“ಡೆಲ್ಲಿ ಕ್ರೈಂ” ವೆಬ್ ಸರಣಿಗೆ ಅಂತರರಾಷ್ಟ್ರೀಯ ಎಮ್ಮಿ ಅವಾರ್ಡ್

 
“ಡೆಲ್ಲಿ ಕ್ರೈಂ” ವೆಬ್ ಸರಣಿಗೆ ಅಂತರರಾಷ್ಟ್ರೀಯ ಎಮ್ಮಿ ಅವಾರ್ಡ್

ಬೆಂಗಳೂರು :2012ರ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಘಟನೆ ಆಧಾರಿತವಾಗಿ 2019ರ ಮಾರ್ಚ್‍ನಲ್ಲಿ ನಿರ್ಮಾಣವಾಗಿದ್ದ ನೆಟ್‌ಫ್ಲಿಕ್ಸ್ ವೆಬ್ ಸರಣಿ “ಡೆಲ್ಲಿ ಕ್ರೈಂ” ಅಂತರರಾಷ್ಟ್ರೀಯ ಎಮ್ಮಿ ಅವಾರ್ಡ್ 2020 ನ ಅತ್ಯುತ್ತಮ ಡ್ರಾಮಾ ಸೀರೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

“ಡೆಲ್ಲಿ ಕ್ರೈಂ” ಭಾರತದಿಂದ ಎಮ್ಮಿ ಪ್ರಶಸ್ತಿ ಪಡೆದ ಮೊದಲ ಕಾರ್ಯಕ್ರಮವಾಗಿದೆ. ರಿಚಿ ಮೆಹ್ತಾ ನಿರ್ದೇಶನದ ‘ಡೆಲ್ಲಿ ಕ್ರೈಂ’, ನೆಟ್‌ಫ್ಲಿಕ್ಸ್ ವೆಬ್ ಸರಣಿಯಲ್ಲಿ ಶೆಫಾಲಿ ಷಾ, ರಸಿಕಾ ದುಗಲ್, ಆದಿಲ್ ಹುಸೇನ್, ರಾಜೇಶ್ ತೈಲಾಂಗ್, ವಿನೋದ್ ಶೆರಾವತ್, ಡೆನ್ಜಿಲ್ ಸ್ಮಿತ್, ಗೋಪಾಲ್ ದತ್, ಯಶಸ್ವಿನಿ ದಯಾಮಾ ಮತ್ತು ಜಯ ಭಟ್ಟಾಚಾರ್ಯ ಮೊದಲಾದವರು ನಟಿಸಿದ್ದರು.
ನಿರ್ದೇಶಕ ರಿಚಿ ಈ ಪ್ರಶಸ್ತಿಯನ್ನು ಸ್ವೀಕರಿಸಿವಾಗ ಸಂತ್ರಸ್ತೆ ಮತ್ತು ಅವಳ ತಾಯಿಗೆ ಗೌರವ ಸಲ್ಲಿಸಿದ್ದಾರೆ. ವೆಬ್ ಸೀರೀಸ್ ಪ್ರಮುಖ ಪಾತ್ರಧಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

From around the web

Trending Today
Featured