ಇಂದು ಅಂಬಿಯ 2ನೇ ವರ್ಷದ ಪುಣ್ಯ ತಿಥಿ

 
ಇಂದು ಅಂಬಿಯ 2ನೇ ವರ್ಷದ ಪುಣ್ಯ ತಿಥಿ

ಬೆಂಗಳೂರು: ಕಲಿಯುಗ ಕರ್ಣ, ಮಂಡ್ಯದ ಗಂಡು, ಅಂಬಿ ಎಂದೇ ಅಭಿಮಾನಿಗಳಿಂದ ಕರೆಯಿಸಿಕೊಂಡಿರುವ ಅಭಿಮಾನ ಆರಾಧ್ಯ ದೈವ ಅಂಬರೀಶ್ ಅವರ ಎರಡನೇ ವರ್ಷದ ಪುಣ್ಯತಿಥಿ. ಅವರು ಅಗಲಿ 2 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿ ಬಳಿ ತೆರಳಿ ಪತ್ನಿ ಸುಮಲತಾ ಪೂಜೆ ಸಲ್ಲಿಸಿದ್ದಾರೆ.

ಪ್ರಯುಕ್ತ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರು ಎಲ್ಲರನ್ನೂ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು. ಎಲ್ಲರ ಪ್ರೀತಿ ಗಳಿಸಿ ಆ ಪ್ರೀತಿಯನ್ನ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ. ಇದಕ್ಕಿಂತ ಹೆಮ್ಮೆ ಯಾವುದೂ ಇಲ್ಲ ಎಂದರು.

ಇಂದು ಅಂಬಿಯ 2ನೇ ವರ್ಷದ ಪುಣ್ಯ ತಿಥಿ

ಇನ್ನು ಅಂಬಿಯ ಅಭಿಮಾನಿಗಳು ಮಂಡ್ಯದ ಮದ್ದೂರು ತಾಲೂಕಿನ ಹೊಟ್ಟೇಗೌಡನ ದೊಡ್ಡಿಯಲ್ಲಿ ಅಂಬರೀಷ್ ಅವರಿಗಾಗಿ ಗುಡಿಯನ್ನೇ ನಿರ್ಮಿಸಿದ್ದಾರೆ. ಅವರ ಪುಣ್ಯಸ್ಮರಣೆಯ ದಿನವಾದ ಇಂದು ಲೋಕಾರ್ಪಣೆಗೊಳ್ಳಲಿದೆ.

ಅಂಬಿಗೆ ತಮ್ಮೂರಿನ ಮೇಲೆ ಇದ್ದ ಅವಿನಾಭಾವ ಸಂಬಂಧಕ್ಕೆ ಅವರ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸೇರಿ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಗುಡಿ ನಿರ್ಮಿಸಿದ್ದಾರೆ. ಅಂಬಿಯ ಚಿತಾಭಸ್ಮ ಹಾಕಿ ಗುಡಿ ನಿರ್ಮಾಣ ಮಾಡಲಾಗಿದ್ದು, ಅಂಬರೀಷ್ ಅವರ ಕಂಚಿನ ಪ್ರತಿಮೆ ಸ್ಥಾಪಿಸಲಾಗಿದೆ. ಅದರ ರಕ್ಷಣೆಗಾಗಿ ಸಿಸಿಟಿವಿ ಕಣ್ಗಾವಲು, ಗುಂಡಿಯ ಅಂದಕ್ಕೆ ಚಿಕ್ಕ ಪಾರ್ಕ್ ಕೂಡಾ ನಿರ್ಮಾಣ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಸುಮಲತಾ, ಮಂಡ್ಯದಲ್ಲಿ ನಿಜಕ್ಕೂ ಅಂಬಿ ಗುಡಿ ಕಟ್ಟಿರೋದು ಅದ್ಭುತ. ಆ ಊರಿನವರು ನನ್ನಿಂದ ಯಾವುದೇ ಸಹಾಯ ತಗೊಂಡಿಲ್ಲ. ನನಗೆ ಇದು ಸರ್ಪ್ರೈಸ್, ಜೊತೆಗೆ ಅಂಬಿ ಪ್ರೀತಿಗೆ ಕಂಚಿನ ಪುತ್ಥಳಿ ಸಂಕೇತ. ಅವರು ಬದುಕಿದ್ದಾಗ ಪ್ರತಿದಿನ ಜನರ ಮಧ್ಯೆ ಇರುತ್ತಿದ್ದರು ಎಂದು ತಿಳಿಸಿದರು.

From around the web

Trending Today
Featured