ನೀವುಗಳೇನು ಲೈಬ್ರರಿನಾ ನಿಮ್ಮ ಬಳಿ ಜನ ಬರೋಕೆ: ಸಂತೋಷ್ ಜೀ ಕ್ಲಾಸ್

 
ನೀವುಗಳೇನು ಲೈಬ್ರರಿನಾ ನಿಮ್ಮ ಬಳಿ ಜನ ಬರೋಕೆ: ಸಂತೋಷ್ ಜೀ ಕ್ಲಾಸ್

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಹಾಗೂ ರಾಜಕೀಯ ಬೆಳವಣಿಗೆಗಳ ನಡುವೆ ಸೋಮವಾರ ರಾಜ್ಯಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ನಗರದ ಖಾಸಗಿ ಹೋಟೆಲ್ ಗ್ರಾಮ ಪಂಚಾಯತ್ ಚುನಾವಣೆ ಸಂಬಂಧ ನಡೆದಿದ್ದ ಸಂಘಟನಾ ಸಭೆಯಲ್ಲಿ ಮಾತನಾಡಿ, ಜನರು ಜ್ಞಾನ ಹೆಚ್ಚಿಸಿಕೊಳ್ಳಲು ಲೈಬ್ರರಿಗೆ ಬರುತ್ತಾರೆ. ನೀವುಗಳೇನು ಲೈಬ್ರರಿನಾ ನಿಮ್ಮ ಬಳಿ ಹುಡುಕಿಕೊಂಡು ಬರಲು ಎಂದು ಸಚಿವರು, ಸಂಸದರು, ಶಾಸಕರು ಹಾಘೂ ರಾಜ್ಯ ಪದಾಧಿಕಾರಿಗಳನ್ನು ಖಡಕ್ ಆಗಿ ಪ್ರಶ್ನಿಸಿದರು.

ನಿಮ್ಮ ಪ್ರಭಾವ, ಪ್ರಬುದ್ಧತೆ ಬಗ್ಗೆ ನಮಗೆ ಗೌರವವಿದೆ. ಪ್ರವಾಸ ಮಾಡದೇ, ಸಂಘಟನೆ ಮಾಡದಿದ್ದರೆ ನೀವು ಏನಾಗಿದ್ದರು ಪ್ರಯೋಜನವಿಲ್ಲ. ಯಾವುದೇ ಕಾರಣ ನೀಡದೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲೇಬೇಕು. ಪಕ್ಷದ ಕೆಲಸ ಮಾಡದಿದ್ದರೆ ನಿಮ್ಮನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

From around the web

Trending Today
Featured