ಮಾನಸಿಕ ಅಸ್ವಸ್ಥನಿಗೆ ಮಿಡಿದ ಚಳ್ಳಕೆರೆ ಪೊಲೀಸರು

 
ಮಾನಸಿಕ ಅಸ್ವಸ್ಥನಿಗೆ ಮಿಡಿದ ಚಳ್ಳಕೆರೆ ಪೊಲೀಸರು

ಚಳ್ಳಕೆರೆ :ಮಾನಸಿಕ ಅಸ್ವಸ್ಥನನ್ನು ರಕ್ಷಿಸಿದ ಚಳ್ಳಕೆರೆ ಪೊಲೀಸರು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ನಗರದ ನೆಹರು ವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಜನತಾ ಕಾಲೋನಿಯ ಲೇಟ್ ಹನುಮಂತಪ್ಪ ಅವರ ಮಗನಾದ ಮಾನಸಿಕ ಅಸ್ವಸ್ಥ ಅನಿಲ್ ಕುಮಾರ್ ನನ್ನು ಪಿಎಸ್ ಐ ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ ಗಮನಿಸಿದ್ದಾರೆ.

ಪಿಎಸ್ ಐ ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ ಸೂಚನೆಯಂತೆ ಮುಖ್ಯ ಪೇದೆ ಮಂಜಣ್ಣ ಅನಿಲ್ ಕುಮಾರ್ ಗೆ ಹೇರ್ ಕಟ್ ಮಾಡಿಸಿದ್ದಾರೆ. ಬಳಿಕ ಹೋಟೆಲ್ ನಲ್ಲಿ ಊಟ ಮಾಡಿಸಿ ಗೋನೂರು ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟು ಬಂದಿದ್ದಾರೆ.

ಇವರನ್ನು ಕಳುಹಿಸಿ ಮಾನಸಿಕ ಅಸ್ವಸ್ಥ ಅನಿಲ ಕುಮಾರ್ ಗೆ ಹೇರಚ ನಗರದ ಸಲೂನ್ ಶಾಪಿಗೆ ಕರೆದುಕೊಂಡು ಬಂದು ಉದ್ದವಾಗಿ ಬೆಳೆದಿದ್ದ ಗಡ್ಡ ,ಹಾಗು ತಲೆಕೂದಲನ್ನು ನೀಟಾಗಿ ಕತ್ತರಿಸಿ ಹೊಸ ಉಡುಪು ತೊಡಿಸಿ ಹೋಟೆಲ್ ಕರೆ ತಂದು ಹೊಟ್ಟೆ ತುಂಬ ‌ಊಟ ಕೊಡಿಸಿ ಚಿತ್ರದುರ್ಗ ಜಿಲ್ಲೆಯ ಗೂನೂರು ನಿರಾಶ್ರತ ಪರಿಹಾರ ಕೇಂದ್ರಕ್ಕೆ ಬಿಟ್ಟು ಬಂದಿದ್ದಾರೆ.
ಚಳ್ಳಕೆರೆ ಖಾಕಿ ಪಡೆಯ ಕರ್ತವ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌.

From around the web

Trending Today
Featured