ಕೊರೊನಾ ಸಾವಿನ ಲೆಕ್ಕ ಸೇರಿದ ಗಾಂಧಿ ಮರಿಮೊಮ್ಮಗ

 
ಕೊರೊನಾ ಸಾವಿನ ಲೆಕ್ಕ ಸೇರಿದ ಗಾಂಧಿ ಮರಿಮೊಮ್ಮಗ

ಜೋಹಾನ್ಸಬರ್ಗ್ :ಯಾರು ಮುಖ್ಯರಲ್ಲ…ಯಾರು ಅಮುಖ್ಯರಲ್ಲ ಎಂಬಂತೆ ಕೊರೊನಾ ಮಹಾಮಾರಿ ಬಲಿ ತೆಗೆದುಕೊಳ್ಳುತ್ತಲೇ ಇದೆ. ಈ ಸಾವಿನ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ಸತೀಶ್ ಧುಪೆಲಿಯಾ.
ಸೌಥ್ ಆಫ್ರಿಕಾದಲ್ಲಿ ನೆಲೆಸಿರುವ ಸತೀಶ್ ಧುಪೆಲಿಯಾರನ್ನು ಕೊರೊನಾ ತನ್ನ ಸಾವಿನ ಲೆಕ್ಕಕ್ಕೆ ಸೇರಿಸಿಕೊಂಡಿದೆ. ಇನ್ನು ಮೂರು ದಿನಗಳಲ್ಲಿ 66 ನೇ ವರ್ಷಕ್ಕೆ ಕಾಲಿಡಿಲ್ಲದ್ದ ಸತೀಶ್ ಸಾವಿನ ಮನೆ ಸೇರಿದ್ದಾರೆ.
ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸತೀಶ್ ಧುಪೆಲಿಯಾರನ್ನು ನ್ಯೂಮೋನಿಯಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೊರೊನಾ ದೇಹ ಪ್ರವೇಶಿಸಿದೆ. ಚಿಕಿತ್ಸೆ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಸೋದರಿ ಉಮಾ ಧುಪೆಲಿಯಾ ಸೋದರನ ಸಾವನ್ನು ಖಚಿತಪಡಿಸಿದ್ದಾರೆ. ಸತೀಶ್ ಅವರ ಇನ್ನೋರ್ವ ಸೋದರಿ ಕೀರ್ತಿ ಮೆನನ್ ಜೊಹಾನ್ಸಬರ್ಗ್ ನಲ್ಲಿ ವಾಸವಾಗಿದ್ದಾರೆ.

From around the web

Trending Today
Featured