ಮಗಳ ಮದುವೆಗೆಂದು ಇಟ್ಟಿದ್ದ 9.2 ಲಕ್ಷ ಹಣ ಬೂದಿ !
Tue, 24 Nov 2020

ಶ್ರೀ ಕಾಕುಳಂ : ಜಿಲ್ಲೆಯ ಕೊತ್ತೂರಿನ ಹಂಸ ಕಾಲನಿಯಲ್ಲಿ ಸೋಮವಾರ ಅಗ್ನಿ ದುರಂತ ಸಂಭವಿಸಿದೆ.
ಈ ಘಟನೆಯಲ್ಲಿ ಕೃಷ್ಣಮೂರ್ತಿ ಮತ್ತು ಗೋಪಾಲ್ ಎಂಬುವವರಿಗೆ ಸೇರಿದ ಮನೆಗಳು ಸುಟ್ಟು ಹೋಗಿವೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಭವಿಸಿದ ಈ ಅಗ್ನಿ ದುರಂತದಲ್ಲಿ ಕೃಷ್ಣಮೂರ್ತಿಗೆ ಸೇರಿದ 9.20 ಲಕ್ಷ ರೂಪಾಯಿ ನಗದು ಮತ್ತು ಏಳು ತುಲಾ ಬಂಗಾರದ ಆಭರಣಗಳು ಸುಟ್ಟ ಹೋಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಮಗಳ ವಿವಾಹಕ್ಕಾಗಿ ಹಣ ಮತ್ತು ಆಭರಣಗಳನ್ನು ತಂದು ಸಿದ್ದತೆ ಮಾಡಿಕೊಂಡಿದ್ದರು.ಇಷ್ಟೇ ಅಲ್ಲದೆ ಮನೆಯಲ್ಲಿ ಟಿವಿ, ವಾಷಿಂಗ್ ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳು ಸಹಾ ಸುಟ್ಟ ಹೋಗಿವೆ. ಇದರೊಂದಿಗೆ ಕೃಷ್ಣಮೂರ್ತಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಗ್ನಿ ಆಕಸ್ಮಿಕ ಸಂಭವಿಸಿದೆ ಎಂದು ತಿಳಿದ ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು.
From around the web
Trending Today
Featured