ಆಕ್ಟ್-1978 ಚಿತ್ರ ತಂಡದ ಜತೆ ನಿಂತ ಡಿ ಬಾಸ್

 
ಆಕ್ಟ್-1978 ಚಿತ್ರ ತಂಡದ ಜತೆ ನಿಂತ ಡಿ ಬಾಸ್

ಬೆಂಗಳೂರು : ಕರೊನಾ ಲಾಕ್‍ಡೌನ್ ನಂತರ ಕನ್ನಡ ಪ್ರೇಕ್ಷಕರ ಮೇಲೆ ನಂಬಿಕೆಯಿಂದ ಬಿಡುಗಡೆಯಾದ ‘ಆಕ್ಟ್-1978’ ಚಿತ್ರವು ತೆರೆಕಂಡು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ.

ಬಿಗ್ ಬಜೆಟ್ ಚಿತ್ರಗಳ ರೀಲಿಸ್‍ಗೂ ಮುನ್ನ ‘ಆಕ್ಟ್-1978’ ತೆರೆ ಕಂಡಿದೆ. ಈ ಮೂಲಕ ಕನ್ನಡ ಪ್ರೇಕ್ಷಕ ಎಂದಿಗೂ ಕೈ ಬಿಡುವುದಿಲ್ಲ ಎಂಬುದನ್ನು ಈ ಚಿತ್ರ ತೋರಿಸಿದೆ.

https://drive.google.com/drive/folders/11STJY-vSzG97n_oOUSAtl_dPNvhOri9S?usp=sharing

ಭಾನುವಾರ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕೂಡ ಆಗಿದೆ. ಈ ಸಂಭ್ರಮದಲ್ಲಿರುವ ಚಿತ್ರತಂಡವನ್ನು ಡಿ ಬಾಸ್ ದರ್ಶನ್ ಮನೆಗೆ ಆಹ್ವಾನಿ ಚಿತ್ರ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.ಕೊರೊನಾ ಆತಂಕದ ನಡುವೆಯೂ ಸಿನಿಮಾ ರಿಲೀಸ್ ಮಾಡಿದ ತಂಡದ ಧೈರ್ಯಕ್ಕೆ ಮೆಚ್ಚುಗೆ ತಿಳಿಸಿದ್ದಾರೆ.

ಭೇಟಿ ಬಗ್ಗೆ ಮಾತನಾಡಿದ ನಿರ್ದೇಶಕ ಮಂಸೋರೆ, ‘ನಮ್ಮ ‘ಆಕ್ಟ್-1978’ ಚಿತ್ರಕ್ಕೆ ದರ್ಶನ್ ಅವರು ಬಲ ತುಂಬಲು ಕೈ ಜೋಡಿಸಿದ್ದಾರೆ. ಸಿನೆಮಾ ಕುರಿತು ಉತ್ತಮವಾಗಿ ವ್ಯಕ್ತವಾಗುತ್ತಿರುವ ಪ್ರೇಕ್ಷಕರ ಅಭಿಪ್ರಾಯಗಳು ಹಾಗೂ ಮಾಧ್ಯಮ ಮಿತ್ರರ ವಿಮರ್ಶೆಗಳನ್ನು ಕೇಳಿ ದರ್ಶನ್ ಅವರು ಸಂತೋಷಗೊಂಡಿದ್ದಾರೆ ಎಂದು ತಿಳಿಸಿದರು.

ನಟ ಸಂಚಾರಿ ವಿಜಯ್, ನಿರ್ದೇಶಕ ಮಂಸೋರೆ, ಛಾಯಾಗ್ರಾಹಕ ಸತ್ಯ ಹೆಗಡೆ, ನಿರ್ಮಾಪಕ ದೇವರಾಜ್, ಬರಹಗಾರ ವೀರು ಮಲ್ಲಣ್ಣ ದರ್ಶನ್ ಉಪಚಾರ ಸ್ವೀಕರಿಸಿದರು.

From around the web

Trending Today
Featured