Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಿರ್ಮಾಪಕ ಕುಮಾರ್ ಆಯ್ತು.. ಈಗ ಹುಚ್ಚ ನಿರ್ಮಾಪಕರಿಂದಾನೂ ಆರೋಪ : 38 ಲಕ್ಷ ಕೊಡಬೇಕಂತೆ ಸುದೀಪ್..!

Facebook
Twitter
Telegram
WhatsApp

 

 

ಬೆಂಗಳೂರು: ಕಿಚ್ಚ ಸುದೀಪ್ ನನಗೂ ಹಣ ಕೊಡಬೇಕು ಎಂದು ಹುಚ್ಚ ನಿರ್ಮಾಪಕ ರೆಹಮಾನ್ ಅವರು ಬೇಸರ ಹೊರ ಹಾಕಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾನು 20 ಸಿನಿಮಾ ಮಾಡಿದ್ದೀನಿ ಯಜಮಾನ ಮತ್ತು ಹುಚ್ಚ ಸಿನಿಮಾ ನಿರ್ಮಾಣ ಮಾಡಿದ್ದೀನಿ. ನನಗೆ ನ್ಯಾಯ ಕೇಳೋಕೆ ಸುದ್ದಿಗೋಷ್ಠಿ ಕರೆದಿದ್ದೀನಿ. ಸುದೀಪ್ ಮೇಲೆ ದೂರು ಮಾಡ್ತಿಲ್ಲ ನ್ಯಾಯ ಕೇಳ್ತಿದ್ದೀನಿ.

ಅವ್ರು ದೊಡ್ಡ ಹೀರೋ ಈಗ ಅವ್ರ ಮೇಲೆ ಆಪಾದನೆ ಮಾಡೋದು ಚೆನ್ನಾಗಿ ಅನ್ನಿಸಲ್ಲ. ಹುಚ್ಚ ಸಿನಿಮಾ ಮಾಡಿದೆ ಯಜಮಾನ ಅದ್ಮೆಲೆ ಉಪೇಂದ್ರ ಅವ್ರತ್ರ ಹೋಗಿದ್ದೇ ಅವ್ರು ಟೈಟಲ್ ಕೇಳಿ ಬೇಡ ಅಂದ್ರು. ನಂತ್ರ ಮಗಳು ಹೇಳಿದ್ಮೆಲೆ ಸುದೀಪ್ ನ ಹಾಕ್ಕೋಂಡು ಹುಚ್ಚ ಸಿನಿಮಾ ಮಾಡಿದೆ. ಯಜಮಾನ ಸಿನಿಮಾ ಮಾಡಿ ಹುಚ್ಚ ಅಂತ ಸಿನಿಮಾ ಮಾಡ್ತಿಯಾ ಅಂತ ಗಾಂಧಿನಗರದಲ್ಲಿ ಬೈದ್ರು. ಶಿವಮೊಗ್ಗ ಏರಿಯಾದ ವಿತರಣೆ ಸುದೀಪ್ ಗೆ ಕೊಟ್ಟೆ ನಾಲ್ಕುವರೆ ಲಕ್ಷಕ್ಕೆ ನಮ್ಮ ಊರು ಅವ್ರೆ ಬೇಕು ಅಂತ ಕೇಳಿದ್ರು. ಹುಚ್ಚ ಸಿನಿಮಾ‌ ರಿಲೀಸ್ ‌ಆಗಿ 100 ಡೇಸ್ ಆಯ್ತು ಸುದೀಪ್ ನ ಕರೆಸಿ ಲಾಡು ಹಂಚಿದ್ವಿ.

ಅಣ್ಣಾವ್ರು ನೋಡಿ ಹುಚ್ಚ ನೋಡಬೇಕು ಅಂತ ಕೇಳಿದ್ರು ಲಾಸ್ಟ್ ಸೀನ್ ನಲ್ಲಿ ಅಣ್ಣಾವ್ರು ಕಣ್ಣೀರು ಹಾಕಿದ್ರು. ವಾಲಿ ಸಿನಿಮಾ‌ ಶೂಟಿಂಗ್ ನಲ್ಲಿದ್ದ ಸುದೀಪ್ ಬಂದ್ರು ಅಣ್ಣಾವ್ರು ಸುದೀಪ್ ಗೆ ಹೊಗಳಿದ್ರು. ಬೆಳೆದ್ರು ಸುದೀಪ್ ಅವ್ರು ಹೇಳಿದಂಗೆ. ಅದ್ರೆ ಬೆಳೆದ ಮೇಲೆ ಹತ್ತಿದ ಏಣಿ ಓದಿಬಾರದು. ಯಾರಾದ್ರು ಡೇಟ್ ಕೇಳಿದ್ರೆ ನನ್ ಹೆಸ್ರು ಹೇಳೋರು ಅದಕ್ಕೆ ನಾನು ಹೋಗಿ‌ ಕೇಳಿದೆ. ಅವಾಗ ರೀಮೆಕ್ ಸಿನಿಮಾ ಮಾಡೋಣ ಅಂದ್ರು ಸ್ವರ್ಗ್ ಸಿನಿಮಾ‌ ಮಾಡೋಣ ವಿಷ್ಣು ಅವ್ರನ್ನ ಗೆಸ್ಟ್ ಅಪಿಯರೆನ್ಸ್ ಅಂತ ಮಾಡೋಣ ಅಂದ್ರು ರೈಟ್ಸ್ ಹತ್ತು ಲಕ್ಷ ಕೊಟ್ಟು ತಂದೆ. ನಾನು ಬಾಂಬೆಗೆ ಹೋಗಿ ರೈಟ್ಸ್ ತಗೋಂಡು ಸ್ವರ್ಗ್ ಟೈಟಲ್ ‌ಲಾಂಚ್ ಅಂತ ಪೂಜೆ ಮಾಡಿಸಿದ್ವಿ ವಿಷ್ಣು ಇಂದು ಮುಂದೇ ನೋಡಿದ್ರು ಅವಾಗ ಸುಮ್ನೆ ಅದ್ವಿ.

ಅಂದಾಜ್ ಅಪ್ನಾ ಅಪ್ನಾ ಮಾಡೋಣ ಅಂದ್ರು. ರವಿ ಶ್ರೀವತ್ಸ ಮಾತಮಾಡಿದ್ರು ರಾಜೇಂದ್ರಸಿಂಗ್ ಬಾಬು ಮಗ ಅದಿತ್ಯ ಅಂತ ಸಲ್ಮಾನ್ ನಾನು‌ಮಾಡ್ತಿನಿ ಅಮೀರ್ ನೀನು‌ಮಾಡು ಅಂತ ಕಿತ್ತಾಡಿಕೊಂಡು ಅದು ಸುಮ್ನೆ ಆದ್ರು. ನಂತ್ರ ಲಾವಾರೀಸ್ ರೀಮೇಕ್ ರೈಟ್ಸ್ ತಂದೆ ಕೈ ಕಾಲು ಹಿಡಿದು ತಂದೆ ಆಮೇಲೆ ಅಮ್ಜದ್ ಖಾನ್ ಕ್ಯಾರೆಕ್ಟರ್ ಮಾಡೋರಿಲ್ಲ ಅಂತ ಕ್ಯಾನ್ಸಲ್ ಮಾಡಿದ್ರು. ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದೇ ಎಂಟು ವರ್ಷದ ಹಿಂದೆ. ಸೂರಪ್ಪ ಬಾಬು ಇದ್ರು ಇಲ್ಲಿ ಅವ್ರು ಅವ್ರಿಗೆ ಸಿನಿಮಾ ಮಾಡ್ತಿದ್ರು ದೂರನ್ನ ಮುಚ್ಚಾಕಿಬಿಟ್ರು. ನಾಲ್ಕೂವರೆ ಲಕ್ಷ ಅಡ್ವಾನ್ಸ್ ಕೋಟ್ಟಿದ್ದೇ ಅದು ವಾಪಸ್ ಕೊಡಲಿ ರಿಮೇಕ್ ರೈಟ್ಸ್ ದುಡ್ಡು 35 ಲಕ್ಷ ವಾಪಸ್ ಕೊಡಲಿ.

ಒಂದು ಲಕ್ಷ 80 ಸಾವಿರ ಅಸಿಸ್ಟೆಂಟ್ ಹತ್ರ ಕಳಿಸಿದ್ರು ಅದಕ್ಕೆ ಕಂಪ್ಲೆಟ್ ಮಾಡಿದೆ ಇವ್ರು ತಗೋಂಡುಲಿಲ್ಲ ಸುಮ್ನೆ ಆದೆ. ನಾನು ಮನೆ ಹತ್ರ ಹೋಗೋಕೆ ಶುರು ಮಾಡಿದೆ ನೂರೈವತ್ತು ಸಾರಿ ಹೋಗಿದ್ದೀನಿ. ಯಾವಾಗ ಹೋದ್ರು ಅವ್ರು ಇಲ್ಲ ಅಂತ ಹೇಳಿಬಿಡೋರು. ಒಂದು ದಿನ ಅವಾಗ್ಲೇ ಹೋಳಗೆ ಹೋದ್ರು ಅವಾಗ್ಲು ಇಲ್ಲ ಅಂತ ಹೇಳಿದ್ರು. ಬರ್ತಡೇ ದಿನ‌ ಸಿಗಬಹುದು ಅಂತ ಹೋದೆ ನಾನು ಒಳಗೆ ಹೋದ್ರೆ ಮೇಲಗಡೆ ಎಲ್ಲಾ ನಿರ್ಮಾಪಕರು ಕೂತಿದ್ರು ನನ್ನ ಫ್ಯಾನ್ಸ್ ಕೂತಿರೋ ಲೈನ್ ನಲ್ಲಿ ಲಾಸ್ಟ್ ನಲ್ಲಿ ಕೂರಿಸಿದ್ರು. ಆಮೇಲೆ ಬೇರೆವ್ರು ಕರೆಸಿ ಕೂರಿಸಿದ್ರು. ಶುಭಾಶಯ ಹೇಳಿದೆ ಕುತ್ಕೋಳಿ ಅಂದ್ರು ನಾನು ಬೇಜಾರು ಆಗಿ ಬಂದೇ.

ಜಾಕ್ ಮಂಜು ಮಾತಾನಾಡಿ ನಿಮಗೆ ಹೇಳೋಕೆ ಹೇಳಿದ್ದಾರೆ ಕೊಡ್ತಿವಿ ಸರ್ ಅಂತ ಹೇಳಿದ್ರು. ಒಂದು ಸಾವಿರದ 350 ಕಾಲ್ ಮಾಡಿದ್ದೀನಿ ಕಾಲ್ ಕಟ್ ಮಾಡ್ತಿದ್ರು ನೂರು ಸುಳ್ಳು ಹೇಳಿದ್ದಾರೆ. ಆಮೇಲೆ ಅವ್ರು ಕಷ್ಟದಲ್ಲಿದ್ದೀನಿ ಅಂತ ಕೇಳಿ ಸರ್ ಕೋಡ್ತಾರೆ ಅಂತ ಕೇಳಿ ಅಂದ್ರು ನಾನು ಕೇಳಿದೆ. ಆಯ್ತು ಸರ್ ಜಾಕ್ ಹೇಳಿದಿನಿ ಅಂದ್ರು ಶೂಟಿಂಗ್ ಎಲ್ಲಾ ಸುತ್ತಾಡಿ ಬಂದೇ ಕೊಡಲಿಲ್ಲ. ಅವ್ರು ಇದ್ದಲ್ಲಿಗೆ ಹೋದ್ರೆ ಕ್ಯಾರವಾನ್ ಇಂದ ಇಳಿದು ಬರಲಿಲ್ಲ. ಈ ಮನುಷ್ಯ ಗೌರವ ಕೊಡಲ್ಲ ನಿಮಗೆ ಬರಬೇಡಿ ಅಂದ್ರು ನಾನು ಸುಮ್ಮನಾಗಿ ಬಿಟ್ಟೆ. ಕಡೆಗೆ ಒಂದು ದಿನ ಜಾಕ್ ಮಂಜು ಫೋನ್ ಮಾಡಿ ಸಿನಿಮಾ ಮಾಡಿ ದೊಡ್ಡ ತಪ್ಪು ಮಾಡಿದೆ ಸರ್ ಅಂದ್ರು ಈಗ ಅರ್ಥ ಆಯ್ತೆನಪ್ಪ ಅಂದೇ.

ನನ್ನ ಮನವಿ ಇಷ್ಟೇನೆ. ಕುಮಾರ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಎಷ್ಟು ಜನದ ಮೇಲೆ ಹಾಕಿದ್ದಾರೆ. ಕಿಚ್ಚ ಕ್ರಿಯೇಷನ್ ಅಂತ ಇಡ್ಕೋಂಡಿದ್ದಾರೆ ಅದು ನನ್ನ ಸಿನಿಮಾದಲ್ಲಿ ಬರೋದು ಇವ್ರು ಯಾವ ಪರ್ಮಿಷನ್ ತಗೋಂಡಿಲ್ಲ‌ ನನ್ನ ಬಳಿ ನಾನು ಮಾನನಷ್ಟ ಮೊಕದ್ದಮೆ ಹಾಕಬಹುದಲ್ವಾ. ಜೂನಿಯರ್ ಎನ್ ಟಿ ಆರ್ ನನ್ನ ಕಾಲಿಗೆ ನಮಸ್ಕಾರ ಮಾಡಿಸಿದ್ರು. ನನಗೆ ಸಿನಿಮಾ‌ವಮಾಡ್ತಿನಿ ಅಂದ್ರು ನಾನು ಕನ್ನಡ ಬಿಟ್ಟು ಬೇರೆ ಮಾಡಲ್ಲ ಅಂದೇ. ನಮಗೆ ನ್ಯಾಯ ಕೊಡಿಸಿ

ನಾನು ಖರ್ಚು ಮಾಡಿದ್ದೇ 22 ವರ್ಷದ ಹಿಂದೆ ರೈಟ್ಸ್ ತಂದಿರೋದು ಎಲ್ಲಾ ವಾಪಸ್ ಕೊಡಲಿ ನಾವು ಸಾಲ ಮಾಡಿದ್ದೀವಿ ಬಡ್ಡಿ ಕಟ್ತಿದ್ದೀನಿ ಅದಕ್ಕೆ ಹೆಚ್ಚಿನ್ನದ್ದು ಕೊಡಲಿ. ದಯಮಾಡಿ ಸುದೀಪ್ ಗೆ ಕೈ ಮುಗಿದು ಕೇಳಿ ಕೊಳ್ತಿನಿ ನಾನು ಹಾಕಿರೋದು ಕೊಟ್ಟು ಉಪಾಕಾರ ಮಾಡಿ ಅಷ್ಟೇ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮತ್ತೆ ಹೆಚ್ಚಾಯ್ತು ಅಡಿಕೆ ಬೆಲೆ : ರೈತರ ಮೊಗದಲ್ಲಿ ಸಂತಸವೋ ಸಂತಸ

ಅಡಿಕೆ ಬೆಳೆಗಾರರಲ್ಲಿ ಮತ್ತೆ ಖುಷಿಯಾಗುವ ದಿನ ಸಂಭವಿಸಿದೆ. 55 ಸಾವಿರ ರೂಪಾಯಿಗೆ ತಲುಪಿತ್ತು. ಆದರೆ ಇದ್ದಕ್ಕಿದ್ದ ಹಾಗೇ 44 ಸಾವಿರಕ್ಕೆ ಬಂದು ನಿಂತಿತ್ತು. ಇದು ಅಡಿಕೆ ಬೆಳೆಗಾರರಿಗೆ ಶಾಕ್ ಆಗಿತ್ತು. ಈಗ ಸ್ವಲ್ಪ ಸುಧಾರಿಸಿಕೊಳ್ಳುವ

ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದವರಿಗೆ ಶಾಕ್ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ಮಂಡ್ಯ: ಇತ್ತೀಚೆಗಷ್ಟೇ ಸಂಪುಟ ಪುನರ್ ರಚನೆ ಆಗುತ್ತೆ ಎಂಬ ಚರ್ಚೆ ಜೋರಾಗಿತ್ತು. ಸಂಪುಟ ಪುನರ್ ರಚನೆಯಾಗುತ್ತೆ ಎಂದಾಗಲೇ ಈ ಬಾರಿ ನಮಗೂ ಅವಕಾಶ ಸಿಗುತ್ತೆ ಎಂಬನಿರೀಕ್ಷೆ ಹಲವರಿಗೆ ಹುಟ್ಟಿಕೊಂಡಿತ್ತು. ಅದರಲ್ಲೂ ಸಿದ್ದರಾಮಯ್ಯ ಅವರ ಸಂಪುಟ

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 04 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ( ಡಿಸೆಂಬರ್. 04 ರ, ಬುಧವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ

error: Content is protected !!