗರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಇನ್ನು ಸುರೇಶ್ ಬಾಬು ಅವರ ಮನೆಯಲ್ಲಿಯೇ ಸುಮಾರು ಎರಡು ಕೋಟಿ ಹಣ ಸಿಕ್ಕಿದೆ. ಮದ್ದೂರು ಕ್ಷೇತ್ರದ ದೊಡ್ಡ ಬೀದಿಯಲ್ಲಿ ಸುರೇಶ್ ಬಾಬು ಅವರ ಮನೆ ಇದೆ. ಮನೆಯ ಅಟ್ಟದ ಮೇಲೆ ಕಂತೆ ಕಂತೆ ಹಣ ಇಟ್ಟಿದ್ದರು ಎನ್ನಲಾಗಿದೆ. ಉದಯ್, ರಮೇಶ್, ಸುರೇಶ್ ಎಂಬುವವರ ಮನೆಯಲ್ಲೆಲ್ಲಾ ದಾಳಿ ನಡೆಸಿದಾಗ ಎರಡು ಕೋಟಿ ಹಣ ಸಿಕ್ಕಿದೆ. ಸುರೇಶ್ ಬಾಬು ಅವರನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.





GIPHY App Key not set. Please check settings