ಇನ್ನೂ ಎರಡೂವರೆ ವರ್ಷ ಬಿಎಸ್‍ವೈ ಸಿಎಂ: ನಳಿನ್ ಕುಮಾರ್ ಕಟೀಲ್

 
ಇನ್ನೂ ಎರಡೂವರೆ ವರ್ಷ ಬಿಎಸ್‍ವೈ ಸಿಎಂ: ನಳಿನ್ ಕುಮಾರ್ ಕಟೀಲ್

ದಾವಣಗೆರೆ:ಕೆಲ ದಿನಗಳಿಂದ ಮುನ್ನಲೆಗೆ ಬಂದಿದ್ದ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೆರೆ ಎಳೆದಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಮಾಡುವ ಪ್ರಶ್ನೆಯಿಲ್ಲ. ಮುಂದಿನ ಎರಡೂವರೆ ವರ್ಷಗಳ ಕಾಲ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದರು.

ನಾನು ಮತ್ತು ಮುಖ್ಯಮಂತ್ರಿಗಳು ಹದಿನೈದು ದಿನಕ್ಕೊಮ್ಮೆ ಭೇಟಿಯಾಗುತ್ತೇವೆ. ನಮ್ಮ ಮಾರ್ಗದರ್ಶಕರಾದ ಸಂತೋಷ್ ಜಿ ಸಲಹೆ ಸೂಚನೆಯಂತೆ ನಾವು ನಡೆಯುತ್ತೇವೆ.
ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ಕಾತುರಕ್ಕೆ ಕೆಲ ದಿನಗಳಲ್ಲಿ ಉತ್ತರ ಸಿಗಲಿದೆ. ಕರ್ನಾಟಕ ಬಂದ್ ವಿಚಾರದಲ್ಲಿ ‘ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡಿಯೇ ಮಾಡುತ್ತದೆ’ ಎಂದರು.

From around the web

Trending Today
Featured