ಹಿರೇಗುಂಟನೂರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ: ವಿವಿಧ ಕಾಮಗಾರಿಗೆ ಶಾಸಕ ತಿಪ್ಪಾರೆಡ್ಡಿ ಚಾಲನೆ

 
ಹಿರೇಗುಂಟನೂರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ: ವಿವಿಧ ಕಾಮಗಾರಿಗೆ ಶಾಸಕ ತಿಪ್ಪಾರೆಡ್ಡಿ ಚಾಲನೆ

ಚಿತ್ರದುರ್ಗ : ಜಿಲ್ಲಾ ಪಂಚಾಯಿತಿ ಅಭಿವೃದ್ದಿ ಅನುದಾನದಡಿ ಹಿರೇಗುಂಟನೂರು ಕ್ಷೇತ್ರದ ನಾಲ್ಕು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು.

ಕುರುಬರಹಳ್ಳಿಯಲ್ಲಿ ಹೈಮಾಸ್ ವಿದ್ಯುತ್ ದೀಪ ಅಳವಡಿಕೆಗೆ ಭೂಮಿಪೂಜೆ, ಹುಲ್ಲೂರು ನಾಯಕರಹಟ್ಟಿ ಗ್ರಾಮದಲ್ಲಿ ಗ್ರಂಥಾಲಯ ಹಾಗೂ ಶೌಚಾಲಯ, ಮುಸಂಡಿಹಾಳ್ ಗ್ರಾಮದಲ್ಲಿ ಸಿ.ಸಿ.ರಸ್ತೆ, ಅನ್ನೆಹಾಳ್‍ನಲ್ಲಿ ಹೈಮಾಸ್ ವಿದ್ಯುತ್‍ದೀಪ ಅಳವಡಿಕೆಗೆ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಜಿಪಂ ಸದಸ್ಯೆ ಜಯಪ್ರತಿಭಾ ಅವರ ಅನುದಾನದಡಿ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ರಸ್ತೆ ಕಾಮಗಾರಿ ಯಾವುದೇ ಕಾರಣಕ್ಕೂ ಕಳಪೆಯಾಗಬಾರದು. ಗುಣಮಟ್ಟದಿಂದ ಕೂಡಿರಬೇಕು. ಆದಷ್ಟು ರಸ್ತೆ ಅಗಲವಿದ್ದರೆ ವಾಹನ ಹಾಗೂ ಜನ ಸಂಚಾರಕ್ಕೆ ಸುಗಮವಾಗಲಿದೆ ಎಂದು ತಿಳಿಸಿದರು.

ಕುರುಬರಹಳ್ಳಿ ಹಾಗೂ ಅನ್ನೆಹಾಳ್‍ನಲ್ಲಿ ಹೈಮಾಸ್ ವಿದ್ಯುದ್ದೀಪ ಅಳವಡಿಕೆಯಿಂದ ಗ್ರಾಮದಲ್ಲಿ ರಾತ್ರಿ ವೇಳೆಯಲ್ಲಿ ಹೆಚ್ಚಿನ ಬೆಳಕು ಪ್ರಜ್ವಲಿಸುತ್ತದೆ. ಒಟ್ಟಾರೆ ಹಂತಹಂತವಾಗಿ ಎಲ್ಲಾ ಹಳ್ಳಿಗಳಲ್ಲೂ ಹಿರೇಗುಂಟನೂರು ಕ್ಷೇತ್ರದ ಸದಸ್ಯೆ ಜಯಪ್ರತಿಭಾರವರ ಅನುದಾನದಲ್ಲಿ ಅನೇಕ ಕಾಮಗಾರಿಗಳು ನಡೆಯಲಿದೆ ಎಂದು ಹೇಳಿದರು.

ಹಿರೇಗುಂಟನೂರು ಕ್ಷೇತ್ರದ ಸದಸ್ಯೆ ಜಯಪ್ರತಿಭಾ ನವೀನ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

From around the web

Trending Today
Featured