in ,

ಏಪ್ರಿಲ್ 14 ರಂದು ರಾಜ್ಯಾದ್ಯಂತ ರೈತರ ಕಥೆಯಾಧಾರಿತ ಚಿತ್ರ ಶ್ರೀಮಂತ ಬಿಡುಗಡೆ

suddione whatsapp group join

 

ವರದಿ ಮತ್ತು ಫೋಟೋ ಕೃಪೆ

ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮಾ.18) : ಶ್ರೀಮಂತ ಚಿತ್ರದಲ್ಲಿ ರೈತನ ಬದುಕು ಭವಣೆ ಆನಾವರಣವಾಗಿದ್ದು, ಈತನೇ ಜಗತ್ತಿನ ಅತೀ ದೊಡ್ಡ ಶ್ರೀಮಂತ ಎಂದು ಸಾಕ್ಷಿಕರಿಸುವ, ಮರೆಯಾಗುತ್ತಿರುವ ಹಳ್ಳಿಯ ಸುಗ್ಗಿ, ಹಬ್ಬ, ಹಾಡು ಹಸೆ, ಹಳ್ಳಿ ಆಟಗಳು ಗ್ರಾಮೀಣ ಕೆಲಗಳ ಸಂಭ್ರಮಗಳನ್ನು ನೆನಪಿಸುವುದರೊಂದಿಗೆ ಕರ್ನಾಟಕ ಜನಪದ, ಕಲೆ, ಸಾಹಿತ್ಯ, ಸಂಸ್ಕೃತಿ ಸಂಭ್ರಮಗಳನ್ನು ತಿಳಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಮನರಂಜಿಸುವುದು ಚಿತ್ರದ ಉದ್ದೇಶವಾಗಿದೆ ಎಂದು ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಸನ್ ರಮೇಶ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರ ಸಂದೇಶ ಮತ್ತು ಮನರಂಜನೆಯನ್ನು ನೀಡುವ ಚಿತ್ರ ಇದಾಗಿದೆ. ಏ. 14 ರಂದು ರಾಜ್ಯದಲ್ಲಿ 200 ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಜಿಲ್ಲಾವಾರು ಪ್ರವಾಸ ಮಾಡುವುದರ ಮೂಲಕ ಚಿತ್ರವನ್ನು ಪ್ರಚಾರ ಮಾಡಲಾಗುತ್ತಿದೆ. ಇದು ಪೂರ್ಣ ಪ್ರಮಾಣದಲ್ಲಿ ರೈತನಿಗೆ ಸಂಬಂಧಪಟ್ಟ ಚಿತ್ರವಾಗಿದ್ದು, ರೈತರು ಎಲ್ಲದರಲ್ಲೂ ಸಹಾ ಶ್ರೀಮಂತನಾಗಿದ್ದಾನೆ. ಕಲಾವಿದರಾದ ಸೋನು ಸೂದ್ದುರವರು ಮೊದಲ ಬಾರಿಗೆ ನಾಯಕರಾಗಿ ನಟನೆಯನ್ನು ಮಾಡಿದ್ದಾರೆ ಎಂದರು.

ಇದೇ ಪ್ರಥಮ ಬಾರಿಗೆ ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ವೈಷ್ಣವಿ ಪಟವರ್ಧನ್ ವೈಷ್ಣವಿ ಚಂದನ್‍ರವರಾಗಿದ್ದಾರೆ. ಇವರೊಂದಿಗೆ ಕ್ರಾಂತಿ ಎಂಬ ಹೂಸ ಯುವ ಪ್ರತಿಭೆಯನ್ನು ಪರಿಚಯಿಸಲಾಗುತ್ತಿದೆ. ಇದರೊಂದಿಗೆ ಹಿರಿಯಬ ಕಲಾವಿದರಾದ ರಮೇಶ್ ಭಟ್, ರವಿಶಂಕರ್ ಗೌಡ, ಸಾಧು ಕೋಕಿಲ, ಚರಣ್ ರಾಜ್, ರಾಜು ತಾಳಿಕೋಟೆ, ಬ್ಯಾಂಕ್ ಮಂಜಣ್ಣ ಸೇರಿದಂತೆ ಗ್ರಾಮೀಣ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ ಎಂದು ತಿಳಿಸಿದರು.

ಚಿತ್ರಕ್ಕೆ ಸಂಗೀತವನ್ನು ಹಂಸಲೇಖರವರು ನೀಡಿದ್ದು, ರವಿಕುಮಾರ್ ಛಾಯಾಗ್ರಹಣ, ಪ್ರಕಾಶ ಸಂಕಲನ, ಮಾಸ್ ಮಾಧು ಸಾಹಸ, ಮಧನ್ ಹರಿಣಿ ಹಾಗೂ ಮೋಹನ್ ನೃತ್ಯವನ್ನು ಸಂಯೋಜಿಸಿದ್ದಾರೆ. ಚಿತ್ರ ನಿರ್ಮಾಣದಲ್ಲಿ ನನ್ನ ಜೊತೆಯಲ್ಲಿ ನಾರಾಯಣಪ್ಪ ಹಾಗೂ ಸಂಜಯ್ ಬಾಬು ಕೈಜೋಡಿಸಿದ್ದಾರೆ. ರೈತ ನಿಸ್ವಾರ್ಥ ಪ್ರಮಾಣಿಕ ವ್ಯಕ್ತಿಯಾಗಿದ್ದಾನೆ ತಾನು ಬೆಳೆದ ಬೆಳೆಯನ್ನು ತನಗಾಗಿ ಇಟ್ಟುಕೊಳ್ಳದೇ ಬೇರೆಯರಿಗಾಗಿ ನೀಡುತ್ತಾನೆ, ತನ್ನ ಕೆಲಸದೊಂದಿಗೆ ಕಲೆ. ಸಂಸ್ಕøತಿ, ಆಚಾರ ವಿಚಾರದಲ್ಲಿ ಶ್ರೀಮಂತನಾಗಿದ್ದಾನೆ, ಇದಲ್ಲದೆ ವಿಜ್ಞಾನ, ಕಲೆ, ಸಾಹಿತ್ಯದಲ್ಲಿಯೂ ಸಹಾ ಶ್ರೀಮಂತನಾಗಿದ್ದಾನೆ ಎಂದು ಹಾಸನ್ ರಮೇಶ್ ತಿಳಿಸಿದರು.

ಗೋಷ್ಠಿಯಲ್ಲಿ ಕ್ರಾಂತಿ, ಬ್ಯಾಂಕ್ ಮಂಜಣ್ಣ, ಸತೀಶ್, ಸಂಜಯ ಬಾಬು, ಪಟೇಲ್ ಭಾಗವಹಿಸಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅವಘಡ..!

ಹ್ಯಾಂಡ್‍ಬಾಲ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ  : ಬಾಲಕಿಯರ ರಾಜ್ಯ ತಂಡದ ನಾಯಕಿಯಾಗಿ ಚಿತ್ರದುರ್ಗದ ಸಾನಿಯಾ