ನನ್ನ ಪ್ರೀತಿಯ ಸೀನಿಯರ್ ಯಾವಾಗಲು ಚಿರಸ್ಥಾಯಿ : ಅಂಬಿ ನೆನೆದ ದರ್ಶನ್

 
ನನ್ನ ಪ್ರೀತಿಯ ಸೀನಿಯರ್ ಯಾವಾಗಲು ಚಿರಸ್ಥಾಯಿ : ಅಂಬಿ ನೆನೆದ ದರ್ಶನ್

ಬೆಂಗಳೂರು: ಇಂದು ರೆಬಲ್ ಸ್ಟಾರ್ ದರ್ಶನ್ ಅವರ ಎರಡನೇ ಪುಣ್ಯ ತಿಥಿ. ಈ ವೇಳೆ ಚಿತ್ರರಂಗದ ಗಣ್ಯರು ಅಂಬರೀಶ್ ಅವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದಾರೆ. ಅಂಬರೀಶ್ ಹಿರಿಯ ಮಗನ ಹಾಗೆ ಇದ್ದ ಪ್ರೀತಿಯ ದರ್ಶನ್, 2ನೇ ವರ್ಷದ ಪುಣ್ಯಸ್ಮರಣೆ ದಿನ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ ೨ ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ ಎಂದು ಟ್ವೀಟ್ ಮಾಡುವ ಮೂಲಕ ಅಂಬಿಯನ್ನು ನೆನೆದಿದ್ದಾರೆ.

ದರ್ಶನ್ ಅವರನ್ನು ಅಂಬರೀಷ್ ದೊಡ್ಡ ಮಗನಂತೆ ನೋಡಿಕೊಳ್ಳುತ್ತಿದ್ದರು. ದರ್ಶನ್ ಸಹ ಅಂಬಿಯನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದರು. ಕೇವಲ ಮಾತಿಗೆ ಅಪ್ಪಾಜಿ ಎಂದು ಹೇಳದೆ, ಮಾತಿನಂತೆಯೇ ಅಂಬಿಗೆ ತಂದೆಯ ಸ್ಥಾನ ಕೊಟ್ಟಿದ್ದರು ದರ್ಶನ್. ಅಂಬಿ ಅಗಲಿದಾಗ ದರ್ಶನ್ ವಿದೇಶದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ವಿಷಯ ತಿಳಿದ ತಕ್ಷಣ ಮರಳಿದ ದಚ್ಚು, ಮುಂದೆ ನಿಂತು ತಮ್ಮ ಜವಾಬ್ದಾರಿ ನಿರ್ವಹಿಸಿದ್ದರು.

ಇಂದು ಅಂಬಿ ಸಮಾಧಿಗೆ ಪತ್ನಿ ಸುಮಲತಾ ಅಂಬರೀಶ್ ಬೆಳಗ್ಗೆ 9 ಗಂಟೆ ಸುಮಾರಿಗೆ ಪುಜೆ ಸಲ್ಲಿಸಿದ್ದಾರೆ. ಸುಮಲತಾ ಅಂಬರೀಶ್ ಜೊತೆ ಪುತ್ರ ಅಭಿಷೇಕ್ ಕೂಡ, ತಮ್ಮ ತಂದೆಯ ಎರಡನೇ ಪುಣ್ಯತಿಥಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇನ್ನು, ಇವರ ಜೊತೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಅಂಬಿ ಸಮಾಧಿಗೆ ಭೇಟಿ ನೀಡಿದ್ದಾರೆ.

From around the web

Trending Today
Featured