
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಐಪಿಎಸ್ ಅಧಿಕಾರಿ ಡಿ ರೂಪಾ ನಡುವೆ ಜಗಳ ತಾರಕಕ್ಕೇರಿದೆ. ಈಗಾಗಲೇ ರೂಪಾ ಅವರು ರೋಹಿಣಿ ಅವರ ಬಗ್ಗೆ ಕೆಲವು ಆರೋಪಗಳನ್ನು ಮಾಡಿದ್ದರು. ಆದ್ರೆ ಈಗ ಇನ್ನೊಂದು ವಿಚಾರ ಗಮನ ಸೆಳೆಯುತ್ತಿದೆ. ಅದುವೆ ವೈಯಕ್ತಿಕ ವಿಚಾರ.

ರೋಹಿಣಿ ಸಿಂಧೂರಿ ಅವರು ಕೆಲ ಅಧಿಕಾರಿಗಳಿಗೆ ಉತ್ತೇಜನ ನೀಡುವುದಕ್ಕೆ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾರೆ. ಅದರ ಪ್ರೂಫ್ ನನ್ನ ಬಳಿ ಇದೆ ಎಂದಿದ್ದಾರೆ. ಕೆಲ ಐಎಎಸ್ ಅಧಿಕಾರಿಗಳಿಗೆ ಈ ರೀತಿಯ ಫೋಟೋಗಳನ್ನು ಕಳುಹಿಸಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಜೊತೆಗೆ ಫೇಸ್ ಬುಕ್ ನಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಆರೋಪ ಇನ್ನು ಎಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತೆ ಗೊತ್ತಿಲ್ಲ. ಅದರಲ್ಲೂ ಡಿ ರೂಪಾ ಅವರು ನನ್ನ ಬಳಿ ಸಾಕ್ಚಿಗಳಿದೆ ಎಂದಿದ್ದಾರೆ. ತಮ್ಮ ಮೇಲಿನ ಆರೋಪಗಳಿಂದ ಬಚಾವ್ ಆಗುವುದಕ್ಕೆ ರಾಜಕಾರಣಿಯ ಬಳಿ ಸಂಧಾನಕ್ಕೆ ಹೋಗಿದ್ದರಾ ಎಂದು ಗರಂ ಆಗಿದ್ದಾರೆ.
GIPHY App Key not set. Please check settings