ಮೈಸೂರಿಗೆ ಇಬ್ಬರು ರಾಣಿಯರಿದ್ದಾರೆ, ಇವರೇನು ಮಹಾರಾಣಿಯಾವುದು ಬೇಡ : ರೋಹಿಣಿ ಸಿಂಧೂರಿ ಬಗ್ಗೆ ಕಿಡಿ

 
ಮೈಸೂರಿಗೆ ಇಬ್ಬರು ರಾಣಿಯರಿದ್ದಾರೆ, ಇವರೇನು ಮಹಾರಾಣಿಯಾವುದು ಬೇಡ : ರೋಹಿಣಿ ಸಿಂಧೂರಿ ಬಗ್ಗೆ ಕಿಡಿ

ಮೈಸೂರು: ರೋಹಿಣಿ ಸಿಂಧೂರಿಗೆ ಮಹಾರಾಣಿ ರೀತಿ ವರ್ತಿಸಬೇಡಿ ಎಂದು ಹುಣಸೂರು ಶಾಸಕ ಎಚ್ ಪಿ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಅವರು ಮೈಸೂರು ಅರಮನೆಗೆ ಈಗಾಗಲೇ ರಾಣಿಯರಾಗಿ ಪ್ರಮೋದಾದೇವಿ, ತ್ರಿಶಿಖಾ ಇದ್ದಾರೆ. ನೀವು ಮಹಾರಾಣಿಯಾಗಿ ಮೆರೆಯಬೇಡಿ. ಅಧಿಕಾರಿಯಾಗಿ ಜನರ ಸಮಸ್ಯೆಗೆ ಸ್ಪಂದನೆ ಮಾಡಿ ಎಂದು ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಶಾಸಕ ಹೆಚ್. ಪಿ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾನು ಕಾಂಗ್ರೆಸ್ ಪಕ್ಷದವನು ಎಂಬ ಕಾರಣಕ್ಕೋ ಏನೋ ನನ್ನ ಪತ್ರಗಳಿಗೆ ಸ್ಪಂದಿಸುತ್ತಿಲ್ಲ. ಶಾಸಕ ಎಂಬ ಕನಿಷ್ಠ ಸೌಜನ್ಯವನ್ನೂ ಅವರು ತೋರುತ್ತಿಲ್ಲ. ಸ್ಪರ್ಧೆಗೆ ಬಿದ್ದವರಂತೆ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದಾರೆ. ಕಡತಕ್ಕೆ ಸಹಿ ಹಾಕಲು ವರ್ಗಾವಣೆ ಪ್ರಕರಣ ಕೋರ್ಟ್ನಲ್ಲಿದೆ ಎಂದು ನೆಪ ಹೇಳುತ್ತಿದ್ದಾರೆ. ನಾನು ರಾಜೀನಾಮೆ ನೀಡಲು ಸಿದ್ಧ. ಬಿಜೆಪಿಯವರೇ ಶಾಸಕರಾಗಿ ಆಯ್ಕೆಯಾಗಲಿ. ಕ್ಷೇತ್ರದ ಅಭಿವೃದ್ಧಿಯಾದರೆ ಸಾಕು’ ಎಂದು ಹೇಳಿದರು.

ಹುಣಸೂರು ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಇದೆ. ಆದರೆ ಯಾವುದಕ್ಕೂ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ. ಅವರು ಅವರದ್ದೇ ಆದ ಭ್ರಮಾ ಲೋಕದಲ್ಲಿದ್ದಾರೆ. ತ್ರೈಮಾಸಿಕ ಸಭೆ ಇರುವುದು ನಾವು ಕ್ಷೇತ್ರದ ಸಮಸ್ಯೆ ಬಗೆಹರಿಸಿಕೊಳ್ಳಲು. ಇಲ್ಲಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಆದರೆ, ಈ ಬಾರಿ ಹಾಗೆ ಆಗಲಿಲ್ಲ. ರೋಹಿಣಿ ಸಿಂಧೂರಿ ಅವರು ತಮ್ಮನ್ನು ಏನು ಅಂತ ತಿಳಿದುಕೊಂಡಿದ್ದಾರೋ ಗೊತ್ತಿಲ್ಲ. ಸಭೆಯಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲೇ ಪ್ರೋಟೋಕಾಲ್ ಮಿಸ್ ಆಗಿದೆ ಎಂದು ಕೆಡಿಪಿ ಸಭೆ ಬಳಿಕ ಹೆಚ್ಪಿ.ಮಂಜುನಾಥ್ ಕಿಡಿಕಾರಿದ್ದಾರೆ.

From around the web

Trending Today
Featured