
ಬೆಂಗಳೂರು: ಬೆಳಗ್ಗೆಯಿಂದ ಐಪಿಎಸ್ ಅಧಿಕಾರಿ ಡಿ ರೂಪಾ ಸೋಷಿಯಲ್ ಮೀಡಿಯಾ ಮೂಲಕ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರ ಹೆಸರು ಕೇಳಿಬಂದಿದ್ದ ಹಗರಣಗಳನ್ನು ಹೆಸರಿಸಿ, ಈಗ ಖಾಸಗಿ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಇದೆ ನಡುವೆ ಡಿಕೆ ರವಿ ಸಾವಿನ ಬಗ್ಗೆಯೂ ವಿಚಾರ ತೆಗೆದಿದ್ದರು.

ಡಿಕೆ ರವಿ ವಿಚಾರ ಬಂದಿದ್ದಕ್ಕೆ ಮಾತನಾಡಿದ ಕುಸುಮಾ, ಕರ್ಮ ಯಾರನ್ನು ಬಿಡುವುದಿಲ್ಲ. ಇಲ್ಲಿ ಮಾಡಿದ್ದನ್ಮು ಈ ಜನ್ಮದಲ್ಲಿಯೇ ಅನುಭವಿಸಿ ಹೋಗುತ್ತೀವಿ. ಅದನ್ನು ನಾನು ನಂಬಿದ್ದೇನೆ. ದೇವರನ್ನು ನಂಬುತ್ತೇನೆ ಎಂದಿದ್ದಾರೆ.
ನಾನು ಯಾರ ಪರವಾಗಿಯೂ ಮಾತನಾಡುವುದಿಲ್ಲ. ಯಾರ ಪರವಾಗಿಯೂ ನಿಲ್ಲುವುದಿಲ್ಲ. ನನಗೆ ಆದ ನೋವು, ನನ್ನ ಕುಟುಂಬಕ್ಕೆ ಆದ ನೋವು ಇನ್ಯಾರಿಗೂ ಆಗಬಾರದು ಅನ್ನೋದಷ್ಟೇ ನನ್ನ ಉದ್ದೇಶ. ಸಿಬಿಐ ರಿಪೋರ್ಟ್ ಬಂದ ಮೇಲೆ ಅದರಲ್ಲಿ ಏನಿತ್ತು ಎಂಬುದನ್ನು ಯಾರು ತಿಳಿದುಕೊಳ್ಳಲು ಪ್ರಯತ್ನಿಸಲಿಲ್ಲ. ಇನ್ನು ಹಲವು ಸತ್ಯಗಳಿವೆ. ಅದನ್ನು ಯಾರು ಯೋಚಿಸಲಿಲ್ಲ. ರಿಪೋರ್ಟ್ ನಲ್ಲಿ ಎಲ್ಲವೂ ವಿಸ್ತಾರವಾಗಿದೆ. ಎಲ್ಲಾ ಸತ್ಯವೂ ಗೊತ್ತಾಗಲಿ ಎಂದಿದ್ದಾರೆ.

GIPHY App Key not set. Please check settings