ಲವ್ ಜಿಹಾದ್ ಕಾನೂನು ಬಗ್ಗೆ ಉರ್ದು ಕವಿ ಮುನವ್ವರ್ ಕಿಡಿ

 
ಲವ್ ಜಿಹಾದ್ ಕಾನೂನು ಬಗ್ಗೆ ಉರ್ದು ಕವಿ ಮುನವ್ವರ್ ಕಿಡಿ

ಲಕ್ನೋ : ಉತ್ತರಪ್ರದೇಶದ ಸರ್ಕಾರ “ಲವ್ ಜಿಹಾದ್” ವಿರುದ್ಧ ಕಾನೂನನ್ನೇ ರೂಪಿಸಲು ಮುಂದಾಗಿದೆ. ಆದರೆ, ಉತ್ತರಪ್ರದೇಶದ ಅಲಹಾಬಾದ್ ಉಚ್ಚ ನ್ಯಾಯಾಲಯ ವಯಸ್ಸಿಗೆ ಬಂದ ಯಾವುದೇ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಬಾಳಲು ಕಾನೂನಿನಲ್ಲಿ ಅವಕಾಶ ಇದೆ. ಅವರಿಬ್ಬರ ಶಾಂತಿಯುತ ಬದುಕಿಗೆ ಬೇರಾವುದೇ ವ್ಯಕ್ತಿ ಅಥವಾ ಕುಟುಂಬದಿಂದ ತೊಂದರೆ ಆಗಬಾರದು. ಸರ್ಕಾರ ಕೂಡ ಇಬ್ಬರು ವಯಸ್ಕರ ಸಂಬಂಧಕ್ಕೆ ಅಡ್ಡಗಾಲು ಹಾಕುವಂತಿಲ್ಲ” ಎಂದು ಮಹತ್ವದ ತೀರ್ಪು ನೀಡಿದೆ.

ರಾಜ್ಯದಲ್ಲೂ ಲವ್ ಜಿಹಾದ್ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ. ಈ ವಿಚಾರವಾಗಿ, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿರುವ ಖ್ಯಾತ ಉರ್ದು ಕವಿ ಮುನವ್ವರ್ ರಾಣಾ “ಈ ಲವ್ ಜಿಹಾದ್ ಕಾಯ್ದೆಯನ್ನು ಮೊದಲು ಬಿಜೆಪಿ ನಾಯಕರ ಕುಟುಂಬಗಳ ಮೇಲೆ ಪ್ರಯೋಗಿಸಿ” ಎಂದು ಕಿಡಿಕಾರಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮುನವ್ವರ್ ಲವ್ ಜಿಹಾದ್ ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಬಿಜೆಪಿ ನಾಯಕರ ಎರಡು ಪ್ರಮುಖ ಕುಟುಂಬಗಳು ತಮ್ಮ ಧರ್ಮದಿಂದ ಹೊರಗೆ ಮುಸ್ಲಿಂ ಹುಡುಗಿಯರನ್ನು ಸೊಸೆಯಾಗಿ ಪಡೆದಿದ್ದಾರೆ. ಇದಲ್ಲದೆ, ಹಲವು ನಾಯಕರು ತಮ್ಮ ಧರ್ಮದಿಂದ ಹೊರಗೆ ಬೇರೆ ಧರ್ಮದಲ್ಲಿ ಸಂಬಂಧ ಹೊಂದಿದ್ದಾರೆ. ಲವ್ ಜಿಹಾದ್ ಕಾನೂನನ್ನು ಮೊದಲು ಈ ಕುಟುಂಬಗಳ ಮೇಲೆ ಪ್ರಯೋಗಿಸಬೇಕು. ಹೀಗೆ ಪ್ರಯೋಗಿಸಿದರೆ ಮಾತ್ರ ನಾವು ಈ ಕಾನೂನಿಗೆ ಬೆಂಬಲ ನೀಡುತ್ತೇವೆ” ಎಂದು ವಾಗ್ದಾಳಿ ನಡೆಸಿದ್ದಾರೆ.

From around the web

Trending Today
Featured