ದ್ವೇಷದ ರಾಜಕಾರಣ ಉಕ್ಕಿ ಹರೀತಿದೆ, ತೊಂದರೆಕೊಟ್ಟವರು ಖುಷಿಯಾಗಿರಲಿ: ಡಿಕೆ ಶಿವಕುಮಾರ್

 
ದ್ವೇಷದ ರಾಜಕಾರಣ ಉಕ್ಕಿ ಹರೀತಿದೆ, ತೊಂದರೆಕೊಟ್ಟವರು ಖುಷಿಯಾಗಿರಲಿ: ಡಿಕೆ ಶಿವಕುಮಾರ್

ಕಲಬುರಗಿ: ಬಿಜೆಪಿಯಿಂದ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ದ್ವೇಷದ ರಾಜಕಾರಣ ವ್ಯಾಪಕವಾಗಿದೆ. ಯಾರ ಮೇಲೂ ಮಾಡದೆ ನನ್ನೊಬ್ಬನಿಗೆ ಯಾಕೆ ಮಾಡ್ತಿದಾರೆ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನೋಟೀಸ್ ಕೊಡ್ತಾರೆ ಅಂದ್ರೆ ಅವರ ದ್ವೇಷ ಎಷ್ಟರಮಟ್ಟಿಗಿದೆ ಅನ್ನೋದು ಅರ್ಥವಾಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರ್ಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ನನಗೆ ತೊಂದರೆ ಕೊಟ್ಟವರು ಯಾವಾಗಲೂ ಖುಷಿಯಾಗಿಯೇ ಇರಲಿ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನನಗೆ ಸಿಬಿಐ ನೋಟೀಸ್ ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಯಾವ ಶಾಸಕರಿಗೂ ನೋಟೀಸ್ ನೀಡಿಲ್ಲ. ಆದ್ರೆ ನನಗೆ ಮಾತ್ರ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ವಿರುದ್ಧ ಎಫ್.ಐ.ಆರ್. ಹಾಕೋ ಜೊತೆಗೆ ನೋಟೀಸ್ ಸಹ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ರಾಜಕೀಯ ಕುಮ್ಮಕ್ಕು ಇಲ್ಲದಿದ್ದಲ್ಲಿ ಸಿಬಿಐ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರಲಿಲ್ಲ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ಆದ್ರೆ ಸಿಬಿಐ ಅಧಿಕಾರಿಗಳು ನ್ಯಾಯ ಸಮ್ಮತ ತನಿಖೆ ನಡೆಸಲಿ. ನಾನು ಕಾನೂನಿಗೆ ಗೌರವ ಕೊಡ್ತೇನೆ.

ನಾಳೆ ಸಿಬಿಐ ಕಛೇರಿಗೆ ವಿಚಾರಣೆಗೆ ಹಾಜರಾಗ್ತೇನೆ. ಯಾರೂ ಸಹ ಗಾಬರಿಪಟ್ಟುಕೊಳ್ಳಬೇಡಿ, ಸಿಬಿಐ ಕಛೇರಿ ಕಡೆ ಬರಬೇಡಿ. ನನ್ನ ಪರವಾದ ಹೇಳಿಕೆಗಳನ್ನೂ ನೀಡಬೇಡಿ ಎಂದು ಕಾಂಗ್ರೆಸ್ ಮುಖಂಡರಿಗೆ ಡಿಕೆಶಿ ಮನವಿ ಮಾಡಿದ್ದಾರೆ.

From around the web

Trending Today
Featured