ಸಿರಿಗೆರೆಯಲ್ಲಿ ಬೋನಿಗೆ ಬಿದ್ದ ಚಿರತೆ ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Tue, 24 Nov 2020

ಚಿತ್ರದುರ್ಗ, (ನ.24) : ಕೆಲ ದಿನಗಳಿಂದ ತಾಲೂಕಿನ ಸಿರಿಗೆರೆಯಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಮಂಗಳವಾರ ಬೋನಿಗೆ ಬಿದ್ದಿದೆ.
ಸಿರಿಗೆರೆ ಸಮೀಪದ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು.
ಚಿರತೆ ಚಲನವಲನದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಕೂಡಲೇ ಜಮೀನಿನಲ್ಲಿ ಬೋನಿಟ್ಟಿತ್ತು. ಮಂಗಳವಾರ ಚಿರತೆ ಬೋನಿಗೆ ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಬೋನಿಗೆ ಬಿದ್ದ ಚಿರತೆ ನೋಡಲು ಸುತ್ತಲಿನ ಭಾಗದ ಗ್ರಾಮಸ್ಥರು ನೆರೆದಿದ್ದರು.
From around the web
Trending Today
Featured