ಜೋಗಿಮಟ್ಟಿಯಲ್ಲಿ ಶ್ರೀ ಕಾಲಭೈರವ ಜಯಂತಿ

 
ಜೋಗಿಮಟ್ಟಿಯಲ್ಲಿ ಶ್ರೀ ಕಾಲಭೈರವ ಜಯಂತಿ

ಚಿತ್ರದುರ್ಗ : ಜಿಲ್ಲಾ ಜೋಗಿ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಜೋಗಿಮಟ್ಟಿಯಲ್ಲಿ ಶ್ರೀ ಕಾಲಭೈರವ ಜಯಂತಿ ಆಚರಿಸಲಾಯಿತು.

ನಗರದ ಚಂದ್ರವಳ್ಳಿಯ ಹುಲೆಗೊಂದಿ ಸಿದ್ದೇಶ್ವರಸ್ವಾಮಿಯ ಪೂಜೆ ಸಲ್ಲಿಸಿ ಬಳಿಕ ಕನಕದಾಸರು, ಸಂಗೋಳ್ಳಿರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಒನಕೆ ಓಬವ್ವ ಮತ್ತು ಮದಕರಿನಾಯಕನ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಶ್ರೀ ಪೀರ್ ನಿವೃತ್ತನಾಥ್‍ಜೀ ಮಾತನಾಡಿ, ಸ್ವಾಮೀಜಿಗಳು ಎಂದರೆ ಸಮಾಜದ ಏಳಿಗೆ ಮತ್ತು ಸಮುದಾಯದಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ನೀಡಬೇಕು. ಜೋಗಿ ಅಥವಾ ಯೋಗಿಗಳಿಗೆ ನಿರ್ಜೀವ ವಸ್ತುಗಳಿಗೆ ಸಹ ಜೀವ ತುಂಬುವ ಶಕ್ತಿ ನಮಗಿದೆ. ಈ ದಿನ ಚಿತ್ರದುರ್ಗದ ಪ್ರಮುಖ ಪುತ್ತಳಿಗಳಿಗೆ ಮಾಲಾರ್ಪಣೆ ಮಾಡುವುದರ ಜೊತೆಗೆ ಪೂಜೆ ಮತ್ತು ನಾದಗಳಿಂದ ಗೌರವಿಸಿರುವುದು ನಮ್ಮ ಸಮಾಜದವರು ಸಹ ಜಾತ್ಯಾತೀತ ಮನೋಭಾವನೆಯಲ್ಲಿದ್ದಾರೆ ಎಂದು ಪ್ರಶಂಸಿದರು.

ಪರಮ ಪೂಜ್ಯ ಶ್ರೀ ಪೀರ್ ಜಗದೀಶ್‍ನಾಥ್.ಜಿ ಮಾತನಾಡಿ, ರಾಜ್ಯಾದ್ಯಂತ ಜೋಗಿ ಸಮಾಜದ ಸಂಘಟನೆ ಅವಶ್ಯಕ. ಜೋಗಿ ಸಮಾಜ ಸಾಂಸ್ಕøತಿಕ ರಂಗದಲ್ಲಿ ಅತೀ ಹೆಚ್ಚು ಪ್ರಸಿದ್ಧವಾಗಿದೆ. ಧಾರ್ಮಿಕ ವಿಚಾರದಲ್ಲಿ ಜೋಗಿಗಳು ತನ್ನದೇ ಆದಂತಹ ಪ್ರಾತಿನಿಧ್ಯವನ್ನು ಪಡೆದಿದೆ. ತಾವುಗಳು ಮುಖ್ಯವಾಹಿನಿಗೆ ಬಂದು ಸಮಾಜದ ಅಭಿವೃದ್ಧಿಯತ್ತ ಗಮನಹರಿಸಬೇಕೆಂದು ಆಶೀರ್ವದಿಸಿದರು.

ಸಂಘದ ಅಧ್ಯಕ್ಷ ಡಾ.ಜಗದೀಶ್ ಮಾತನಾಡಿ, ಜೋಗಿ ಸಮಾಜವು. ಜೋಗಿ ಸಮುದಾಯಕ್ಕೆ ಯಾವುದೇ ಪ್ರಜಾಪ್ರತಿನಿಧಿಗಳು ಇಲ್ಲದೇ ಇರುವುದರಿಂದ ನಮ್ಮ ಸಮಸ್ಯೆಗಳಿಗೆ ಧ್ವನಿ ಇಲ್ಲದಂತಾಗಿದೆ. ಪ್ರಸ್ತುತ ದಿನಗಳಲ್ಲಿ ಕಾಲಭೈರವ ಜಯಂತಿ ಮತ್ತು ಜೋಗಿ ಅಭಿವೃದ್ಧಿ ನಿಗಮ ಮಂಡಳಿ ಆಗಬೇಕೆಂದು ರಾಜ್ಯ ಸರ್ಕಾರಕ್ಕೆ ರಾಜ್ಯದ್ಯಂತ ಜೋಗಿ ಸಮಾಜವು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿದರು.

ಅಧ್ಯಕ್ಷರಾದ ರಾಜಶೇಖರ್ ಜೋಗಿ ಮಾತನಾಡಿ, ರಾಜ್ಯಾಧ್ಯಂತ ಸುಮಾರು ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಿಕ್ಷಣಕ್ಕೆ ಆಧ್ಯತೆ ಕೊಟ್ಟರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ.ಆನಂದಪ್ಪ ಜೋಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮನಾಥ್ ಬಳೆಗಾರ್, ರಾಜ್ಯ ಸಂಯೋಜಕ ರಮೇಶ್‍ಜೋಗಿ ಹೆಮ್ಮಡಿ, ರಮೇಶ್‍ಜೋಗಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಯರ್ರಿಸ್ವಾಮಿ, ಅಯ್ಯಪ್ಪ, ಹುಲುಗಪ್ಪ, ಮಂಜು ಶಿವಪುರ, ಮಂಜುನೇರ್ಲಗಿ, ಅಂಜುಪ್ರಕಾಶ್, ವೆಂಕಟೇಶ್, ಶಿವಸಾಗರ, ಬಸವರಾಜ್, ಕೆ.ಆರ್.ಸಿದ್ಧರಾಜ್‍ಜೋಗಿ, ಸಿದ್ದೇಶ್‍ಜೋಗಿ, ವಿಜಯಜೋಗಿ, ನಾಗೇಶ್‍ಜೋಗಿ, ಕುಮಾರಸ್ವಾಮಿಜೋಗಿ, ತೋಟಪ್ಪಜೋಗಿ, ಸಿದ್ದೇಶ್‍ಸ್ವಾಮಿಜೋಗಿ, ಶೇಖರ್‍ಬಳೆಗಾರ್‍ಜೋಗಿ, ಶಿವುಜೋಗಿ, ಮಂಜುನಾಥ್, ತಿಪ್ಪೇಶ್‍ಜೋಗಿ, ತ್ಯಾಗರಾಜ್, ಸಿದ್ದಲಿಂಗಯ್ಯಜೋಗಿ, ಸಿದ್ಧರಾಜ್‍ಜೋಗಿ, ಪ್ರತಾಪ್‍ಜೋಗಿ, ಸುಷ್ಮ ಉಪಸ್ಥಿತರಿದ್ದರು.

From around the web

Trending Today
Featured