ತುಮಕೂರು: ಚುನಾವಣೆ ಹತ್ತಿರವಾಗ್ತಾ ಇದೆ. ರಾಜಕಾರಣಿಗಳು ಜನರ ಬಳಿ ಹೋಗ್ತಾ ಇದ್ದಾರೆ.. ಹಲವು ಭರವಸೆಗಳನ್ನು ನೀಡುತ್ತಾ ಇದ್ದಾರೆ. ಹಾಗೇ ಜನರ ಮುಂದೆ ವಿರೋಧಿಗಳಿಗೆ ಟಾಂಗ್ ನೀಡುತ್ತಾ ಇರುತ್ತಾರೆ. ಇದೀಗ ಜಿ ಪರಮೇಶ್ವರ್ ಕೂಡ ಜೋರಾಗಿಯೇ ಗದರಿದ್ದಾರೆ. ವಿರೋಧಿಗಳಿಗೆ ಗುಡುಗಿದ್ದಾರೆ. ” ‘ಬನ್ರೋ ನನ್ ಮಕ್ಳಾ’ ಅಂತ ಗುಡುಗಿದ್ದಾರೆ.
ಕೊರಟಗೆರೆಯಲ್ಲಿ ನಡೆದ ಒಕ್ಕಲಿಗರ ಸಮಾವೇಶದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಅಬ್ಬರದ ಭಾಷಣ ಮಾಡಿದ್ದಾರೆ. ಬನ್ರೋ ನನ್ ಮಕ್ಳಾ. ಮೀಸೆನೂ ಇಲ್ಲ. ಗೀಸೆನೂ ಇಲ್ಲ. ಸಾವಿರ ಜನ ನಂಗೆ ಹೇಳಿದ್ರು. ಬೆಂಗಳೂರಿಗೆ ಬನ್ನು ಅಂತ ಕರೆಯುತ್ತಿದ್ದಾರೆ. ಆದ್ರೆ ನಾನು ಕೊರಟಗೆರೆ ಬಿಟ್ಟು ನಾನು ಹೋಗಲ್ಲ. ಕೊರಟಗೆರೆ ಕ್ಷೇತ್ರದಿಂದಾನೇ ಸ್ಪರ್ಧೆ ಮಾಡ್ತೇನೆ ಎಂದು ಗುಡುಗಿದ್ದಾರೆ.
ತುಮಕೂರು ಸಂಸದರೇ ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಿದ್ದೀರಿ..? ಲೆಕ್ಕಾ ಕೊಡಿ. ಕೊರಟಗೆರೆ ಕ್ಷೇತ್ರದಲ್ಲಿ ನೀವೂ ಮಾಡಿರುವ ಒಂದು ಅಭಿವೃದ್ಧಿ ಕೆಲಸ ತೋರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





GIPHY App Key not set. Please check settings